‘ಬ್ರಹ್ಮಾಸ್ತ್ರ’ ಸೀಕ್ವೆಲ್ ರಿಲೀಸ್ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ನಿರ್ದೇಶಕ ಅಯಾನ್ ಮುಖರ್ಜಿ

ಣ್‌ಬೀರ್ ಕಪೂರ್- ಆಲಿಯಾ ಭಟ್ (Alia Bhatt) ನಟನೆಯ ‘ಬ್ರಹ್ಮಾಸ್ತ್ರʼ ಸಿನಿಮಾ 2022ರಲ್ಲಿ ಸಿನಿಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. Bramastra Film ನೋಡಿ ಇಷ್ಟಪಟ್ಟಿದ್ದ ಪ್ರೇಕ್ಷಕರಿಗೆ ನಿರ್ದೇಶಕ ಅಯಾನ್ ಮುಖರ್ಜಿ (Ayan Mukerji) ಗುಡ್ ನ್ಯೂಸ್ ನೀಡಿದ್ದಾರೆ. ಇದನ್ನೂ ಓದಿ: Exclusive: ನೀಲಿ ಚಿತ್ರದಲ್ಲಿ ಆಕ್ಟ್‌ ಮಾಡ್ತೀಯಾ ಎಂದು ಕೇಳಿದ್ರಾ ಹರ್ಷ? ಸ್ಪಷ್ಟನೆ ನೀಡಿದ ನಟ

ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರʼ ಸಿನಿಮಾದಲ್ಲಿ ಆಲಿಯಾ- ರಣ್‌ಬೀರ್ ಲವ್ ಕೆಮಿಸ್ಟ್ರಿ ತೆರೆಯ ಮೇಲೆ ಕಮಾಲ್ ಮಾಡಿತ್ತು. ನಿಜ ಜೀವನದ ಅವರ ಲವ್ ಸ್ಟೋರಿಗೂ ‘ಬ್ರಹ್ಮಾಸ್ತ್ರʼ ಚಿತ್ರ ಕಾರಣವಾಗಿತ್ತು. ರಣ್‌ಬೀರ್ ಈ ಚಿತ್ರ, ಭಾರತದ ಮಾರುಕಟ್ಟೆಯಲ್ಲಿ 257 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಸೀಕ್ವೆಲ್ ಯಾವಾಗ ಬರುತ್ತೆ ಎಂದು ಎದುರು ನೋಡ್ತಿದ್ದ ಫ್ಯಾನ್ಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಅಯಾನ್ ಅಪ್‌ಡೇಟ್ ನೀಡಿದ್ದಾರೆ.

 

View this post on Instagram

 

A post shared by Ayan Mukerji (@ayan_mukerji)

ಡೈರೆಕ್ಟರ್ ಅಯಾನ್ ಮುಖರ್ಜಿ ಅವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ‘ಬ್ರಹ್ಮಾಸ್ತ್ರ: ಪಾರ್ಟ್ 2’ ಸಿನಿಮಾ 2026ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ಬ್ರಹ್ಮಾಸ್ತ್ರ: ಪಾರ್ಟ್ 3’ ಚಿತ್ರ 2027ರ ಡಿಸೆಂಬರ್‌ಗೆ ತೆರೆಕಾಣಲಿದೆ. ಅಂದರೆ ಪ್ರೇಕ್ಷಕರು ಈ ಚಿತ್ರಗಳನ್ನು ಕಣ್ತುಂಬಿಕೊಳ್ಳಲು 3-4 ವರ್ಷ ಕಾಯಲೇಬೇಕಾಗಿದೆ.

ರಶ್ಮಿಕಾ ಮಂದಣ್ಣ (Rashmika Mandanna) ಜೊತೆಗಿನ ‘ಅನಿಮಲ್’ (Animal) ಸಿನಿಮಾ ಆಗಸ್ಟ್ 11ಕ್ಕೆ ತೆರೆಗೆ ಬರಲಿದೆ. ಇನ್ನೂ ಮಗಳ ಜೊತೆ ಸಮಯ ಕಳೆಯುವ ದೃಷ್ಟಿಯಿಂದ ರಣ್‌ಬೀರ್ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಇದಾದ ಬಳಿಕ ‘ಬ್ರಹ್ಮಾಸ್ತ್ರʼ ಸೀಕ್ವೆಲ್ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಾರೆ.