ರೈಲಿನಲ್ಲಿ ಪ್ರಯಾಣಿಕರಿಗೆ ಹಳಸಿದ ಪಲಾವ್, ಮೊಸರನ್ನ ಪೂರೈಕೆ- ಆಹಾರ ಇಲಾಖೆ ಅಧಿಕಾರಿಗಳಿಂದ ಕೇಸ್ ದಾಖಲು

ಶಿವಮೊಗ್ಗ: ರೈಲುಗಳಲ್ಲಿ ಕಳಪೆ ಆಹಾರ ಪೂರೈಕೆ ಮಾಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಪೂರಕ ಎಂಬಂತೆ ಕಳೆದ ರಾತ್ರಿ ಭದ್ರವಾತಿ ಸಮೀಪ ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲಿನಲ್ಲಿ ಹಳಸಿದ ಆಹಾರ ಪೂರೈಕೆ ಮಾಡಿದ್ದು, ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ ರೈಲಿನಲ್ಲಿ ಅರಸೀಕೆರೆ ಸಮೀಪ ಬರುತ್ತಿದ್ದಂತೆ ಫಲಾವ್ ಮತ್ತು ಮೊಸರನ್ನ ಪೂರೈಕೆಯಾಗಿದೆ. ಊಟ ಮಾಡಿದವರೆಲ್ಲಾ ಸರಿಯಿಲ್ಲ, ಹಳಸಿದೆ ಅಂತಾ ಗಲಾಟೆ ಮಾಡಿದ್ದಾರೆ. ಅಲ್ಲದೇ ಆಹಾರ ಪೂರೈಕೆ ಮಾಡಿದ ಇಬ್ಬರನ್ನ ಹಿಡಿದು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಭದ್ರಾವತಿಯ ಶ್ರೀನಿವಾಸ್ ಪೂಜಾರಿ ಎಂಬುವರು ಟೆಂಡರ್ ಪಡೆದಿದ್ದು, ಅದು ಮಿಸ್ಸಾಗಿ ಊಟದ ಕ್ರೇಟ್ ಚೇಂಜ್ ಆಗಿದೆ ಅಂತಾ ಸಬೂಬು ಹೇಳಿದ್ದಾರೆ. ಕೊನೆಗೆ ಪ್ರಯಾಣಿಕರೇ ಅವರ ವಿಡಿಯೋ ಮಾಡಿಕೊಂಡು ಭದ್ರಾವತಿಯಲ್ಲೇ ಇಳಿದು ಹೋಗಿದ್ದಾರೆ.

ವಿಷಯ ತಿಳಿದ ಶಿವಮೊಗ್ಗ ಆಹಾರ ಸುರಕ್ಷತಾ ಅಧಿಕಾರಿಗಳು ಕೇಸ್ ದಾಖಲಿಸಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

 

Comments

Leave a Reply

Your email address will not be published. Required fields are marked *