ಸಂಪುಟದಲ್ಲಿ ಚರ್ಚಿಸಿ ಒಳ ಮೀಸಲಾತಿ ಜಾರಿಗೆ ತೀರ್ಮಾನ: ಸಿಎಂ

ಕೊಪ್ಪಳ: ಒಳ ಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್ (Supreme Court) ಹೇಳಿದ್ದು, ಈ ಬಗ್ಗೆ ಸಂಪುಟ ಸಭೆ ಹಾಗೂ ಹೈಕಮಾಂಡ್ ಜೊತೆಗೆ ಚರ್ಚಿಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಕೊಪ್ಪಳದ (Koppala) ಬಸಾಪೂರ ವಿಮಾನ ನಿಲ್ದಾಣದಲ್ಲಿ ಇಂದು ಮಾತನಾಡಿದ ಅವರು, ಶಾಸಕ ರಾಯರೆಡ್ಡಿ ಜಾತಿಗಣತಿ ವರದಿ ಜಾರಿಗೆ ಒತ್ತಾಯಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಸವರಾಜ ರಾಯರೆಡ್ಡಿ ಅವರು ನನ್ನನ್ನು ಭೇಟಿ ಮಾಡಿದ್ದು ನಿಜ. ಈ ಬಗ್ಗೆ ಹಿಂದುಳಿದ ವರ್ಗಗಳ ಇಲಾಖೆ ಸಚಿವರ ಜೊತೆಗೆ ಚರ್ಚೆ ಮಾಡುತ್ತೇನೆ. ಮುಂದಿನ ವಾರವೇ ವರದಿ ಜಾರಿ ಬಿಡುಗಡೆ ಮಾಡಬೇಕು ಎಂದು ರಾಯರೆಡ್ಡಿ ಹೇಳಿರಬಹುದು. ಆದರೆ, ವಾರದಲ್ಲಿ ಮಾಡಲು ಆಗುವುದಿಲ್ಲ. ವರದಿಯನ್ನು ಸಂಪುಟ ಸಭೆಯ ಮುಂದಿಟ್ಟು, ಒಪ್ಪಿಗೆ ಪಡೆಯಬೇಕು. ನಂತರ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಿ, ವರದಿ ಜಾರಿ ಮಾಡಬೇಕಾಗುತ್ತದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್‌ಗೆ ಬೆನ್ನು ನೋವು

ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ (G T Devegowda) ಹೇಳಿದ್ದು ಸರಿ ಇರಬಹುದು. ಅವರು ಪಕ್ಷದ ಹಿರಿಯ ಶಾಸಕರು. ಅವರು ಹೇಳಿದರೆ ಜೆಡಿಎಸ್ ಹೇಳಿದಂತೆ. ಅವರದ್ದೇ ಪಕ್ಷದ ಶಾಸಕರ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದಾರೆ ಎಂಬುದಾದರೆ ಅದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ನಾನು ಅಧಿಕಾರದಲ್ಲಿ ಇದ್ದರೆ ಬಿಜೆಪಿ- ಜೆಡಿಎಸ್ ಪಕ್ಷ ದುರ್ಬಲ ಆಗುತ್ತವೆ ಎಂಬ ಭಯ. ಅದಕ್ಕೆ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಸರ್ಕಾರಿ ನಿವಾಸ ತೊರೆದು ಆಪ್ ಸಂಸದನ ಮನೆಗೆ‌ ತೆರಳಿದ ಕೇಜ್ರಿವಾಲ್

ಸಚಿವ ಸತೀಶ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಅವರಿಬ್ಬರು ಸಚಿವರು. ನಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿದರೆ ತಪ್ಪೇನು? ಎಂದು ಪ್ರಶ್ನಿಸಿ ಊಹೆ ಮಾಡಿಕೊಂಡು ವರದಿ ಮಾಡಬೇಡಿ ಎಂದು ಮಾಧ್ಯಮಗಳ ವಿರುದ್ಧ ಸಿಡಿಮಿಡಿಗೊಂಡರು. ನನ್ನ ಯಾವುದೇ ದೆಹಲಿ (Delhi) ಪ್ರವಾಸ ನಿಗದಿ ಆಗಿಲ್ಲ. ನಾನು ಅ.27 ಮತ್ತು 28 ರಂದು ದೆಹಲಿಗೆ ಹೋಗುತ್ತಿಲ್ಲ. ಪದೇ ಪದೇ ಇಂಥ ಪ್ರಶ್ನೆ ಕೇಳಬೇಡಿ ಎಂದರು.‌ ಇದನ್ನೂ ಓದಿ: ಮೂರು ಜಿಲ್ಲೆಗಳ ಕಾಡಾನೆ ಹಾವಳಿ ತಡೆಗೆ ಭದ್ರಾ ಅಭಯಾರಣ್ಯದಲ್ಲಿ ಆನೆ ಶಿಬಿರ ಸ್ಥಾಪನೆ: ಈಶ್ವರ್ ಖಂಡ್ರೆ