ಕೊನೆಗೂ ಘೋಷಣೆಯಾಯ್ತು ಶಿವಣ್ಣ ಜೊತೆ ಹೇಮಂತ್ ರಾವ್ ಸಿನಿಮಾ

‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ (Hemanth Rao) ಮುಂದಿನ ಚಿತ್ರದ ಬಗ್ಗೆ ಅಪ್‌ಡೇಡ್ ಸಿಕ್ಕಿದೆ. ಪ್ರಿಯಾ-ಮನು ಕಥೆ ಹೇಳಿ ಗೆದ್ದಿದ್ದ ಹೇಮಂತ್ ರಾವ್ ಇದೀಗ ಶಿವರಾಜ್‌ಕುಮಾರ್ (Shivarajkumar) ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗ ಚಿತ್ರತಂಡ ಕಡೆಯಿಂದ ಅಧಿಕೃತ ಅಪ್‌ಡೇಟ್ ಸಿಕ್ಕಿದೆ. ಇದನ್ನೂ ಓದಿ:ಲವ್ ಸೆಲೆಬ್ರೇಷನ್‌ಗೆ ಗೊಂಬೆಯಂತೆ ರೆಡಿಯಾದ ರಾಧಿಕಾ ಪಂಡಿತ್

ಹೇಮಂತ್ ರಾವ್ ಅವರು ಶಿವಣ್ಣ ಮತ್ತು ಈ ಚಿತ್ರದ ನಿರ್ಮಾಪಕ ವೈಶಾಖ್ ಜೆ ಗೌಡ ಜೊತೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋ ಶೇರ್ ಮಾಡಿ ಸಿನಿಮಾ ಬಗ್ಗೆ ಅಧಿಕೃತ ಅಪ್‌ಡೇಟ್ ನೀಡಿದ್ದಾರೆ. ಶಿವಣ್ಣ ಜೊತೆ ಸಿನಿಮಾ ಮಾಡುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ಕವಲುದಾರಿ ನಿರ್ದೇಶಕ ಹೇಮಂತ್ ರಾವ್ ಅವರು ತಮ್ಮ ಮುಂದಿನ ಚಿತ್ರಕ್ಕೆ ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಶಿವಣ್ಣ ಕಥೆ ಕೇಳಿ ಥ್ರಿಲ್ ಆಗಿ ಸಿನಿಮಾ ಮಾಡಲು ಒಪ್ಪಿಗೆ ನೀಡಿದ್ದಾರೆ. ಶಿವಣ್ಣ ಮತ್ತು ಹೇಮಂತ್ ರಾವ್ ಕಾಂಬೋದಲ್ಲಿ ಒಂದು ವಿಭಿನ್ನ ಸಿನಿಮಾ ಮೂಡಿ ಬರಲಿದೆ.

 

View this post on Instagram

 

A post shared by Vaishak J Films (@vaishak_j_films)

‘ಜೈಲರ್’ ಸಕ್ಸಸ್ ನಂತರ ಶಿವಣ್ಣ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಭೈರತಿ ರಣಗಲ್, ಕರಟಕ ಧಮನಕ, ಘೋಸ್ಟ್ 2, ರಾಮ್ ಚರಣ್ ಜೊತೆಗಿನ ಹೊಸ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್‌ಗಳ ನಡುವೆ ಹೇಮಂತ್ ರಾವ್ ಜೊತೆ ಸಿನಿಮಾ ಮಾಡಬೇಕಿದೆ.

ಹೇಮಂತ್ ರಾವ್ ನಿರ್ದೇಶನದ ಸಿನಿಮಾಗಳು ಮೋಡಿ ಮಾಡ್ತಿವೆ. ಹೊಸ ಬಗೆಯ ಕಥೆಗಳನ್ನು ತೆರೆಗೆ ತರಲು ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ತಿದ್ದಾರೆ.