ಪ್ರಧಾನಿ ಮೋದಿಯಿಂದ ಪುಸ್ತಕ ಗಿಫ್ಟ್ ಪಡೆದ ಧಾರವಾಡದ ಬಾಲಕಿ

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಧಾರವಾಡದ ಬಾಲಕಿಯೊಬ್ಬಳಿಗೆ ಪುಸ್ತಕ ಗಿಫ್ಟ್ ಮಾಡಿದ್ದಾರೆ. ರಾಜ್ಯದ ಹಲವು ಸಮಸ್ಯೆಗಳನ್ನ ಬರೆದು ಕಳಿಸಿದ್ದ ಯುವಕ ಯುವತಿಯರಿಗೆ ಪ್ರಧಾನಿ ಮೋದಿ ಪತ್ರದ ಮೂಲಕ ಪ್ರತಿಕ್ರಿಯೆಯನ್ನ ನೀಡಿದ್ದರು. ಆದರೆ ಈ ಬಾರಿ ಅವರು ಸ್ವತಃ ತಾವೇ ಬರೆದಿರುವ ಎಕ್ಸಾಂ ವಾರಿಯರ್ಸ್  ಪುಸ್ತಕವನ್ನ ಈ ಬಾಲಕಿಗೆ ಗಿಫ್ಟ್ ಮಾಡಿದ್ದಾರೆ.

6ನೇ ತರಗತಿ ಓದುತ್ತಿರುವ ಧಾರವಾಡದ ಸಿರಿ ದೊಡಮನಿ, ಪ್ರಧಾನಿ ಮೋದಿ ಅವರಿಂದ ಪುಸ್ತಕವನ್ನ ಉಡುಗೊರೆಯಾಗಿ ಪಡೆದಿದ್ದಾಳೆ. ಧಾರವಾಡ ನಗರದ ಮಲ್ಲಸಜ್ಜನ ಶಾಲೆಯಲ್ಲಿ ಓದುತ್ತಿರುವ ಸಿರಿ, ಪ್ರಧಾನಿ ಮೋದಿ ತಂದಿರುವ ಯೋಜನೆಗಳನ್ನ ಚಿತ್ರಕಲೆ ಬಿಡಿಸುವ ಮೂಲಕ ಪುಸ್ತಕವನ್ನಾಗಿ ಮಾಡಿದ್ದಾಳೆ. ಈ ಪುಸ್ತಕದಲ್ಲಿ ಆಧಾರ್ ಕಾರ್ಡ್, ಬಡವರಿಗೆ ಮನೆ ನಿರ್ಮಾಣ, ರೇಡಿಯೋದಲ್ಲಿ ಬರುವ ಮನ್ ಕೀ ಬಾತ್, ಸ್ವಚ್ಛ ಭಾರತ ಅಭಿಯಾನ, ಮೋದಿ ವರ್ಲ್ಡ್ ಲಿಡರ್, ಮೋದಿ ಮುಸ್ಲಿಂ ಮಹಿಳೆಯರಿಗೆ ಮಾಡಿದ ಸಹಾಯ ಸೇರಿದಂತೆ ಹಲವು ಯೋಜನೆಗಳನ್ನ ಚಿತ್ರಗಳಲ್ಲಿ ಬಿಡಿಸಿದ್ದಾಳೆ.

ಈ ಚಿತ್ರ ಬಿಡಿಸಿದ ಪುಸ್ತಕವನ್ನ ಸಿರಿ ಪ್ರಧಾನಿ ಮೋದಿಗೆ ಕಳಿಸಿಕೊಟ್ಟಿದ್ದಳು. ಈ ಪುಸ್ತಕ ಪಡೆದ ನರೇಂದ್ರ ಮೋದಿ, ವಿದ್ಯಾರ್ಥಿನಿಗೆ ಶ್ಲಾಘನಾ ಪತ್ರ ಹಾಗೂ ಎಕ್ಸಾಂ ವಾರಿಯರ್ಸ್ ಪುಸ್ತಕ ಕಳಿಸಿಕೊಟ್ಟಿದ್ದಾರೆ.

ಪ್ರಧಾನಿ ಅವರಿಂದ ಈ ಪುಸ್ತಕ ಪಡೆದ ವಿದ್ಯಾರ್ಥಿನಿ ಸಂತಸ ವ್ಯಕ್ತಪಡಿಸಿದ್ದಾಳೆ. ಪ್ರಧಾನಿ ಕಳಿಸಿದ ಪುಸ್ತಕದಲ್ಲಿ ಪರೀಕ್ಷೆಗಳನ್ನ ಹೇಗೆ ಎದುರಿಸಬೇಕು ಎಂದು ಸರಳವಾಗಿ ತಿಳಿಸಲಾಗಿದೆ.

ಸಿರಿ ದೊಡಮನಿಯ ತಂದೆ ತಾಯಿಯಾದ ಮಂಜುನಾಥ ಹಾಗೂ ಸಂಧ್ಯಾ ದಂಪತಿ ಕೂಡಾ ಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಲೆಯ ಶಿಕ್ಷಕರು ಕೂಡ ಸಿರಿ ಯ ಪುಸ್ತಕವನ್ನ ಪ್ರಧಾನಿಗೆ ಕಳಿಸಲು ಸಹಕಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶ್ಲಾಘನಾ ಪತ್ರದ ಜೊತೆ ಪುಸ್ತಕ ಪಡೆದ ಸಿರಿ ದೊಡಮನಿಗೆ ಶುಭಾಶಯ ಕೊರಿದ್ದಾರೆ.

Comments

Leave a Reply

Your email address will not be published. Required fields are marked *