ಹಸೆಮಣೆ ಏರುವ ಕೆಲವೇ ನಿಮಿಷಗಳ ಹಿಂದೆ ಭಾವಿಪತ್ನಿ ನಯನತಾರಾ ಜೊತೆಗಿನ ರಹಸ್ಯ ಹಂಚಿಕೊಂಡ ನಿರ್ದೇಶಕ ವಿಘ್ನೇಶ್ ಶಿವನ್

ಕೆಲವೇ ನಿಮಿಷಗಳಲ್ಲಿ ತಮಿಳಿನ ಖ್ಯಾತ ಜೋಡಿ ವಿಘ್ನೇಶ್ ಶಿವನ್ ಮತ್ತು ಲೇಡಿ ಸೂಪರ್ ಸ್ಟಾರ್ ನಯನತಾರಾ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಪ್ರಣಯ ಪಕ್ಷಿಗಳ ಮದುವೆಗೆ ಮದುವಣಗಿತ್ತಿಯಂತೆಯೇ ರೆಸಾರ್ಟ್ ಕೂಡ ಸಿಂಗಾರಗೊಂಡಿದೆ. ಈ ಹೊತ್ತಿನಲ್ಲಿ ವಿಘ್ನೇಶ್ ಶಿವನ್, ಇನ್ಸ್ಟಾದಲ್ಲಿ ಭಾವಿ ಪತ್ನಿ ನಯನತಾರಾ ಜೊತೆಗಿನ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅಲ್ಲದೇ, ಹಲವು ಸಂಗತಿಗಳನ್ನು ಅವರು ಬರೆದುಕೊಂಡಿದ್ದಾರೆ.

ಫೋಟೋ ಜೊತೆ ತಮ್ಮ ಬದುಕಿಗೆ ನೆರವಾದವರಿಗೆ ಧನ್ಯವಾದಗಳನ್ನೂ ಅವರು ಹೇಳಿದ್ದಾರೆ. ಜೀವನದಲ್ಲಿ ಸಂತಸದ ತಂದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡು, ಬದುಕಿನ ಪ್ರೀತಿಯೇ ಆಗಿರುವ ನಯನತಾರಾಗೆ ಇದೆಲ್ಲವೂ ಅರ್ಪಣೆ ಎಂದು ಬರೆದುಕೊಂಡಿದ್ದಾರೆ. ಅಧಿಕೃತವಾಗಿ ತಾವು ಪ್ರೀತಿಸುತ್ತಿದ್ದ ರಹಸ್ಯವನ್ನೂ ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಕಾಂತಾರ’ ರಿಷಬ್ ಶೆಟ್ಟಿಗೆ ಸಪ್ತಮಿ ಗೌಡ ನಾಯಕಿ

ಅಂದಹಾಗೆ ಇಂದು ಈ ಜೋಡಿಯು  ಚೆನ್ನೈನ ಮಹಾಬಲಿಪುರಂನಲ್ಲಿ ಮದುವೆಯಾಗಲಿದ್ದು, ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್, ರಜನಿಕಾಂತ್, ಕಮಲ್ ಹಾಸನ್, ಸಮಂತಾ ಸೇರಿದಂತೆ ಅನೇಕ ಸಿಲಿಬ್ರಿಟಿಗಳು ಈ ಮದುವೆಗೆ ಹಾಜರಿರಲಿದ್ದಾರೆ. ಈ ಮದುವೆಯ ವಿಡಿಯೋವನ್ನು ಖಾಸಗಿ ಓಟಿಟಿಗೆ ಮಾರಿಕೊಂಡಿದ್ದು, ಶೂಟಿಂಗ್ ಹೊಣೆಯನ್ನು ನಿರ್ದೇಶಕ ಗೌತಮ್ ಮೆನನ್ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *