ಪಾಕ್ ಶಾದ್ಮನ್ ಚೌಕದ ಫೋಟೋ ಪ್ರಕಟಿಸಿ, ಈಗ ಹೇಗಿದೆ ಅನ್ನೋದನ್ನು ತಿಳಿಸಿದ್ರು ರಾಜಮೌಳಿ

ಹೈದರಾಬಾದ್: ನಿರ್ದೇಶಕ ರಾಜಮೌಳಿ ಪ್ರತಿ ಬಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಂಶಗಳು ಅಭಿಮಾನಿಗಳಲ್ಲಿ ಕುತೂಹಲವನ್ನು ಉಂಟು ಮಾಡುತ್ತವೆ. ಈ ಬಾರಿ ರಾಜಮೌಳಿ ಫೋಟೋವೊಂದನ್ನು ಟ್ವೀಟ್ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲವನ್ನು ಉಂಟು ಮಾಡಿದೆ.

ಅಂದ ಹಾಗೇ ರಾಜಮೌಳಿ ಪಾಕಿಸ್ತಾನದ ಲಾಹೋರ್ ನಗರದ ಶಾದ್ಮನ್ ಚೌಕದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇಲ್ಲಿಯೇ ಭಾರತ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರನ್ನು ಬ್ರೀಟಿಷರು ಗಲ್ಲಿಗೇರಿಸಿದ್ದರು ಎಂದು ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಅಂತರಾಷ್ಟ್ರೀಯ ಚಲನಚಿತ್ರ ಪ್ರದರ್ಶನಕ್ಕೆ ಎಂದು ಪಾಕಿಸ್ತಾನದ ಕರಾಚಿಗೆ ತೆರಳಿದ್ದ ರಾಜಮೌಳಿ ಲಾಹೋರ್ ಮತ್ತು ಇಸ್ಲಾಮಾಬಾದ್ ನಗರಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಲಾಹೋರ್ ನ ಈ ಪ್ರದೇಶದೊಂದಿಗೆ ಭಾರತ ಹೊಂದಿರುವ ಸಂಬಂಧ ಮಹತ್ವ ಅರಿತು ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಈ ಪ್ರದೇಶದ ಮಹತ್ವ ಸಾರುವ ಯಾವ ಗುರುತು ಇಲ್ಲ ಎಂದು ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ತೆರಳುವ ಮುನ್ನ ರಾಜಮೌಳಿ ಟ್ವೀಟ್ ಮಾಡಿ, ಬಾಹುಬಲಿ ಸಿನಿಮಾ ನನಗೆ ಸಾಕಷ್ಟು ಅವಕಾಶಗಳನ್ನ ತಂದುಕೊಟ್ಟಿದೆ. ಇದರಿಂದ ನಾನು ಹಲವಾರು ದೇಶಗಳನ್ನ ಸುತ್ತಿದ್ದೇನೆ. ಬಾಹುಬಲಿಯಿಂದಾಗಿ ಪಾಕಿಸ್ತಾನಕ್ಕೆ ಬಂದಿರುವುದಕ್ಕೆ ಬಹಳ ಉತ್ಸಾಹದಿಂದ್ದಿದೇನೆ. ನನ್ನನ್ನು ಆಹ್ವಾನಿಸಿರುವ ಪಾಕಿಸ್ತಾನದ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೃದಯಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *