ʻಬುರುಡೆʼ ಕೇಸ್‌ | ಮತ್ತೊಂದು ರಹಸ್ಯ ಸ್ಫೋಟ – ಕೇರಳದ ಯೂಟ್ಯೂಬರ್ ಮನಾಫ್‌ಗೆ SIT ನೋಟಿಸ್

– ಕಾಡಿನಿಂದ ಬುರುಡೆ ತಂದಿದ್ದ ಒರಿಜಿನಲ್ ವಿಡಿಯೋ ಲಭ್ಯ
– ದೆಹಲಿ, ತಮಿಳುನಾಡು ಬೆಂಗಳೂರು ಬಳಿಕ ಧರ್ಮಸ್ಥಳ ಕೇಸ್‌ಗೆ ಕೇರಳ ಲಿಂಕ್‌

ಮಂಗಳೂರು: ಧರ್ಮಸ್ಥಳ (Dharmasthala) ವಿರುದ್ಧ ಹೂಡಿದ್ದ ಪಿತೂರಿಗಳು ಇಂಚಿಂಚೂ ಬಯಲಾಗುತ್ತಿದೆ. ಪ್ರಕರಣದ ಆರೋಪಿ ಚಿನ್ನಯ್ಯ ತಂದಿದ್ದ ಬುರುಡೆ ಎಲ್ಲಿಯದ್ದು? ಅನ್ನೋ ರಹಸ್ಯ ಬಹಿರಂಗಗೊಂಡಿದೆ. ಕಾಡಿನಿಂದ ಬುರುಡೆ ತಂದಿದ್ದ ಒರಿಜಿನಲ್‌ ವಿಡಿಯೋ ʻಪಬ್ಲಿಕ್‌ ಟಿವಿʼಗೆ (Public TV) ಲಭ್ಯವಾಗಿದೆ.

ಕಳೆದ ಜುಲೈ 11ರಂದೇ ಕೇರಳದ ಯೂಟ್ಯೂಬರ್ ಮನಾಫ್ (Kerala YouTuber Manaf) ಎಂಬಾತನ ಯುಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಆಗಿದೆ. ಈ ನಡುವೆ ಬಂಗ್ಲೆಗುಡ್ಡದಿಂದ ಬುರುಡೆ ತಂದಿರೋದಾಗಿ ತಿಮರೋಡಿ ಆಪ್ತ ಜಯಂತ್‌ ಹೇಳಿದ್ದ. ಕಾಡಿನಲ್ಲೇ ಈ ವಿಡಿಯೋ ಶೂಟ್‌ ಮಾಡಿ ಅಪ್‌ಲೋಡ್‌ ಮಾಡಲಾಗಿತ್ತು. ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲಿ, ಭೂಮಿಯ ಮೇಲ್ಬಾಗದಲ್ಲೇ ಬುರುಡೆ ಪತ್ತೆಯಾಗಿತ್ತು. ಬಳಿಕ ಕತ್ತಿ ಮೂಲಕ ಬುರುಡೆ ಹೊರತೆಗೆಯಲಾಗಿತ್ತು ಈ ಎಲ್ಲಾ ದೃಶ್ಯಗಳನ್ನು ಚಿತ್ರೀಕರಿಸಿದ ವಿಡಿಯೋವನ್ನ ಮನಾಫ್‌ ತನ್ನ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ. ಆ ಬಳಿಕವೇ ಬುರುಡೆಯನ್ನ ಧರ್ಮಸ್ಥಳಕ್ಕೆ ತರಲಾಗಿತ್ತು. ಈ ಎಕ್ಸ್‌ಕ್ಲೂಸಿವ್‌ ವಿಡಿಯೋ ಈಗ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಸೌಜನ್ಯ ಕೇಸ್‌ಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಕೇಳಲಿಲ್ಲ: ಉದಯ್‌ ಜೈನ್‌

ಕೇರಳದ ಯೂಟ್ಯೂಬರ್‌ಗೆ ನೋಟಿಸ್
ಇನ್ನೂ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಯೂಟ್ಯೂಬರ್‌ ಮನಾಫ್‌ಗೆ ವಿಶೇಷ ತನಿಖಾ ತಂಡ ನೋಟಿಸ್ ನೀಡಿದೆ. ಆರಂಭದಿಂದಲೂ ಧರ್ಮಸ್ಥಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಥೆ ಕಟ್ಟಿದ್ದ ಮನಾಫ್‌, ಕೇರಳಕ್ಕೂ ʻಬುರುಡೆʼ ಕಥೆಯನ್ನ ಹಬ್ಬಿಸಿದ್ದ. ಧರ್ಮಸ್ಥಳದಲ್ಲಿ ನೂರಾರು ಹೆಣ್ಮಕ್ಕಳ ಮೇಲೆ ಅತ್ಯಾಚಾರ ಆಗಿದೆ, ಕೊಲೆ ಮಾಡಿ ಹೂಳಲಾಗಿದೆ ಎಂದು ಹಬ್ಬಿಸಿದ್ದ ಎಂದು ಎಸ್‌ಐಟಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸಮೀರ್‌ ವಿಡಿಯೋ ವೈರಲ್‌ ಹಿಂದೆ ಭಾರಿ ಫಂಡಿಂಗ್ ಇದೆ; 308 ಟ್ರೋಲ್ ಪೇಜಸ್‌, 50-60 ಕಟೆಂಟ್ ಕ್ರಿಯೇಟರ್ಸ್ ಇದ್ದಾರೆ: ಸುಮಂತ್‌

ಯಾರು ಈ ಮನಾಫ್‌?
2024 ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ ಬರೋಬ್ಬರಿ 11 ಮಂದಿ ಮೃತಪಟ್ಟಿದ್ದರು. ಇದೇ ಘಟನೆಯಲ್ಲಿ ಲಾರಿ ಚಾಲಕ ಅರ್ಜುನ್ ಮೃತಪಟ್ಟಿದ್ದ. ಈ ಮನಾಫ್​ ಅದೇ ಲಾರಿಯ ಮಾಲೀಕ ಹಾಗೂ ಕೇರಳ ಭಾಗದ ಯೂಟ್ಯೂಬರ್​​​ ಕೂಡ.​  ಇದನ್ನೂ ಓದಿ: ಸಮೀರ್‌ ವಿಡಿಯೋದಲ್ಲಿ ಬಳಸಿದ್ದ ಒಂದು ಪದಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಜಪ್ತಿ ಮಾಡಿದ್ದಾರೆ: ಮಟ್ಟಣ್ಣನವರ್‌