ಕೊಡಗಲ್ಲಿ ಹಿಂದೂ ಒಬ್ಬ ಮುಸ್ಲಿಂನ್ನು ಹತ್ಯೆಗೈದಾಗ ಗಲಾಟೆ ಆಗ್ಲಿಲ್ಲ, ಹಿಂದೂವೇ ಹತ್ಯೆಯಾಗಿದ್ರೆ ಬೆಂಕಿ ಹಚ್ಚಿರೋರು: ದಿನೇಶ್ ಗುಂಡೂರಾವ್

ಮಂಗಳೂರು: ಕೊಡಗಿನಲ್ಲಿ (Kodagu) ಇತ್ತೀಚೆಗೆ ಒಬ್ಬ ಹಿಂದೂ ಚುಚ್ಚಿದ ಕಾರಣ ಒಬ್ಬ ಮುಸ್ಲಿಂ ತೀರಿ ಹೋದ, ಅದು ದೊಡ್ಡ ಗಲಾಟೆ ಆಗಿಲ್ಲ. ಅದು ವೈಯಕ್ತಿಕ ಕಾರಣದಿಂದ ಆಗಿದ್ದು. ಯಾವುದೋ ಸಂದರ್ಭದಲ್ಲಿ ಕೊಲೆ ಆಯ್ತು. ನಮ್ಮ ಅದೃಷ್ಟ ಏನಂದ್ರೆ ಹಿಂದೂ ತೀರಿ ಹೋಗಿದ್ರೆ ಇಡೀ ಊರಿಗೆ ಬೆಂಕಿ ಹಚ್ಚಿರೋರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ, ನೈತಿಕ ಪೊಲೀಸ್‍ಗಿರಿ (Moral Policing) ವಿಚಾರವಾಗಿ ಮಾತನಾಡಿದ್ದಾರೆ. ಈ ವೇಳೆ ಯಾವುದೇ ಕಾರಣ ಇರಲಿ, ಹಿಂದೂ ಮುಸ್ಲಿಂ ಇದ್ರೆ ಇವರಿಗೆ ಅರ್ಥ ಬೇರೆಯೇ ಆಗಿರುತ್ತದೆ. ಯಾರೇ ಕಾನೂನನ್ನು ಕೈಗೆತ್ತಿಕೊಂಡರೂ ಕ್ರಮ ಆಗುತ್ತದೆ. ಇತ್ತೀಚೆಗೆ ಮೂರು ಜನರ ಬಂಧನ ಆಗಿದೆ. ಇದು ಜಿಲ್ಲೆಗೆ ಕೆಟ್ಟ ಹೆಸರು, ಇಡೀ ದಕ್ಷಿಣ ಕನ್ನಡಕ್ಕೆ ಇದು ಕಳಂಕ. ಇದೇ ಕಾರಣಕ್ಕೆ ಇವತ್ತು ಬೇರೆ ಜನರು ಇಲ್ಲಿಗೆ ಬರುತ್ತಿಲ್ಲ. ಈ ಕಳಂಕದಿಂದ ಜಿಲ್ಲೆ ಹೊರ ಬರಬೇಕು. ಸುರಕ್ಷಿತ ವಾತಾವರಣ ಸೃಷ್ಟಿಯಾಗಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ, ಸತ್ಯ – ನಾನು ಹೇಳಿದ್ದು ಸುಳ್ಳಾದ್ರೆ ರಾಜಕೀಯ ಬಿಡ್ತಿನಿ: ಸಿಎಂ

ಜಿಲ್ಲೆಯಲ್ಲಿ ಆರ್‍ಎಸ್‍ಎಸ್, ಭಜರಂಗದಳ ಪ್ರಚೋದನೆ ಮಾಡುತ್ತಿದೆ. ಇವರ ಪ್ರಚೋದನೆಯಲ್ಲಿ ಇವರು ಹೇಳಿದ್ದೇ ನಡೀಬೇಕು ಎಂದುಕೊಂಡಿದ್ದಾರೆ. ಇದು ಹಿಂದೂ ದೇಶ, ಹಿಂದುತ್ವ ಎನ್ನುತ್ತಿದ್ದಾರೆ. ಆಂಟಿ ಕಮ್ಯನಲ್ ವಿಂಗ್ ಫೆಲ್ಯೂರ್ ಅಲ್ಲ, ಅವರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸಹೋದರತ್ವ ಮತ್ತು ಕೋಮು ಸೌಹಾರ್ದ ನಮಗೆ ಮುಖ್ಯ ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ಅನಂತ್ ಕುಮಾರ್, ನಳಿನ್‍ಕುಮಾರ್ ಕಟೀಲ್, ಸುನೀಲ್ ಕುಮಾರ್‍ಗೆ ದ್ವೇಷವೇ ಬಂಡವಾಳವಾಗಿದೆ. ಬಿಜೆಪಿಯವರದ್ದು ಹೆದರಿಸೋದು ಮತ್ತು ಸರ್ವಾಧಿಕಾರ. ವಿರೋಧ ಪಕ್ಷ ರಹಿತ ದೇಶ ಮಾಡಲು ಬಿಜೆಪಿ (BJP) ಹೊರಟಿದೆ. ಏಕಪಕ್ಷೀಯ ದೇಶ ಮತ್ತು ಒಬ್ಬನೇ ನಾಯಕ ಇರಬೇಕು ಎಂದುಕೊಂಡಿದ್ದಾರೆ. ಈ ತರಹದ ಪ್ರಜಾಪ್ರಭುತ್ವ ಈ ದೇಶಕ್ಕೆ ಒಳ್ಳೆಯದಲ್ಲ. ಬಹಳ ಬುದ್ದಿವಂತಿಕೆಯಿಂದ ಧರ್ಮದ ಹೆಸರಲ್ಲಿ ತಂದಿಡುತ್ತಿದ್ದಾರೆ. ಈ ದೇಶದ ಸಮಸ್ಯೆ ಬಗ್ಗೆ ನರೇಂದ್ರ ಮೋದಿ ಮಾತನಾಡಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ಬಿಜೆಪಿ ಮುಖಂಡರು‌, ಕಾರ್ಯಕರ್ತರಿಗೆ ತಿರುಪತಿ ಯಾತ್ರೆ ಭಾಗ್ಯ