‘ರಾಬರ್ಟ್’ನಲ್ಲಿ ದರ್ಶನ್‍ಗೆ ಭದ್ರಾವತಿ ಹುಡ್ಗಿ ಜೋಡಿ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ರಾಬರ್ಟ್’ ಸಿನಿಮಾ ನಾಯಕಿ ವಿಚಾರದಲ್ಲಿ ಭಾರೀ ಸದ್ದು ಮಾಡಿತ್ತು. ಅಭಿಮಾನಿಗಳಿಗೆ ನೆಚ್ಚಿನ ನಟ ದರ್ಶನ್‍ಗೆ ಜೋಡಿ ಯಾರಾಗುತ್ತಾರೆ ಎಂಬ ಕುತೂಹಲವಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ನಿರ್ದೇಶಕ ತರುಣ್ ಸುಧೀರ್ ಅವರು ನಾಯಕಿ ಯಾರೆಂದು ಅಧಿಕೃತವಾಗಿ ಫೋಷಣೆ ಮಾಡಿದ್ದಾರೆ.

‘ರಾಬರ್ಟ್’ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ನಟಿ ಆಶಾ ಭಟ್ ಆಯ್ಕೆಯಾಗಿದ್ದಾರೆ. ಇಂದು ಬೆಳಗ್ಗೆ ತರುಣ್ ಸುಧೀರ್ ಅವರು ‘ರಾಬರ್ಟ್’ ಸಿನಿಮಾದಲ್ಲಿ ನಾಯಕಿ ಯಾರು ಎಂದು ಸಂಜೆ 4.02 ಗಂಟೆಗೆ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಈಗ ಅದೇ ರೀತಿ ಅವರ ಫೋಟೋ ಸಮೇತ ನಾಯಕಿಯ ಬಗ್ಗೆ ರಿವೀಲ್ ಮಾಡಿದ್ದಾರೆ.

ತರುಣ್ ಸುಧೀರ್ ಈ ಬಗ್ಗೆ “ನಿಮ್ಮೆಲ್ಲರಿಗೂ ದೊಡ್ಡ ಸರ್ಪ್ರೈಸ್, ನಮ್ಮ ಕನ್ನಡತಿ, ಮಿಸ್‍ಸೂಪರ್ ನ್ಯಾಷನಲ್ ಆಗಿದ್ದ ಆಶಾ ಭಟ್ ‘ರಾಬರ್ಟ್’ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ” ಎಂದು ಟ್ವೀಟ್ ಮಾಡಿ ಅವರ ಫೋಟೋ ಸಮೇತ ಸ್ವಾಗತಿಸಿದ್ದಾರೆ.

ಆಶಾ ಭಟ್ ಯಾರು?
ಆಶಾ ಭಟ್ ಮೂಲತಃ ಕರ್ನಾಕಟದ ಭದ್ರಾವತಿಯವರಾಗಿದ್ದಾರೆ. 2014ರಲ್ಲಿ ಮಿಸ್‍ಸೂಪರ್ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಇವರು ಎಲೆಕ್ಟ್ರಾನಿಕ್ಸ್ ನಲ್ಲಿ ಎಂಜಿನಿಯರ್ ಪದವೀಧರೆಯಾಗಿದ್ದಾರೆ. ಮೊದಲಿಗೆ ಆಶಾ ಭಟ್ ರೂಪದರ್ಶಿಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಬಾಲಿವುಡ್ ಮತ್ತು ಬಾಲಿವುಡ್‍ನಲ್ಲಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ‘ರಾಬರ್ಟ್’ ಸಿನಿಮಾದ ಮೂಲಕ ಕನ್ನಡತಿಯೇ ಸ್ಯಾಂಡಲ್‍ವುಡ್‍ಗೆ ಬರುತ್ತಿದ್ದಾರೆ.

ಈ ಹಿಂದೆ ನಟಿ ಮೆಹರೀನ್ ಪಿರ್ಜಾದಾ ‘ರಾಬರ್ಟ್’ ಸಿನಿಮಾಗಾಗಿ ಬರುವುದು ಬಹುತೇಕ ಖಚಿತವಾಗಿತ್ತು. ಆದರೆ ಈಗ ಆಶಾ ಭಟ್ ಅವರನ್ನು ಚಿತ್ರತಂಡ ಪೈನಲ್ ಮಾಡಿದೆ.

ಸದ್ಯಕ್ಕೆ ‘ರಾಬರ್ಟ್’ ಸಿನಿಮಾ ಸ್ವಲ್ಪ ಬ್ರೇಕ್ ತೆಗೆದುಕೊಂಡು ಶೂಟಿಂಗ್ ನಿಲ್ಲಿಸಿದೆ. ಈ ಬಗ್ಗೆ ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದ ನಿರ್ದೇಶಕ ತರುಣ್ ಸುಧೀರ್, ರಾಬರ್ಟ್ ಸಿನಿಮಾ ಮಾಹಿತಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಕ್ಷಮಿಸಬೇಕು. ಈಗಾಗಲೇ ‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನವಾಗುತ್ತಿದೆ. ಬೆನ್ನಲ್ಲೇ ‘ಒಡೆಯ’ ಕೂಡ ರಿಲೀಸ್ ಆಗಲು ಸಿದ್ಧವಾಗಿದೆ. ಹೀಗಾಗಿ ‘ರಾಬರ್ಟ್’ ಚಿತ್ರವನ್ನು ಕೆಲ ದಿನಗಳ ಕಾಲ ನಿಲ್ಲಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಕೆಲವೇ ದಿನಗಳಲ್ಲಿ ಬಿಗ್ ನ್ಯೂಸ್‍ನೊಂದಿಗೆ ವಾಪಸ್ ಬರುವುದಾಗಿಯೂ ತಿಳಿಸಿದ್ದರು.

Comments

Leave a Reply

Your email address will not be published. Required fields are marked *