ಧರ್ಮಸ್ಥಳದ ಅರಣ್ಯದಲ್ಲಿ ಮತ್ತೊಂದು ಅಸ್ಥಿಪಂಜರ ಪತ್ತೆ

– 11ನೇ ಪಾಯಿಂಟ್‌ನ ಮೇಲ್ಭಾಗದ ಗುಡ್ಡದಲ್ಲಿ ಕಳೇಬರ ಪತ್ತೆ

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಹೂತಿಟ್ಟ ಶವಗಳ (Dharmasthala Mass Burials) ಜಾಡು ಬೆನ್ನತ್ತಿರುವ ಎಸ್‌ಐಟಿಗೆ (SIT) ಇಂದು ಮತ್ತೊಂದು ಅಸ್ಥಿಪಂಜರ ಪತ್ತೆಯಾಗಿದೆ. 11ನೇ ಪಾಯಿಂಟ್‌ನ ಮೇಲ್ಭಾಗದ ಗುಡ್ಡದಲ್ಲಿ ಕಳೇಬರ ಪತ್ತೆಯಾಗಿದೆ. 5 ಅಡಿ ಆಳದಲ್ಲಿ ಅಸ್ಥಿಪಂಜರದ ಅವಶೇಷ ಸಿಕ್ಕಿದೆ.

ಅನಾಮಿಕ ದೂರುದಾರ ಗುರುತಿಸಿದ ಪಾಯಿಂಟ್ ನಂಬರ್ 11ರಲ್ಲಿ ಉತ್ಖನನಕ್ಕೆ ಎಸ್‌ಐಟಿ ಮುಂದಾಗಿದ್ದಾಗ ದೂರುದಾರ ಏಕಾಏಕಿ ಪಾಯಿಂಟ್ 11ರ ಸ್ಥಳ ಬದಲಾವಣೆ ಮಾಡಿಸಿದ್ದಾನೆ. ಈ ಜಾಗ ಅಲ್ಲ ಸ್ವಲ್ಪ ಮೇಲ್ಭಾಗಕ್ಕೆ ಬನ್ನಿ ಅಂತ ಗುಡ್ಡಕ್ಕೆ ಕರೆದೊಯ್ದು ಗುಂಡಿ ತೋಡಿಸಿದ್ದಾನೆ. ಈ ಗುಂಡಿಯಲ್ಲಿ ಅಸ್ಥಿಪಂಜರದ ಕುರುಹುಗಳು ಲಭ್ಯವಾಗಿರೋದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸ್ಯಾನ್‌ಫ್ರ್ಯಾನ್ಸಿಸ್ಕೋ-ಮುಂಬೈ ವಿಮಾನದಲ್ಲಿ ಜಿರಳೆ ಪತ್ತೆ – ಕ್ಷಮೆಯಾಚಿಸಿದ ಏರ್‌ಇಂಡಿಯಾ

ವಿಶೇಷ ತನಿಖಾ ತಂಡ ಇಂದು ಪಾಯಿಂಟ್ 11 ರಲ್ಲಿ ಉತ್ಕನನ ನಡೆಸಬೇಕಿತ್ತು. ಆದರೆ ಈ ಜಾಗವನ್ನು ಅಗೆಯದೇ ದೂರುದಾರ ಎಸ್‌ಐಟಿ ತಂಡವನ್ನು ಮೇಲ್ಭಾಗಕ್ಕೆ ಕರೆದುಕೊಂಡು ಹೋಗಿದ್ದಾನೆ. 8, 9, 10, 11, 12 ಈ ಸ್ಥಳಗಳಲ್ಲಿ ಅತಿ ಹೆಚ್ಚು ಶವಗಳನ್ನು ಹೂತಿಟ್ಟ ಬಗ್ಗೆ ದೂರುದಾರ ದೂರು ನೀಡಿದ್ದ. ಈ ದೂರಿನಂತೆ ಪಾಯಿಂಟ್ ನಂಬರ್ 8, 9, 10 ರಲ್ಲಿ ಸ್ಥಳ ಅಗೆದು ಎಸ್‌ಐಟಿ ತಂಡ ಉತ್ಕನನ ನಡೆಸಿತ್ತು. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನ ಟಿಪ್ಪು ಸುಲ್ತಾನ್ ಸಾಗರ ಮಾಡಲು ಕಾಂಗ್ರೆಸ್ ಹುನ್ನಾರ: ಅಶೋಕ್

ಈ ಮೂರು ಜಾಗದಲ್ಲಿ 5 ರಿಂದ 6 ಅಡಿ ಅಗೆದರೂ ಯಾವುದೇ ಅಸ್ಥಿ ಪತ್ತೆಯಾಗಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ಪಾಯಿಂಟ್ 11ರಿಂದ ಉತ್ಕನನ ನಡೆಯಬೇಕಿತ್ತು. ಪಾಯಿಂಟ್ ನಂಬರ್ 11,12 ರಲ್ಲಿ ಉತ್ಖನನಕ್ಕೆ ಎಸ್‌ಐಟಿ ಸಕಲ ಸಿದ್ದತೆ ಮಾಡಿತ್ತು. ಇಂದು ಬೆಳಗ್ಗೆ ದೂರುದಾರನನ್ನು ಪಾಯಿಂಟ್ 11ಕ್ಕೆ ಪೊಲೀಸರು ಕರೆ ತಂದಿದ್ದರು. ಆದರೆ ಇಲ್ಲಿ ಯಾವುದೇ ಉತ್ಕನನ ನಡೆಸದೇ ದೂರುದಾರ ಪಾಯಿಂಟ್ ನಂ 11 ಮೇಲಿರುವ ಗುಡ್ಡವನ್ನು ತೋರಿಸಿದ್ದಾನೆ. ಹೀಗಾಗಿ ಎಸ್‌ಐಟಿ ತಂಡ ಅನಾಮಿಕ ತೋರಿಸಿದ ಗುಡ್ಡವನ್ನು ಹತ್ತಿ ಪರಿಶೀಲನೆ ನಡೆಸಿದೆ. ದೂರುದಾರ ವ್ಯಕ್ತಿ ಹೊಸ ಜಾಗವನ್ನು ಪತ್ತೆ ಮಾಡಿರುವ ಸಾಧ್ಯತೆ ಇದ್ದು, ಕಾರ್ಮಿಕರು ಒಂದು ಮೂಟೆ ಉಪ್ಪು ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಗ್ರಾ.ಪಂ ಸದಸ್ಯನ ಕಿಡ್ನ್ಯಾಪ್‌ಗೆ ಯತ್ನಿಸಿ ವಿಫಲ – ಚಾಕು ಇರಿದು ದುಷ್ಕರ್ಮಿಗಳು ಎಸ್ಕೇಪ್

ಈ ಹಿಂದೆ ಪಾಯಿಂಟ್ 6ರಲ್ಲಿ ಮಾತ್ರ ಕಳೇಬರ ಸಿಕ್ಕಿದ್ದರೆ, ಪಾಯಿಂಟ್ 1ರಲ್ಲಿ ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್‌ಗಳು ಸಿಕ್ಕಿದ್ದವು. ಉತ್ಖನನ ಕಾರ್ಯದ ಸ್ಥಳದಲ್ಲಿ ಜನ ಜಮಾಯಿಸಿದ್ದರು. ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲಿ, ಆದರೆ, ಪವಿತ್ರ ಕ್ಷೇತ್ರದ ಹೆಸರು ಕೆಡಿಸಬೇಡಿ ಅಂತ ಸ್ಥಳೀಯ ನಿವಾಸಿ ಆರಿಶ್ ಮೊಹಮ್ಮದ್ ಹೇಳಿದ್ದಾರೆ. ಇದನ್ನೂ ಓದಿ: ರಾಯರ 354ನೇ ಆರಾಧನಾ ಮಹೋತ್ಸವ ಆಗಸ್ಟ್ 8ರಿಂದ ಆರಂಭ: ಮಂತ್ರಾಲಯ ಶ್ರೀ

ಈ ಮಧ್ಯೆ ದೂರುದಾರನ ಪರ ವಕೀಲರು ಮತ್ತಷ್ಟು ಪಾಯಿಂಟ್ ಗುರುತಿಸಲು ಅವಕಾಶ ಕೊಡಿ ಎಂದು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್‌ಗೆ ಒತ್ತಾಯ ಮಾಡಿದ್ದಾರೆ. ಆದರೆ, ವಕೀಲರ ಮನವಿಯನ್ನು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ತಿರಸ್ಕರಿಸಿದ್ದಾರೆ. ಸದ್ಯಕ್ಕೆ 13 ಸ್ಥಳಗಳಲ್ಲಿ ಮಾತ್ರ ಶೋಧಿಸುತ್ತೇವೆ. ಎಸ್‌ಐಟಿ ಸೂಚಿಸಿದಲ್ಲಿ ಮಾತ್ರ ನಾವು ಪರಿಶೀಲನೆ ಮಾಡುತ್ತೇವೆ ಎಂದು ಎಸಿ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಎಡ ಸಮುದಾಯಕ್ಕೆ 7% ಒಳಮೀಸಲಾತಿ ಕೊಡಬೇಕು – ಆಂಜನೇಯ