ನಾವು ಗಂಡಸರು ಮಾತಾಡಲು ಶುರು ಮಾಡಿದ್ರೆ, ಅವ್ರೆಲ್ಲಾ ಆತ್ಮಹತ್ಯೆ ಮಾಡ್ಕೋಬೇಕಾಗುತ್ತೆ: ಗುರುಪ್ರಸಾದ್

ಬೆಂಗಳೂರು: ಕೆಲವರು ಮೀಟೂ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ಪತಿವ್ರತೆಯವರಂತೆ ಪೋಸ್ ಕೊಡಲು ಹೊರಟ್ಟಿದ್ದಾರೆ. ನಾವು ಗಂಡಸರು ಮಾತಾಡಲು ಶುರು ಮಾಡಿದರೆ, ಅವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ‘ಮಠ’ ಚಿತ್ರದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಮೀಟೂ ವೇದಿಕೆ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

‘ಕುಷ್ಕಾ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪ್ರಸಾದ್ ಅವರು, ಇಬ್ಬರು ತಮ್ಮ ಪತಿ, ಅತ್ತೆ, ಮಾವನ ಎದುರಿಗೆ ತಾವು ಪತಿವ್ರತೆಯರು ಅಂತ ಸಾಬೀತುಪಡಿಸಲು ಹೊರಟ್ಟಿದ್ದಾರೆ. ಯಾವಾಗಲೋ ಆಗಿದ್ದನ್ನು ಈಗ ಪ್ರತಿಕ್ರಿಯಿಸುವುದು ಸರಿಯಲ್ಲ. ಅವಕಾಶ ಸಿಗುವಾಗ ಹಾಗೂ ಕೆಲಸ ಮಾಡುವಾಗ ಸುಮ್ಮನಿದ್ದು, ಎರಡು ವರ್ಷಗಳ ನಂತರ ಮಾತನಾಡುವುದು ಸರಿಯಲ್ಲ ಎಂದು ಗುಡುಗಿದರು.

ನಟಿ ಸಂಗೀತಾ ಭಟ್ ನೀಡಿರುವ ಹೇಳಿಕೆಗೂ ನನಗೂ ಸಂಬಂಧವಿಲ್ಲ. ಎರಡನೇ ಸಲ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿಯೇ ಎಲ್ಲಾ ಹೇಳಿದ್ದೀವಿ. ಬೆನ್ನು ತೋರಿಸುವ ಸೀನ್ ಶೂಟ್ ಮಾಡುವಾಗ ನನ್ನ ಹೆಂಡತಿ ಮತ್ತು ಮಗಳು ಅಲ್ಲೇ ಇದ್ದರು. ಯಾವುದೇ ರೀತಿಯ ಮುಜುಗರ ಆಗುವಂತಹ ಸನ್ನಿವೇಶ ಅಂದು ಆಗಿರಲಿಲ್ಲ ಎಂದು ಹೇಳಿದರು.

ಸಂಗೀತಾ ಮೀಟೂ ಆರೋಪ ಮಾಡುವಾಗ ನಾನು ಯಾರನ್ನು ಉಲ್ಲೇಖಿಸಿ ಈ ಪೋಸ್ಟ್ ಹಾಕಿದ್ದೇನೆ ಎನ್ನುವುದನ್ನು ಹೇಳಲಿಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ನಾನ್ಯಾಕೆ ಪ್ರತಿಕ್ರಿಯಿಸಲಿ. ಅವಕಾಶ ಬೇಕಿದ್ದಾಗ ಯಾವ ರೀತಿ ಇರುತ್ತಾರೆ ಹಾಗೂ ಬೆಳೆದಾಗ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ನಾನು ನೋಡಿದ್ದೇನೆ. ದೊಡ್ಡ ದೊಡ್ಡ ನಟಿಯರ ಜೊತೆಗೂ ನಾನು ಕೆಲಸ ಮಾಡಿದ್ದೇನೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *