ಅಬ್ದುಲ್‌ ಕಲಾಂ ಹೇರ್‌ ಸ್ಟೈಲ್‌ ಬಗ್ಗೆ ಮಾತನಾಡಿದ್ದಾರಾ? – ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕೆಂಡಾಮಂಡಲ

ಮೈಸೂರು: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ (APJ Abdul Kalam) ಹೇರ್ ಸ್ಟೈಲ್ ಬಗ್ಗೆ ಬಿಜೆಪಿಯವರು (BJP) ಮಾತಾನಾಡಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿರುಗೇಟು ನೀಡಿದ್ದಾರೆ.

ತಾನು ತಲೆಕೂದಲು ತೆಗೆಯದ್ದಕ್ಕೆ ವ್ಯಂಗ್ಯ ಮಾಡಿದ ಬಿಜೆಪಿ  ನಾಯಕರ ವಿರುದ್ಧ ಕೆಂಡಾಮಂಡಲವಾದ ಅವರು,  ಮೋದಿ ಅವರು ಕೋವಿಡ್ ಸಮಯದಲ್ಲಿ ಗಡ್ಡ ಬಿಟ್ಟಿದ್ರು ಅದನ್ನು ಯಾಕೆ ಪ್ರಶ್ನಿಸಲಿಲ್ಲ? ನನ್ನ ಹೇರ್ ಸ್ಟೈಲ್ ಬಗ್ಗೆ ಮಾತನಾಡುವುದು ಒಂದು ವಿಷಯವೇ? ನನ್ನ ವಿಚಾರ ಅವರಿಗೆ ಯಾಕೆ? ಕೆಲ ಮಕ್ಕಳು ನಮ್ಮ ಶಿಕ್ಷಣ ಸಚಿವರು ಒಳ್ಳೇ ಸ್ಟೈಲ್‌ನಲ್ಲಿದ್ದಾರೆ. ನಮಗೆ ಅ ರೀತಿ ಹೇರ್‌ ಸ್ಟೈಲ್‌ ಬಿಡಲು ಅವಕಾಶ ಯಾಕಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿತ್ತನೆ ಬೀಜದ ಬೆಲೆ ಏರಿಕೆ – ಕೃಷಿ ಸಚಿವರೇ ಎಲ್ಲಿದಿರಪ್ಪಾ?: ಜೆಡಿಎಸ್ ಆಕ್ರೋಶ

ಬಿಜೆಪಿ ಯುವ ಮೋರ್ಚಾ ಹೇರ್ ಕಟ್‌ಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದ್ದಿದ್ದಕ್ಕೆ, 40% ಕಮೀಷನ್ ಹಣದಲ್ಲಿ ನನ್ನ ಹೇರ್‌ ಕಟ್‌ ಮಾಡುವುದು ಬೇಡ. ನನ್ನ ಕೂದಲು ಚೆನ್ನಾಗಿದೆ ತಲೆ ಒಳಗಿನ ಮೆದುಳು ಚೆನ್ನಾಗಿದೆ. ಬಿಜಿಪಿಗರಂತೆ ನನಗೆ ಯಾವ ದುರ್ಬುದ್ದಿ ಇಲ್ಲ. ಅವರಂತೆ ಚೋಟಾ ಸೈನ್ ಮಾಡುವ ವ್ಯವಹಾರ ನನಗೆ ಗೊತ್ತಿಲ್ಲ. ನನ್ನ ತಂದೆ ನನಗೆ ಒಳ್ಳೆ ಬುದ್ದಿ ಕಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ತಂದೆಗೆ ಬಹಳ ಪ್ರೀತಿ ಇತ್ತು. ನಾನು ಹೇರ್ ಕಟ್ ಮಾಡಿಸಿದ್ದಕ್ಕೆ ಮೂರು ದಿನ ಅವರು ನನ್ನ ಜೊತೆ ಮಾತನಾಡಿರಲಿಲ್ಲ. ನಮ್ಮ ತಂದೆಯೇ ನನಗೆ ಆದರ್ಶ ಹೊರತು ವಿಜಯೇಂದ್ರ ಅಲ್ಲ. ಜೂನ್‌ 4ರ ನಂತರ ವಿಜಯೇಂದ್ರಗೆ (Vijayendra) ಬೇರೆಯದ್ದೇ ಕೆಲಸ ಕೊಡುತ್ತೇನೆ ಎಂದು ತಿಳಿಸಿದರು.

 

ವಿಧಾನಸಭೆ ಚುನಾವಣೆ ವೇಳೆ ಡಿಕೆ ಶಿವಕುಮಾರ್ ಗಡ್ಡದ ಬಗ್ಗೆ ಮಾತನಾಡಿದ್ದಕ್ಕೆ ಬಿಜೆಪಿ 130 ರಿಂದ 60ಕ್ಕೆ ಬಂದಿತ್ತು. ಈಗ ನನ್ನ ಕೂದಲು ಬಗ್ಗೆ ಮಾತಾಡಿ 26 ರಿಂದ 6 ಕ್ಕೆ ಬರುತ್ತಾರೆ ನೋಡಿ ಎಂದು ಹೇಳಿದರು.

ನು ಸವಿತಾ ಸಮಾಜಕ್ಕೆ ಅವಮಾನ ಆಗುವ ರೀತಿ ಮಾತನಾಡಿಲ್ಲ. ನಾನು ವಿಜಯೇಂದ್ರ ಗೆ ಉತ್ತರ ಕೊಟ್ಟಿದ್ದಕ್ಕೆ ಇವರು ಯಾಕೆ ಪ್ರತಿಭಟನೆ ಮಾಡಬೇಕು. ಯಾವುದೇ ಸಮಾಜಕ್ಕೆ ಅವಮಾನ ಮಾಡುವ ರೀತಿ ನಡವಳಿಕೆಯನ್ನು ನನ್ನ ತಂದೆ ಅವರು ನನಗೆ ಹೇಳಿ ಕೊಟ್ಟಿಲ್ಲ. ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿರಬೇಕು ಎಂದರು.