– ಕಾಲಿನಿಂದಲೇ ಸಿಎಂ ಜೊತೆ ಕ್ಲಿಕ್ಕಿಸಿಕೊಂಡ ಸೆಲ್ಫಿ ವೈರಲ್
ತಿರುವನಂತಪುರಂ: ಭೀಕರ ನೆರೆಯಿಂದ ಕೇರಳ ಅಕ್ಷರಶಃ ನಲುಗಿಹೋಗಿದೆ. ನೆರೆ ಪೀಡಿತ ಪ್ರದೇಶಗಳ ಜನರ ಪಾಡು ಮೂರಾಬಟ್ಟೆಯಾಗಿದೆ. ಹೀಗಾಗಿ ಕೇರಳ ನೆರ ಸಂತ್ರಸ್ತರ ನೆರವಿಗೆ ವಿಶೇಷ ಚೇತನ ಚಿತ್ರ ಕಲಾವಿದರೊಬ್ಬರು ಸ್ವಯಃ ಪೇರಿತರಾಗಿ ಮುಂದೆ ಬಂದಿದ್ದು, ರಿಯಾಲಿಟಿ ಶೋ ಒಂದರಲ್ಲಿ ಗೆದ್ದ ಸಂಪೂರ್ಣ ಹಣವನ್ನು ಕೇರಳ ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ.
ಕೇರಳದ ಅಲತ್ತೂರಿನ ವಿಶೇಷ ಚೇತನ ಪ್ರಣವ್ ಬಾಲಸುಬ್ರಹ್ಮಣ್ಯನ್ ಅವರು ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿರುವ ಪ್ರಣವ್ ಅವರು ಕಾಲಿನಿಂದಲೇ ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡು ಸಾಕಷ್ಟು ಹೆಸರುಗಳಿಸಿದ್ದಾರೆ. ಮಂಗಳವಾರ ಕೇರಳ ಸಿಎಂ ಪಿಣರಾಯಿ ವಿಜಯ್‍ನ್ ಅವರನ್ನು ಪ್ರಣವ್ ಭೇಟಿಯಾಗಿ ಕೇರಳ ನೆರೆಸಂತ್ರಸ್ತರ ನೆರವಿಗಾಗಿ ದೇಣಿಗೆ ಚೆಕ್ ನೀಡಿದ್ದಾರೆ.
https://twitter.com/vijayanpinarayi/status/1194138212169445376
ಅಲ್ಲದೆ ಇದೇ ವೇಳೆ ಪ್ರಣವ್ ಕಾಲಿನ ಬೆರಳಿಂದಲೇ ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ವಿಶೇಷ ಚೇತನರಾಗಿದ್ದರೂ ಪ್ರಣವ್ ಬೇರೆಯವರಿಗೆ ಸಹಾಯ ಮಾಡುತ್ತಿರುವ ಗುಣ ಪಿಣರಾಯಿ ಅವರ ಮನಗೆದ್ದಿದೆ. ಹೀಗಾಗಿ ಪ್ರಣವ್ ಜೊತೆಗೆ ತಾವಿರುವ ಫೋಟೋಗಳನ್ನು ಪಿಣರಾಯಿ ಅವರು ಟ್ವೀಟ್ ಮಾಡಿ ಪ್ರಣವ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಅವರೊಂದಿಗೆ ಕಳೆದ ಕ್ಷಣದ ಬಗ್ಗೆ ಹಂಚಿಕೊಂಡಿದ್ದಾರೆ.
Great sir no words for ur kindness… great respect from Madhya Pradesh 💐
— Dipesh Chouhan (@DipeshChouhan7) November 12, 2019
ಇಂದು(ಮಂಗಳವಾರ) ಬೆಳಗ್ಗೆ ನನಗೆ ಹೃದಯಸ್ಪರ್ಶಿ ಅನುಭವವಾಯಿತು. ಅಲತ್ತೂರಿನ ಚಿತ್ರ ಕಲಾವಿದ ಪ್ರಣವ್ ಕಚೇರಿಗೆ ಆಗಮಿಸಿ ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಹಾಗೆಯೇ ವಿಶೇಷ ಚೇತನರಿಗೆ ಕೇರಳ ಸರ್ಕಾರ ನೀಡುತ್ತಿರುವ ಸಹಕಾರಕ್ಕೆ ಪ್ರಣವ್ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಬರೆದುಕೊಂಡು ಪ್ರಣವ್ ಜೊತೆಗಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
https://twitter.com/vinesh2112/status/1194290285917851649
ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪ್ರಣವ್ ಸಹಾಯ ಗುಣಕ್ಕೆ ನೆಟ್ಟಿಗರು ಮನಸೋತ್ತಿದ್ದಾರೆ. ಎಲ್ಲವೂ ಸರಿಯಾಗಿದ್ದರು ಜನರು ಇನ್ನೊಬ್ಬರ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಅಂತಹದರಲ್ಲಿ ವಿಶೇಷ ಚೇತನರಾಗಿದ್ದರೂ ಬೇರೊಬ್ಬರ ನೆರವಿಗೆ ಬಂದ ಪ್ರಣವ್ ಅವರ ಗುಣವನ್ನು ನಿಜಕ್ಕೂ ಮೆಚ್ಚಲೇಬೇಕು. ನೆರೆ ಪೀಡಿತರಿಗೆ ನೆರವಾದ ಪ್ರಣವ್ ಅವರಿಗೆ ಸಲಾಂ ಎಂದು ಗೌರವ ಸಲ್ಲಿಸಿದ್ದಾರೆ.
Royal Sault to you sir. You are such wonderful person. God bless you and give you good health.
— anand_raj (@anandhwilliams) November 12, 2019

Leave a Reply