ಎಂಜಿ ರೋಡ್- ಬೈಯಪ್ಪನಹಳ್ಳಿ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ಸ್ಥಗಿತ- ಪ್ರಯಾಣಿಕರ ಪರದಾಟ

ಬೆಂಗಳೂರು: ನೇರಳೆ ಮಾರ್ಗದಲ್ಲಿ ತಾತ್ಕಾಲಿಕವಾಗಿ ಮೆಟ್ರೋ (Namma Metro) ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ಅನುಭವಿಸುತ್ತಿದ್ದಾರೆ.

ಎಂಜಿ ರೋಡ್ ನಿಂದ (MG Road) ಬೈಯಪ್ಪನಹಳ್ಳಿ (Baiyappanahalli) ಮಾರ್ಗ ಸಂಚಾರ ಬಂದ್ ಆಗಿದ್ದು, ಮೊದಲು ತಾಂತ್ರಿಕ ಸಮಸ್ಯೆ ಹಿನ್ನೆಲೆ ಎಂದು ಬಿಎಂಆರ್ ಸಿಎಲ್ ವಿಷಾದ ವ್ಯಕ್ತಪಡಿಸಿದೆ. ಜೊತೆಗೆ ಶೀಘ್ರವೇ ಬಗೆಹರಿಸುವ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು. ಇದನ್ನೂ ಓದಿ: ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ: ಮೋದಿ ಹೊಗಳಿದ ರೆಡ್ಡಿ

ಆದರೆ ಇದೀಗ ಮೆಟ್ರೋ ಪವರ್ ಡಿಸ್ಟ್ರಿಬ್ಯೂಷನ್ ನಲ್ಲಿ ಸಮಸ್ಯೆಯಾಗಿದೆ. ಅದನ್ನ ಸರಿಪಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಒಂದು ಗಂಟೆಯಿಂದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಇನ್ನೂ ಒಂದು ಗಂಟೆ ಹೆಚ್ಚಾಗುವ ಸಾಧ್ಯತೆಯಿದೆ. ಯಾವ ಕಾರಣಕ್ಕೆ ಈ ಸಮಸ್ಯೆ ಆಯ್ತು ಅಂತ ಇನ್ನೂ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಬಿಎಂಆರ್ ಸಿಎಲ್ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಹೋಯ್ಸಳ ಪೊಲೀಸರು ಪ್ರಯಾಣಿಕರಿಗೆ ಈ ಕುರಿತು ಅನೌನ್ಸ್ ಮೆಂಟ್ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆಟೋ, ಕ್ಯಾಬ್ ಗಳ ಮೂಲಕ ಜನ ಹೋಗುತ್ತಿದ್ದಾರೆ.