ಅವಳಿ ಮಕ್ಕಳಿಗೆ ತಂದೆಯಾದ ದಿನೇಶ್ ಕಾರ್ತಿಕ್

Dinesh Karthik

ಮುಂಬೈ: ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮತ್ತು ಪತ್ನಿ ದೀಪಿಕಾ ಪಲ್ಲಿಕಲ್ ತಂದೆ-ತಾಯಿ ಆಗಿದ್ದಾರೆ. ಹೌದು ದಿನೇಶ್ ಮತ್ತು ದೀಪಿಕಾ ದಂಪತಿಗೆ  ಅವಳಿ ಗಂಡು ಮಕ್ಕಳು ಜನಿಸಿದೆ.

ಈ ಸಿಹಿಯಾದ ವಿಚಾರವನ್ನು ದಿನೇಶ್ ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ದಿನೇಶ್ ಕಾರ್ತಿಕ್, ಪತ್ನಿ ಮತ್ತು ಮಕ್ಕಳೊಂದಿಗೆ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ, ನೋಡ ನೋಡುತ್ತಿದ್ದಂತೆ ಮೂರು ಈಗ ಐದಾಗಿದೆ. ದೀಪಿಕಾ ಮತ್ತು ನನಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಜನಿಸಿದ್ದಾರೆ. ಕಬೀರ್ ಪಳ್ಳಿಕಲ್ ಕಾರ್ತಿಕ್, ಝಿಯಾನ್ ಪಳ್ಳಿಕಲ್ ಕಾರ್ತಿಕ್ ಇದಕ್ಕಿಂತಲೂ ಸಂಭ್ರಮ ಸಿಗಲಾರದು ಎಂದು ತಮ್ಮ ಟ್ವಿಟ್ಟರ್‍ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

Dinesh Karthik

ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ. ಕಾರ್ತಿಕ್ ಅವರ ಪತ್ನಿ ದೀಪಿಕಾ ಸ್ಕ್ವಾಷ್ ಆಟಗಾರ್ತಿಯಾಗಿದ್ದಾರೆ. 2012ರಲ್ಲಿ ನಿಕಿತಾ ವಂಜಾರಾ ಅವರೊಂದಿಗೆ ವಿಚ್ಛೇದನ ಪಡೆದ ನಂತರ 2013ರಲ್ಲಿ ದಿನೇಶ್, ದೀಪಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, 2015ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಇದನ್ನೂ ಓದಿ: ಶಿವಣ್ಣ ಅಭಿಮಾನಿಗಳಿಗೆ ರಸದೌತಣ – ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ಭಜರಂಗಿ -2

ಇತ್ತೀಚೆಗಷ್ಟೇ, ದಿನೇಶ್ ಕಾರ್ತಿಕ್ ದುಬೈನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಟ ಆಡಿದ್ದರು. ಅವರ ತಂಡವು ಐಪಿಎಲ್ ಪಂದ್ಯದಲ್ಲಿ ಫೈನಲ್‍ಗೆ ತಲುಪಿ ನಂತರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ವಿರುದ್ಧ 27 ರನ್‍ಗಳಿಂದ ಸೋಲನ್ನು ಎದುರಿಸಿತು.

Comments

Leave a Reply

Your email address will not be published. Required fields are marked *