ಮಠ ಗುರುಪ್ರಸಾದ್ ಈಗ ‘ಕುಷ್ಕ’ ಹೀರೋ!

ಬೆಂಗಳೂರು: ಮೊನ್ನೆಯಷ್ಟೇ ಮೀ ಟೂ ಬಗ್ಗೆ ಮಾತಾಡಿ ವಿವಾದವೊಂದರ ಕೇಂದ್ರ ಬಿಂದುವಾಗಿದ್ದವರು ನಿರ್ದೇಶಕ ಗುರುಪ್ರಸಾದ್. ಅದೇ ಸಂದರ್ಭದಲ್ಲಿ ಅವರು ಮೀ ಟೂ ಅಂತಲೇ ಚಿತ್ರ ಮಾಡಿ ಅದರಲ್ಲಿ ತಾನೇ ಹೀರೋ ಆಗೋದಾಗಿಯೂ ಹೇಳಿಕೊಂಡಿದ್ದರು. ಆದರೆ ಅದಕ್ಕೂ ಮುಂಚೆಯೇ ಅವರು ಕುಷ್ಕ ಎಂಬ ಚಿತ್ರದ ಮೂಲಕ ಹೀರೋ ಆಗಿ ಅವತರಿಸಿದ್ದಾರೆ.

ಈ ಹಿಂದೆ ಹೀಗೊಂದ್ ದಿನ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕ್ರಮ್ ಯೋಗನಾಥ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರಂತೆ. ಈ ಚಿತ್ರದ ಕಥೆಯನ್ನು ಮೆಚ್ಚಿಕೊಂಡೇ ನಿರ್ದೇಶಕರಾಗಿದ್ದ ಗುರುಪ್ರಸಾದ್ ನಾಯಕನಾಗಲು ಮನಸು ಮಾಡಿದ್ದಾರಂತೆ.

ಈ ಚಿತ್ರಕ್ಕೆ ಈ ಹಿಂದಿನಿಂದಲೇ ಸದ್ದಿಲ್ಲದೇ ತಯಾರಿ ನಡೆದಿತ್ತು. ಇದೀಗ ಈ ಚಿತ್ರಕ್ಕೆ ಬೇಕಾದ ಲುಕ್ಕಿನಲ್ಲಿ ಗುರು ಪ್ರಸಾದ್ ಅವರ ಫೋಟೋಶೂಟ್ ಕೂಡಾ ನಡೆದಿದೆಯಂತೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಈವರೆಗೆ ಗುರುತಿಸಿಕೊಂಡಿದ್ದವರು ಗುರುಪ್ರಸಾದ್. ಇದೀಗ ಅವರು ಏಕಾಏಕಿ ನಟನೆಗಿಳಿದು ನಾಯಕರಾಗಿದ್ದಾರೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *