‘ನಾವು ಸೋಲಲ್ಲ’ – ಕೊರೊನಾ ವಿರುದ್ಧ ರ‍್ಯಾಪ್ ಸಾಂಗ್ ರಚಿಸಿದ ಬ್ರಾವೋ

ನವದೆಹಲಿ: ಕೊರೊನಾ ವೈರಸ್ ವಿರುದ್ಧ ಇಡೀ ಪ್ರಪಂಚವೇ ಹೋರಾಡುತ್ತಿದೆ. ಈಗ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಡಿಜೆ ಬ್ರಾವೋ ಕೊರೊನಾ ವಿರುದ್ಧ ರ‍್ಯಾಪ್ ಸಾಂಗ್ ರಚಿಸಿ ನಾವು ಸೋಲಲ್ಲ ಎಂದು ಹೇಳಿದ್ದಾರೆ.

ಕ್ರಿಕೆಟ್ ಮೈದಾದಲ್ಲಿ ಮಿಂಚಿನಂತಹ ಕ್ಯಾಚ್‍ಗಳು ಹಾಗೂ ಸೂಪರ್ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಜನರನ್ನು ರಂಜಿಸುತ್ತಿದ್ದ ಬ್ರಾವೋ, ಕೊರೊನಾ ವೈರಸ್ ಭೀತಿಯಿಂದ ಹೆದರುತ್ತಿರುವ ಜನರಿಗೆ ಮನೋಸ್ಥೈರ್ಯವನ್ನು ಹೆಚ್ಚಿಸಲು ಹಾಡು ರಚಿಸಿದ್ದಾರೆ. ಈ ಮೂಲಕ ಜನರಿಗೆ ಎಚ್ಚರಿಕೆಯಿಂದ ಇರೋಣ ಎಂಬ ಸಂದೇಶ ರವಾನಿಸಿದ್ದಾರೆ.

ನಾವೆಲ್ಲರೂ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದೇವೆ. ಆದರೆ ನಾವು ಹೆದರಬಾರದು. ಕೊರೊನಾ ವೈರಸ್ ವಿರುದ್ಧ ಮನೆಯಲ್ಲೇ ಇದ್ದು ಹೋರಾಡೋಣ. ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳೋಣ. ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ ಎಂದು ರ‍್ಯಾಪ್ ಸಾಂಗ್ ಹಾಡಿರುವ ಬ್ರಾವೋ, ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಾವು ಸೋಲಲ್ಲ ಕೊರೊನಾ ವಿರುದ್ಧ ಹೋರಾಡೋಣ. ಚಾಂಪಿಯನ್ ಬ್ರಾಂಡ್ ಎಂದು ಬರೆದುಕೊಂಡಿದ್ದಾರೆ.

https://www.instagram.com/p/B-QkCXwHjYJ/?utm_source=ig_embed&utm_campaign=embed_video_watch_again

ಕೊರೊನಾ ವೈರಸ್ ಸೋಂಕಿನಿಂದ ಮನೆಯಲ್ಲೇ ಬಂಧಿಯಾಗಿರುವ ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಕೊರೊನಾ ವಿರುದ್ಧ ಜನವರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ ಮನೆಯಲ್ಲೇ ಇರಿ, ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ನಮ್ಮ ಸುರಕ್ಷತೆಗಾಗಿ ನಾವು ಮನೆಯಲ್ಲೇ ಇರುವುದು ಒಳ್ಳೆಯದು ಎಂದು ವಿಡಿಯೋ ಮಾಡಿದ್ದರು.

ಇದರ ಜೊತೆಗೆ ನ್ಯೂಜಿಲೆಂಡ್ ಆಟಗಾರ ಹಾಗೂ ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಇಶ್ ಸೋಧಿ ಕೂಡ ಕೊರೊನಾ ವೈರಸ್ ವಿರುದ್ಧ ರ‍್ಯಾಪ್ ಸಾಂಗ್‍ವೊಂದನ್ನು ಹಾಡಿದ್ದರು. ಇದನ್ನು ರಾಜಸ್ಥಾನ್ ರಾಯಲ್ಸ್ ತಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋದಲ್ಲಿ ಸೋಧಿ ಹಲವಾರು ರ‍್ಯಾಪ್ ಸಾಂಗ್‍ಗಳನ್ನು ಜೋಡಿಸಿ ಹಾಡಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಮನೆಯಲ್ಲೇ ಇರಿ ಎಂದು ಜನರನ್ನು ಕೇಳಿಕೊಂಡಿದ್ದರು.

Comments

Leave a Reply

Your email address will not be published. Required fields are marked *