ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

ವಾಷಿಂಗ್ಟನ್: ಡಿಸ್ನಿ ಪ್ಲಸ್ ತನ್ನ ಸೇವೆಗಳನ್ನು ಹೊಸದಾಗಿ 50ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಾಗಿಸಲಿದೆ ಎಂದು ಬುಧವಾರ ತಿಳಿಸಿದೆ. ವರ್ಷದ ದ್ವಿತೀಯಾರ್ಧದಲ್ಲಿ ಡಿಸ್ನಿ 42 ದೇಶಗಳಲ್ಲಿ ಹಾಗೂ 11 ಪ್ರಾಂತ್ಯಗಳಲ್ಲಿ ತನ್ನ ಸೇವೆಗಳನ್ನು ಹೊಸದಾಗಿ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಡಿಸ್ನಿ ಹೊಸದಾಗಿ ಪ್ರಾರಂಭಿಸಲಿರುವ ದೇಶಗಳ ಪಟ್ಟಿ – ಅಲ್ಬೇನಿಯಾ, ಅಲ್ಜೀರಿಯಾ, ಅಂಡೋರಾ, ಬಹ್ರೇನ್, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಬಲ್ಗೇರಿಯಾ, ಕ್ರೋಯೇಷಿಯಾ, ಜೆಕಿಯಾ, ಈಜಿಪ್ಟ್, ಎಸ್ಟೋನಿಯಾ, ಗ್ರೀಸ್, ಹಂಗೇರಿ, ಇರಾಕ್, ಇಸ್ರೇಲ್, ಜೋರ್ಡಾನ್, ಕೊಸೊವೊ, ಕುವೈತ್, ಲಾಟ್ಟಿಯಾ, ಲೆಬನಾನ್, ಲಿಬಿಯಾ, ಲಿಚ್ಟೆನ್‍ಸ್ಟೈನ್, ಲಿಥುವೇನಿಯಾ, ಮಾಲ್ಟಾ, ಮಾಂಟೆನೆಗ್ರೊ, ಮೊರಾಕೊ, ಉತ್ತರ ಮ್ಯಾಸಿಡೋನಿಯಾ, ಓಮನ್, ಪ್ಯಾಲೆಸ್ಟೈನ್, ಪೋಲೆಂಡ್, ಕತಾರ್, ರೋಮೇನಿಯಾ, ಸ್ಯಾನ್ ಮರಿನೋ, ಸೌದಿ ಅರೇಬಿಯಾ, ಸೆರ್ಬಿಯಾ, ಸ್ಲೋವಾಕಿಯಾ, ಸ್ಲೋವೇನಿಯಾ, ದಕ್ಷಿಣ ಆಫ್ರಿಕಾ, ಟುನೀಶಿಯಾ, ಟರ್ಕಿ, ಯುನೈಟಡ್ ಅರಬ್ ಎಮಿರೇಟ್ಸ್, ವ್ಯಾಟಿಕನ್ ಎಮಿರೇಟ್ಸ್ ಹಾಗೂ ಯೆಮನ್ ದೇಶಗಳು ಸೇರಿವೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

ಈ ಎಲ್ಲಾ ದೇಶಗಳೊಂದಿಗೆ ಡಿಸ್ನಿ ಪ್ಲಸ್ 11 ಪ್ರಾಂತ್ಯಗಳಲ್ಲೂ ಲಭ್ಯವಾಗಲಿದೆ. ಅವುಗಳು – ಫರೋ ದ್ವೀಪಗಳು, ಫ್ರೆಂಚ್ ಪಾಲಿನೇಷ್ಯಾ, ಫ್ರೆಂಚ್ ದಕ್ಷಿಣ ಪ್ರಾಂತ್ಯಗಳು, ಸೇಂಟ್ ಪಿಯರೆ ಮತ್ತು ಮಿಕ್ವೆಲ್ ಸಾಗರೋತ್ತರ ಕಲೆಕ್ಟಿವ್, ಆಲ್ಯಾಂಡ್ ದ್ವೀಪಗಳು, ಸಿಂಟ್ ಮಾರ್ಟೆನ್, ಸ್ವಾಲ್ಬಾರ್ಡ್ ಮತ್ತು ಜಾನ್ ಮಾಯೆನ್, ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶ, ಜಿಬ್ರಾಲ್ಟರ್, ಪಿಟ್ಕೇರ್ನ್ ಹೆಲ್ನಾನ್ಸ್ ಮತ್ತು ಸ್ಟ್ರೈಟ್‍ಕೈರ್ನ್ ದ್ವೀಪಗಳು ಇವೆ. ಇದನ್ನೂ ಓದಿ: ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಚಾರ- 19 ಯೂಟ್ಯೂಬ್ ಚಾನೆಲ್ ಬಂದ್

ಪ್ರಸ್ತುತ ಡಿಸ್ನಿ ಭಾರತ, ಅಮೆರಿಕ, ಯುಎಸ್, ಕೆನಡಾ ಸೇರಿದಂತೆ ಒಟ್ಟು 64 ದೇಶಗಳಲ್ಲಿ ಲಭ್ಯವಿದೆ. ಡಿಸ್ನಿ ಪ್ಲಸ್ ಹಾಟ್‍ಸ್ಟಾರ್ ವಿಶ್ವದಾದ್ಯಂತ 118 ಮಿಲಿಯನ್(11.80 ಕೋಟಿ) ಚಂದಾದಾರರನ್ನು ಹೊಂದಿದೆ ಎಂದು ಈ ಹಿಂದೆ ವರದಿ ಮಾಡಿತ್ತು. ಡಿಸ್ನಿ ಹೊಸದಾಗಿ ಸೇವೆ ನೀಡಲಿರುವ ದೇಶಗಳಿಗೆ ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗುವ ಬಗ್ಗೆ ಸೂಚನೆ ನೀಡಿದ್ದು, ನಿಖರವಾದ ದಿನಾಂಕವನ್ನು ತಿಳಿಸಿಲ್ಲ.

Comments

Leave a Reply

Your email address will not be published. Required fields are marked *