ಬಿಜೆಪಿ ಸರ್ಕಾರ ಜನತೆಗೆ ಬೂದಿ ಆಶೀರ್ವಾದ ಮಾಡಿದೆ: ಡಿ.ಕೆ.ಶಿ

ರಾಯಚೂರು: ಕೊರೊನಾದಿಂದ ಸತ್ತವರ ಮನೆಗೆ ಬಿಜೆಪಿ ನಾಯಕರು ಯಾರೂ ಹೋಗಲಿಲ್ಲ. 4 ಲಕ್ಷ ಜನ ಕೊರೊನಾಗೆ ಬಲಿಯಾಗಿದ್ದಾರೆ. ಜನರಿಗೆ ಬಿಜೆಪಿ ಸರ್ಕಾರ ಏನು ಆಶೀರ್ವಾದ ಮಾಡಿದೆ. ಜನ ಸತ್ತಿರುವ ಬೂದಿ ನೋಡಿದವಲ್ಲಾ ಇದೇನಾ ಆಶೀರ್ವಾದ. ಬಿಜೆಪಿ ಸರ್ಕಾರ ಜನರಿಗೆ ಬೂದಿ ಆಶೀರ್ವಾದ ಮಾಡಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.

ರಾಯಚೂರಿನಲ್ಲಿ ಕಲಬುರಗಿ ವಿಭಾಗೀಯ ಮಟ್ಟದ ಕಾಂಗ್ರೆಸ್ ಸಭೆ ಬಳಿಕ ಮಾತನಾಡಿದ ಅವರು, ಸರ್ಕಾರ ಔಷಧಿ, ಗೋಧಿ, ಆಸ್ಪತ್ರೆ ಬೆಡ್ ಕೊಟ್ಟು ಆಶೀರ್ವಾದ ಮಾಡಲಿಲ್ಲ. ಸಿಎಂ ಯಾಕೆ ಬದಲಾವಣೆ ಮಾಡಿದ್ದಾರೆ ಅಂತ ಬಿಜೆಪಿ ಅವರು ಹೇಳಬೆಕು. ಕೇಂದ್ರ ಆರೋಗ್ಯ ಸಚಿವರನ್ನ ಯಾಕೆ ತೆಗೆದ್ರು ಅಂತ ಬಿಜೆಪಿಯವರೇ ಹೇಳಬೇಕು. ಸಭೆಯಲ್ಲಿ ವಿಭಾಗೀಯ ಮಟ್ಟದ ನಾಯಕರಿಗೆ ಟಾರ್ಗೆಟ್ ಕೊಟ್ಟಿದ್ದೇವೆ. ಟಾರ್ಗೆಟ್ ಏನಂದ್ರೆ 75 ವರ್ಷದ ಸ್ವಾತಂತ್ರ್ಯ ಹಿನ್ನೆಲೆ ಇಡೀ ವರ್ಷ ಆಚರಣೆ ಮಾಡುವುದು. ಕಾಂಗ್ರೆಸ್ ಮಾತ್ರವಲ್ಲದೆ ಎಲ್ಲರನ್ನ ಒಳಗೊಂಡು ಕಾರ್ಯಕ್ರಮಗಳನ್ನ ರೂಪಿಸಬೇಕು. ಒಂದೊಂದು ತಿಂಗಳು ಒಂದೊಂದು ಹೆಸರಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:  ಶೋಭಾ ಕರಂದ್ಲಾಜೆ ಎದುರೇ ಸಿದ್ದರಾಮಯ್ಯಗೆ ಜೈಕಾರ ಕೂಗಿದ ವ್ಯಕ್ತಿ

 

ಅಕ್ಟೋಬರ್ ತಿಂಗಳಲ್ಲಿ ಗಾಂಧಿ ನೆನಪಲ್ಲಿ ಪ್ರತಿ ಪಂಚಾಯತಿಯಲ್ಲಿ ಸಭೆ. ನವೆಂಬರ್ ನೆಹರು ಜನ್ಮದಿನ ಹಿನ್ನೆಲೆ ಪ್ರಜಾಪ್ರಭುತ್ವ ಕುರಿತು ಜಾಗೃತಿ. ಡಿಸೆಂಬರ್ ತಿಂಗಳು ಕಾಂಗ್ರೆಸ್ ಸಂಸ್ಥಾಪನಾ ದಿನ ಹಿನ್ನೆಲೆ ಕಾರ್ಯಕ್ರಮಗಳನ್ನ ರೂಪಿಸುತ್ತಿದ್ದೇವೆ. ಎಲ್ಲಾ ಕಾರ್ಯಕರ್ತರಿಗೂ ಕೆಲಸ ಹಂಚುತ್ತಿದ್ದೇವೆ. ನಿಷ್ಕ್ರಿಯ ಇದ್ದವರು ಕೆಲಸ ಮಾಡುವವರಿಗೆ ಅವಕಾಶ ಕೊಡಬೇಕು ಅನ್ನೋ ಸಂದೇಶ ನೀಡಿದ್ದೇವೆ ಅಂತ ಡಿ.ಕೆ.ಶಿವಕುಮಾರ್ ಹೇಳಿದರು.

Comments

Leave a Reply

Your email address will not be published. Required fields are marked *