ಮಧ್ವರಾಜ್ ಅವಕಾಶವಾದಿ ರಾಜಕಾರಣಿ, ಡಿಕೆಶಿ ನಿರೀಕ್ಷೆ ಹುಸಿಯಾಗಿದೆ: ಧ್ರುವನಾರಾಯಣ್

ಉಡುಪಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಪ್ರಮೋದ್ ಮಧ್ವರಾಜ್ ಅವಕಾಶವಾದಿ ರಾಜಕಾರಣಿ. ಡಿ.ಕೆ ಶಿವಕುಮಾರ್ ಪ್ರಮೋದ್ ಮಧ್ವರಾಜ್ ಮೇಲಿಟ್ಟ ನಿರೀಕ್ಷೆಗಳೆಲ್ಲ ಹುಸಿಯಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ ಉಡುಪಿ ಜಿಲ್ಲಾ ಕಾಂಗ್ರೆಸ್ ತನ್ನ ತನ್ನ ಫಸ್ಟ್ ರಿಯಾಕ್ಷನ್ ಕೊಟ್ಟಿದೆ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲ ಬಾರಿ ಗೆದ್ದವನಿಗೆ ಪಕ್ಷ ಎಲ್ಲಾ ಅವಕಾಶ ಕೊಟ್ಟಿತ್ತು. ಪ್ರಮೋದ್ ಜಿಲ್ಲಾ ಕಾಂಗ್ರೆಸ್ ವಿರುದ್ಧ ಮಾತನಾಡುವುದು ಶೋಭೆ ತರಲ್ಲ. ಪ್ರಮೋದ್ ಹೇಳಿದವರಿಗೆ ಜಿಲ್ಲಾ ಕಾಂಗ್ರೆಸ್‍ನಲ್ಲಿ ಅವಕಾಶ ಕೊಟ್ಟಿದ್ದೇವೆ. ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್‍ನಲ್ಲಿ ಪ್ರಮೋದ್ ಸೂಚಿಸಿದ ವ್ಯಕ್ತಿಗಳಿಗೆ ಸ್ಥಾನಮಾನ ಕೊಡಲಾಗಿದೆ ಎಂದರು. ಇದನ್ನೂ ಓದಿ: ಉಗುರಿನಲ್ಲಿದ್ದ ರಕ್ತದ ಕಲೆಯಿಂದಾಗಿ ಕೊಲೆ ಮಾಡಿದ್ದ ವ್ಯಕ್ತಿ ಸಿಕ್ಕಿಬಿದ್ದ!

ಜಿಲ್ಲಾ ಕಾಂಗ್ರೆಸ್ ಮೇಲೆ ಆರೋಪ ಮಾಡಿ ಪ್ರಮೋದ್ ಕಾಂಗ್ರೆಸ್ ಬಿಟ್ಟು ಹೋಗಿರುವುದು ದುರಾದೃಷ್ಟಕರ. ಪ್ರಮೋದ್‍ಗೆ ಸಣ್ಣ ವಯಸ್ಸಿನಲ್ಲಿ ಎಲ್ಲಾ ಹುದ್ದೆ ಕೊಟ್ಟಿದ್ದೇವೆ. ಡಿಕೆಶಿ ಪ್ರಮೋದ್ ಮೇಲೆ ಬಹಳ ನಿರೀಕ್ಷೆ ಇಟ್ಟಿದ್ದರು. ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‍ಗೆ, ಮತದಾರರಿಗೆ ದ್ರೋಹ ಮಾಡಿದ್ದಾರೆ. ಮಧ್ವರಾಜ್ ವೈಯಕ್ತಿಕ ಆಸೆ ಏನಿದೆ ಗೊತ್ತಿಲ್ಲ. ನಾವು ಜಿಲ್ಲೆಯಲ್ಲಿ ಕಾಂಗ್ರೆಸ್‍ನ್ನು ತಳಮಟ್ಟದಿಂದ ಕಟ್ಟುತ್ತೇವೆ. ರಾಜಕಾರಣ ನಿಂತ ನೀರಲ್ಲ, ಉಡುಪಿಯಲ್ಲಿ ಮತ್ತೆ ಪಕ್ಷ ಕಟ್ಟುತ್ತೇವೆ ಎಂದರು. ಇದನ್ನೂ ಓದಿ: ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ

Comments

Leave a Reply

Your email address will not be published. Required fields are marked *