ಎಗ್‍ರೈಸ್ ತಿನ್ನಿಸೋ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ – ಆರೋಪಿ ಅರೆಸ್ಟ್

ಧಾರವಾಡ: ಎಗ್‍ರೈಸ್ ತಿನ್ನಿಸುವ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನ ಬಂಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡದಲ್ಲಿ ಭಿಕ್ಷೆ ಬೇಡುತ್ತಿದ್ದ 13 ವರ್ಷದ ಬಾಲಕಿಗೆ ಎಗ್‍ರೈಸ್ ತಿನ್ನುಸುವ ನೆಪದಲ್ಲಿ ಆರೋಪಿ ಬಾಲಕಿಗೆ ಅತ್ಯಾಚಾರ ನಡೆಸಿದ್ದ. ಭಿಕ್ಷೆ ಬೇಡುತಿದ್ದ ಬಾಲಕಿಗೆ ಮಕ್ಕಳ ರಕ್ಷಣಾ ಘಟಕದ ಸಿಂಬ್ಬಂದಿ ತಂದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.  ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದವಳು ನೆರೆ ಮನೆಯವನೊಂದಿಗೆ ಎಸ್ಕೇಪ್- ವೀಡಿಯೋ ಮಾಡಿ ಪತಿ ಆತ್ಮಹತ್ಯೆ

ವಿಚಾರಣೆ ವೇಳೆ ಅತ್ಯಾಚಾರ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದ ಬಾಲಕಿ, ಆರೋಪಿಯನ್ನು ತೊರಿಸಿದರೆ ಗುರುತು ಹಿಡಿಯುವುದಾಗಿ ತಿಳಿಸಿದ್ದಳು. ಅದೇ ರೀತಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕಮಲಾ ಉಪನಗರ ಠಾಣೆಯಲ್ಲಿ ದೂರನ್ನ ನೀಡಿದ್ದರು. ದೂರು ಆಧಾರದ ಮೇಲೆ ಆರೋಪಿ ಹುಡುಕಾಟ ನಡೆಸಿದ್ದ ಉಪನಗರ ಠಾಣೆ ಪೊಲೀಸರು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ತಳವಾರ ಎಂಬಾತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‍ನಲ್ಲಿ ಪತ್ನಿ ಕೊಲೆಗೆ ಸ್ಕೆಚ್- ವಿಫಲವಾದ ನಂತ್ರ ಚಾಕುವಿಂದ ಇರಿದು ಕೊಂದ!

Comments

Leave a Reply

Your email address will not be published. Required fields are marked *