ಮಲಯಾಳಂ ಚಿತ್ರದ ಶೂಟಿಂಗ್ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ‘ದಿಯಾ’ ಹೀರೋ

ನ್ನಡದ ನಟ ದೀಕ್ಷಿತ್ ಶೆಟ್ಟಿ (Dheekshith Shetty) ತೆಲುಗು ಚಿತ್ರದ ಬಳಿಕ ಇದೀಗ ಮಾಲಿವುಡ್‌ನಲ್ಲಿ (Mollywood) ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಜೊತೆ ತೆರೆಹಂಚಿಕೊಂಡ ಬಳಿಕ ಮಾಲಿವುಡ್‌ನಲ್ಲೂ ದೀಕ್ಷಿತ್‌ಗೆ ಬಿಗ್ ಚಾನ್ಸ್ ಸಿಕ್ಕಿದೆ. ಶೂಟಿಂಗ್‌ಗೆ ಭಾಗಿಯಾಗಿರೋ ನಟ, ಇದೀಗ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಕ್ಕಿರುವ ಅವಕಾಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರೇಮಂ, ಚಾರ್ಲಿ, ಬೆಂಗಳೂರು ಡೇಸ್ ಸೇರಿದಂತೆ ಹಲವು ಸಿನಿಮಾಗಳನ್ನು ನೋಡಿದ್ದೇನೆ. ಸರಳ ಕಥೆಯನ್ನು ಎಷ್ಟು ಅದ್ಭುತವಾಗಿ ತೋರಿಸುತ್ತಾರೆ ಎಂದು ಅಚ್ಚರಿಪಟ್ಟಿದ್ದೆ. ಇಂದು ನಾನೇ ಮಲಯಾಳಂ ಸಿನಿಮಾಗೆ ಸಾಕ್ಷಿಯಾಗುತ್ತಿದ್ದೇನೆ. ಖಂಡಿತಾ ನಿಮ್ಮೆಲ್ಲರ ಪ್ರೀತಿ ಇಲ್ಲದೇ ಇದ್ದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಬಳಿಕ ಅಧಿಕೃತವಾಗಿ ಮಾಲಿವುಡ್‌ನ ಭಾಗವಾಗಿದ್ದೇನೆ ಎಂದು ಹೇಳಬಹುದು ಎಂದು ದೀಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಹೇಳಿದ್ದಾರೆ. ಚಾನ್ಸ್ ನೀಡಿದ ಮಲಯಾಳಂ ‘ಒಪ್ಪೀಸ್’ ಚಿತ್ರದ ನಿರ್ದೇಶಕನಿಗೆ ದಿಯಾ ನಟ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:Pushpa 2: ಅಲ್ಲು ಅರ್ಜುನ್‌ ಜೊತೆ ಕಾಣಿಸಿಕೊಳ್ತಾರೆ ಸಮಂತಾ

ಪ್ಯಾರಾ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ‘ಒಪ್ಪೀಸ್’ ಸಿನಿಮಾದ ಮುಹೂರ್ತ ಸಮಾರಂಭ ಕಳೆದ ಡಿಸೆಂಬರ್‌ನಲ್ಲಿ ಕೇರಳದಲ್ಲಿ ಸರಳವಾಗಿ ಜರುಗಿತ್ತು. 10 ವರ್ಷಗಳ ಕಾಲ ವಿದೇಶದಲ್ಲಿದ್ದ ವ್ಯಕ್ತಿ ತಾನು ಹುಟ್ಟಿ ಬೆಳೆದ ಕೇರಳಗೆ ವಾಪಸ್ ಆದಾಗ ಏನಾಗುತ್ತದೆ ಅನ್ನೋದೆ ಕಥೆಯ ತಿರುಳು. ಇದೀಗ ಒಪ್ಪೀಸ್ ಸಿನಿಮಾದ ಶೂಟಿಂಗ್ ಶುರುವಾಗಿದೆ. ಸೌಜನ್ ಜೋಸೆಫ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರದ್ಯುಮನ್ಹಾ ಕೊಳ್ಳೇಕಾಲ ಬಂಡವಾಳ ಹೂಡಿದ್ದಾರೆ. ಎಂ ಜಯಚಂದ್ರನ್ ಮ್ಯೂಸಿಕ್ ಚಿತ್ರಕ್ಕಿದೆ.

ಮಲಯಾಳಂ ಚಿತ್ರದ ಜೊತೆಗೆ ತೆಲುಗಿನ ‌’ಗರ್ಲ್‌ಫ್ರೆಂಡ್’ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ದೀಕ್ಷಿತ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕನ್ನಡದ ಸಿನಿಮಾಗಳು ನಟನ ಕೈಯಲ್ಲಿವೆ.