ರಾಜ್ಯದಲ್ಲೂ ಶುರುವಾಯ್ತು ಡೀಸೆಲ್‌ ಅಭಾವ – ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್

BUNK

ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ನೀರಿಗೆ ಅಭಾವ ಆಗೋದು ಸಹಜ, ಆದರೀಗ ರಾಜ್ಯದಲ್ಲಿ ಡೀಸೆಲ್ ಅಭಾವ ಶುರುವಾಗಿದೆ.

ರಾಜ್ಯದ ಬಹುತೇಕ ಭಾರತ್ ಪೆಟ್ರೋಲಿಯಂ ಬಂಕ್‌ಗಳಲ್ಲಿ ಡೀಸೆಲ್ ಕೊರತೆ ಎದುರಾಗಿದೆ. ಕಳೆದ 1 ವಾರದಿಂದ ಸಮಸ್ಯೆ ಉಂಟಾಗುತ್ತಿದ್ದು, ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಬಿಪಿಸಿಎಲ್ ಬಂಕ್‌ನಲ್ಲಿ ಡೀಸೆಲ್ ನೋ ಸ್ಟಾಕ್ ಬೋರ್ಡ್ ಕಾಣುತ್ತಿವೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಇಂಧನ ಕೊರತೆ – ಪರಿಹಾರಕ್ಕೆ ಸೈಕಲ್ ಸೇವೆ ಅನಾವರಣ

PETROL

ಬಹುತೇಕ ಬಿಪಿಸಿಎಲ್ ಬಂಕ್‌ಗಳಲ್ಲಿ ಇದೇ ಸಮಸ್ಯೆ ಎದುರಾಗಿದೆ. ಇದ್ರಿಂದ ಅಕ್ಕ ಪಕ್ಕದ ಇಂಡಿಯನ್ ಆಯಿಲ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿದಂತೆ ಖಾಸಗಿ ಬಂಕ್‌ಗಳತ್ತ ಗ್ರಾಹಕರು ಮುಖ ಮಾಡಿದ್ದಾರೆ. ಇದನ್ನೂ ಓದಿ: ದೋಣಿ ಸಮಸ್ಯೆ – ಪ್ರಾಣ ಉಳಿಸಿಕೊಳ್ಳಲು ನೀರಿಗೆ ಹಾರಿದ ನಾಲ್ವರಲ್ಲಿ ಓರ್ವ ಯುವಕ ಸಾವು

ಈ ಕುರಿತು ಮಾತನಾಡಿರುವ ಬಂಕ್ ಮಾಲೀಕ ಗಿರೀಶ್, ಬಿಪಿಸಿಎಲ್ ಸಂಸ್ಥೆ ವತಿಯಿಂದ ಡೀಸೆಲ್ ಸರಬರಾಜು ಕಡಿತ ಮಾಡುತ್ತಿದ್ದಾರೆ. ಕೇಳಿದಷ್ಟು ಡೀಸೆಲ್ ಸರಬರಾಜು ಮಾಡುತ್ತಿಲ್ಲ. ಡೀಸೆಲ್ ನಿಂದ 23 ರೂಪಾಯಿ ನಷ್ಠ ಸಂಭವಿಸುತ್ತಿದೆ. ಅಂತ ಡೀಸೆಲ್ ಪೂರೈಕೆ ಕಡಿಮೆ ಮಾಡಿದ್ದಾರೆ. ಸಂಸ್ಥೆಗೆ ಸಾವಿರಾರು ಕೋಟಿ ನಷ್ಟದ ಕಾರಣವೊಡ್ಡಿ ದಿನೇ ದಿನೇ ಡೀಸೆಲ್ ಪೂರೈಕೆ ಕಡಿತ ಮಾಡುತ್ತಿದ್ದಾರೆ. ಇದ್ರಿಂದ ಡೀಸೆಲ್‌ಗೆ ಅಭಾವ ಸೃಷ್ಟಿಯಾಗುತ್ತಿದೆ ಎಂದು ಹೇಳಿದ್ದಾರೆ.

ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಕೆಲ ಬಂಕ್‌ಗಳಲ್ಲಿ ಡೀಸೆಲ್ ಸಿಗದೇ ಗ್ರಾಹಕರು ಪರದಾಡುವಂತಾಗಿದೆ.

Comments

Leave a Reply

Your email address will not be published. Required fields are marked *