ಬಾಲಿವುಡ್ ಗೆ ನಿರ್ದೇಶಕ ಹರಿಸಂತು ಎಂಟ್ರಿ : ಜುಲೈನಿಂದ ಲಂಡನ್ ನಲ್ಲಿ ಶೂಟಿಂಗ್

ಕ್ಷಿಣ ಭಾರತದ ಸಿನಿಮಾ ಮೇಕರ್ ಗಳ  ಕಥಾವಸ್ತು, ಮೇಕಿಂಗ್ ಶೈಲಿ, ಭಾರತೀಯ ಚಿತ್ರರಂಗವನ್ನ ಬೆರಗುಳೊಸ್ತಿದೆ, ಇಂತಹದೊಂದು ಪರ್ವ ಈಗ ಭಾರತೀಯ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಆವರಿಸಿದೆ. ಇವತ್ತಿಗೆ ಸೌತ್ ಸಿನಿಮಾಗಳಿಂದ ಸ್ಫೂರ್ತಿಗೊಳ್ತಿದೆ ಬಾಲಿವುಡ್. ರಿಮೇಕ್ ಮಾಡೋದಕ್ಕೆ ಮುಗಿಬಿದಿದೆ. ದಕ್ಷಿಣದ ಸಿನಿಮಾಗಳ ಡಬ್ಬಿಂಗ್ ವರ್ಶನ್ ಗೆ ಭಾರಿ ಬೇಡಿಕೆ ಶುರುವಾಗಿದೆ.

ದಕ್ಷಿಣ ಭಾರತದ ಸಿನಿಮಾ ಮೇಕರ್ ಗಳ ಮೇಕಿಂಗ್ ಶೈಲಿ ಬಾಲಿವುಡ್ ಮಂದಿಯ ನಿದ್ದೆ ಗೆಡೆಸಿದೆ.  ಬಾಹುಬಲಿ, ಕೆ.ಜಿ.ಎಫ್, ಪುಷ್ಪ,ಆರ್,ಆರ್.ಆರ್ ಅಂತ ಸಿನಿಮಾಗಳು ಸಂಚಲ ಸೃಷ್ಟಿಸಿವೆ. ಎಸ್ .ಎಸ್ ರಾಜಮೌಳಿ, ಪ್ರಶಾಂತ್ ನೀಲ್ ಅಂತ ನಿರ್ದೇಶಕರು, ಸಿನಿಮಾ ಅನ್ನೋದು ಭಾಷೆಗಳನ್ನ ಮೀರಿದ ಮಾಧ್ಯಮ ಅದು ಎಲ್ಲಾ ಕಡೆಯೂ ಸಲ್ಲುವಂತಹದ್ದು ಅನ್ನೋದನ್ನ ಸಾರಿ ಹೇಳಿದ್ದಾರೆ.  ಇದನ್ನೂ ಓದಿ: ಪೃಥ್ವಿ ಅಂಬರ್ ಮತ್ತು ಪ್ರಮೋದ್ ಕಾಂಬಿನೇಷನ್ ಚಿತ್ರಕ್ಕೆ ಚಾಲನೆ

ಇಂತಹ ಹೊತ್ತಲ್ಲೇ ಕನ್ನಡದ ಖ್ಯಾತ ನಿರ್ದೇಶಕ, ಹಾಂಟಿಂಗ್ ಲವ್ ಸ್ಟೋರಿಗಳ ಫಿಲಂ ಮೇಕರ್ ಹರಿ ಸಂತು, ನೇರವಾಗಿ ಬಾಲಿವುಡ್ ನಲ್ಲಿ ಸಿನಿಮಾ ಮಾಡೋ ಅವಕಾಶ ಪಡೆದಿದ್ದಾರೆ, ದಶಕಗಳ ಹಿಂದೆ ಕನ್ನಡದ ಕೆಲವು ಹಿರಿಯ ನಿರ್ದೇಶಕರು  ಹಿಂದಿ ಸಿನಿಮಾ ಮಾಡಿದ್ದನ್ನ ಬಿಟ್ರೆ, ಇದೀಗ ವರ್ಷಗಳ  ನಂತ್ರ ಹರಿ ಸಂತು ಆ ಸಾಲಿಗೆ ಸೇರ್ತಿದ್ದಾರೆ.

ಲವ್ ಜಾನರ್ ಸಿನಿಮಾಗಳ ನಿಪುಣ ಹರಿಸಂತಚು ಚೊಚ್ಚಲ ಬಾಲಿವುಡ್ ಚಿತ್ರಕ್ಕೆ ಲವ್ ಸ್ಟೋರಿಯನ್ನೇ ಆಯ್ಕೆ ಮಾಡಿಕೊಂಡಿದ್ದು, ಚಿತ್ರಕ್ಕೆ ಪಪ್ಪಿ ಲವ್ ಅನ್ನೋ ಮುದ್ದಾದ ಟೈಟಲ್ ನ ಇಟ್ಟಿದ್ದಾರೆ. ವೆಬ್ ಸೀರಿಸ್ ಗಳಿಂದ ಖ್ಯಾತಿ ಗಳಿಸಿರೋ ತನುಜ್ ವಿರ್ವಾನಿ, ತ್ರಿಧಾ ಚೌಧರಿ, ಸಪ್ನಪಬ್ಬಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದು, ನಿಕೇತ್ ಪಾಂಡೆ  ಬರವಣಿಗೆ ಚಿತ್ರಕ್ಕಿರಲಿದ್ದು, ರಾಜಾರಾಂ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ:ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು

ಭುವನ್ ಮೂವೀಸ್ ಸುರೇಶ್ ಹಾಗೂ ಪದ್ಮಾವತಿ ಪಿಚ್ಚರ್ಸ್ ಅವಿನಾಶ್ ಡ್ಯಾನಿಯಲ್ ಚಾರ್ಲ್ಸ್ ಯುಕೆ ಮೂಲಕದ ಬ್ಲೂ ಬ್ಲಿಂಗ್ ಪ್ರೊಡಕ್ಷನ್ಸ್ ನ ವಿಪುಲ್ ಶರ್ಮಾ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ, ಜುಲೈ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದ್ದು, ಯುಕೆ ಲಂಡನ್ ನಲ್ಲೇ ಸಂಪೂರ್ಣ ಚಿತ್ರೀಕರಣ ನಡೆಯುತ್ತಿರೋದು ವಿಶೇಷ.

Live Tv

Comments

Leave a Reply

Your email address will not be published. Required fields are marked *