ಮುಂದಿನ ವರ್ಷ ದಿಂಗತ್‍ ರನ್ನು ಮದುವೆಯಾಗ್ತಾರಾ ಐಂದ್ರಿತಾ?

ಬೆಂಗಳೂರು: ಸ್ಯಾಂಡಲ್ ವುಡ್ ದೂದ್ ಪೇಡಾ ದಿಗಂತ್ ಮತ್ತು ಗುಳಿಕೆನ್ನೆ ಬೆಡಗಿ ಐಂದ್ರಿತಾ ರೇ ಮುಂದಿನ ವರ್ಷ ಮದುವೆ ಆಗ್ತಿದ್ದಾರೆ ಎಂಬ ಸುದ್ದಿಗೆ ಖುದ್ದು ಐಂದ್ರಿತಾ ಸ್ಪಷ್ಟನೆ ನೀಡಿದ್ದಾರೆ.

ಇದೊಂದು ಸುಳ್ಳು ಸುದ್ದಿ ಎಂದು ನಟಿ ಐಂದ್ರಿತಾ ಉತ್ತರಿಸಿದ್ದಾರೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನವೊಂದರ ಫೋಟೋ ಹಾಕಿ ಇದೆಲ್ಲಾ ಸುಳ್ಳು ಸುದ್ದಿ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ದಿಗಂತ್ ಮತ್ತು ಐಂದ್ರಿತಾ ರೇ ಇಬ್ಬರೂ ಜೊತೆಯಾಗಿ ಪಾರಿಜಾತ, ಮನಸಾರೆ ಚಿತ್ರಗಳಲ್ಲಿ ನಟಿಸಿದ್ದರು. ದಿಗಂತ್ ಅಭಿನಯದ ಶಾರ್ಪ್ ಶೂಟರ್ ನಲ್ಲಿ ಅತಿಥಿ ಪಾತ್ರದಲ್ಲಿ ಐಂದ್ರಿತಾ ಕಾಣಿಸಿಕೊಂಡಿದ್ರು. ಆದರೆ ಈ ಮದುವೆಯ ಗಾಸಿಪ್ ಬಗ್ಗೆ ದಿಗಂತ್ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೆಲವು ದಿನಗಳಿಂದ ಸ್ಯಾಂಡಲ್‍ವುಡ್ ನಟ-ನಟಿಯರೆಲ್ಲ ಮದುವೆ ಸಂಭ್ರಮದಲ್ಲಿದ್ದರಿಂದ ಈ ಸುದ್ದಿ ಅತ್ಯಂತ ವೇಗವಾಗಿ ಹರಡಲು ಸಾಧ್ಯವಾಗಿದೆ. ಕಳೆದ ವಾರವಷ್ಟೇ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‍ಗೆ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ. ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥವೂ ನಡೆದಿದೆ. ಈ ವರ್ಷದಲ್ಲಿ ಪ್ರಿಯಾಮಣಿ, ಅಮೂಲ್ಯ, ರಿಷಬ್ ಶೆಟ್ಟಿ, ಸಿಂಧೂ ಲೋಕ್‍ನಾಥ್, ರಮ್ಯಾ ಬಾರ್ನಾ ಸಂಸಾರ ಜೀವನಕ್ಕೆ ಕಾಲಿರಿಸಿದ್ದಾರೆ.

https://www.instagram.com/p/BUoB3Okh8FF/?taken-by=aindrita_ray

https://www.instagram.com/p/BSV07zChPFI/?taken-by=aindrita_ray

https://www.instagram.com/p/BRdMbNMhqJ-/?taken-by=aindrita_ray

https://www.instagram.com/p/BRVyhGOB_gm/?taken-by=aindrita_ray

https://www.instagram.com/p/BOh90vKgUJP/?taken-by=aindrita_ray

https://www.instagram.com/p/BNwyp5YgNUo/?taken-by=aindrita_ray

https://www.instagram.com/p/BL8buiXgqSj/?taken-by=aindrita_ray

https://www.instagram.com/p/BHpn8QzAN9Y/?taken-by=aindrita_ray

https://www.instagram.com/p/_ReDlGkKbr/?taken-by=aindrita_ray

https://www.instagram.com/p/BVhTmEcBY3a/?taken-by=aindrita_ray

https://www.instagram.com/p/BVRLgsxBck4/?taken-by=aindrita_ray

Comments

Leave a Reply

Your email address will not be published. Required fields are marked *