‘ಅಕಟಕಟ’ ಎನ್ನುತ್ತ ಹೊಸತಂಡದೊಂದಿಗೆ ಮತ್ತೆ ಬಂದ್ರು ನಿರ್ದೇಶಕ ನಾಗರಾಜ್ ಸೋಮಯಾಜಿ

ಸಂಚಾರಿ ರಂಗಭೂಮಿಯಲ್ಲಿ ಪಳಗಿ ತಮ್ಮದೇ ಆದ ರಂಗತಂಡ ಕಟ್ಟಿಕೊಂಡು ತಮ್ಮ ಪ್ರತಿಭೆ ಓರೆಗೆ ಹಚ್ಚುತ್ತ ಗಮನ ಸೆಳೆಯುತ್ತಿರುವವರು ನಿರ್ದೇಶಕ ನಾಗರಾಜ್ ಸೋಮಯಾಜಿ. ದಿ ಬೆಸ್ಟ್ ಆಕ್ಟರ್ ಟೆಲಿ ಫಿಲಂ ಮೂಲಕ ಸಖತ್ ಸಂಚಲನ ಸೃಷ್ಟಿಸಿರುವ ಇವರು ತಮ್ಮ ಕೆಲಸದ ಗುಣಮಟ್ಟವನ್ನು ತೋರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಿರ್ಮಾಪಕರಾಗಿಯೂ ಪಳಗಿರುವ ಇವರು ಇದೀಗ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನದತ್ತ  ತೊಡಗಿಕೊಂಡಿದ್ದಾರೆ. ಅಂದ್ಹಾಗೆ ನಾಗರಾಜ್ ಸೋಮಯಾಜಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರದ ಹೆಸರು ‘ಅಕಟಕಟ’.

‘ಅಕಟಕಟ’ ಟೈಟಲ್ ಕೇಳಿದಾಕ್ಷಣ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಈ ಮೊದಲೇ ಕೇಳಿಬಂದಿತ್ತಲ್ವಾ? ಲೂಸ್ ಮಾದ ಯೋಗಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಸಿನಿಮಾ ಇದಲ್ಲವೇ.? ಎಂಬ ಪ್ರಶ್ನೆಗಳು ಮೂಡಿಬರುತ್ತವೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ನಾಗರಾಜ್ ಸೋಮಯಾಜಿ ಲೂಸ್ ಮಾದ ಯೋಗಿಗೆ ಸಿನಿಮಾ ಡೈರೆಕ್ಟ್ ಮಾಡಬೇಕಿತ್ತು. ಆದ್ರೆ ಇದೆಲ್ಲ ಈಗ ಹಳೆಯ ಸುದ್ದಿ. ಹಾಗೆಂದು ಅಕಟಕಟ ಪ್ರಾಜೆಕ್ಟ್ ನಿಂತಿಲ್ಲ. ಇದೀಗ ಹೊರಬಿದ್ದಿರುವ ಹೊಸ ಸುದ್ದಿಯಂದ್ರೆ ನಾಗರಾಜ್ ಸೋಮಯಾಜಿ ಅಕಟಕಟ ಸಿನಿಮಾ ಮೂಲಕ ಹೊಸಮುಖವನ್ನು ನಾಯಕ ನಟನಾಗಿ ಪರಿಚಯಿಸುತ್ತಿದ್ದಾರೆ. ಆದ್ರೆ ಆ ನಟ ಯಾರು ಅನ್ನೋದಕ್ಕೆ ಉತ್ತರ ಜನವರಿ 14ಕ್ಕೆ ಸಿಗಲಿದೆ.

‘ಅಕಟಕಟ’ ಸಿನಿಮಾ ಸಬ್ಜೆಕ್ಟ್ ನೊಂದಿಗೆ ಮತ್ತೆ ಬಂದಿರುವ ನಿರ್ದೇಶಕರು ಚಿತ್ರದ ನಾಯಕ ನಟ ಯಾರು, ಚಿತ್ರತಂಡದಲ್ಲಿ ಯಾರ‍್ಯಾರು ಇರ್ತಾರೆ, ನಿರ್ಮಾಪಕರು ಯಾರು ಇದೆಲ್ಲವನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಜನವರಿ 14ಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದು ಅಂದೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದ್ದು, ಜನವರಿ 14ರ ಸಂಕ್ರಾಂತಿ ಹಬ್ಬದಂದು ಅಕಟಕಟ ಚಿತ್ರಕ್ಕೆ ಹೊಸ ಆರಂಭ ಸಿಗಲಿದೆ.

Comments

Leave a Reply

Your email address will not be published. Required fields are marked *