ಧರ್ಮಸ್ಥಳ ವಿರುದ್ಧ ಪಿತೂರಿ ಆರೋಪ- ಅಮಿತ್‌ ಶಾ ಭೇಟಿಯಾದ ರಾಜ್ಯ ಬಿಜೆಪಿ ನಾಯಕರ ನಿಯೋಗ

ನವದೆಹಲಿ: ಧರ್ಮಸ್ಥಳ ವಿರುದ್ಧ ಪಿತೂರಿ ಆರೋಪ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ರಾಜ್ಯ ಬಿಜೆಪಿ ನಾಯಕರ ನಿಯೋಗ ಭೇಟಿಯಾಗಿದೆ.

ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಿಯೋಗ ದೆಹಲಿಗೆ ತೆರಳಿ ಅಮಿತ್‌ ಶಾರನ್ನು ಭೇಟಿಯಾಗಿದೆ. ಈ ವೇಳೆ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ. ಆರಂಭದಿಂದ ಎಸ್‌ಐಟಿ ತನಿಖೆಗೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಯಾವುದೇ ಅಸ್ಥಿಪಂಜರ ಸಿಗದಿರುವ ವಿಚಾರ ಹಾಗೂ ಬಿಜೆಪಿ ಹೋರಾಟದ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ವಿವರಣೆ ನೀಡಿದೆ.

ಘಟನೆಯ ಹಿಂದೆ ಹೊರ ರಾಜ್ಯದ ಜನರ ಕೈವಾಡ ಶಂಕೆ ಇದೆ. ಈ ಹಿನ್ನಲೆ ಸೂಕ್ತ ತನಿಖೆಯ ಅಗತ್ಯವಿದೆ ಎಂದು ನಿಯೋಗ ಪ್ರಸ್ತಾಪಿಸಿದೆ. ಆ ಮೂಲಕ ಕೇಂದ್ರದ ತನಿಖಾ ತಂಡದಿಂದ ತನಿಖೆಯಾಗಬೇಕು ಎಂದು ಪರೋಕ್ಷವಾಗಿ ಒತ್ತಾಯಿಸಿದೆ.

ಇಡಿ ಅಥವಾ ಎನ್‌ಐಎ ತನಿಖೆ ನಡೆಸುವ ಬಗ್ಗೆ ನಾಯಕರು ನೇರವಾಗಿ ವಿಚಾರ ಪ್ರಸ್ತಾಪಿಸಿಲ್ಲ. ಹೊರ ರಾಜ್ಯದ ಜನರು ಹಾಗೂ ಫಡಿಂಗ್ ಮೂಲಕ ವ್ಯವಸ್ಥಿತವಾಗಿ ಕಾರ್ಯತಂತ್ರ ನಡೆದಿದೆ. ಎಸ್‌ಐಟಿ ರಾಜ್ಯ ಸರ್ಕಾರದ ಒತ್ತಡದಲ್ಲಿ ಈ ಕಾರ್ಯ ಮಾಡದು. ಈ ಹಿನ್ನೆಲೆ ಉತ್ತಮ ತನಿಖೆಯಿಂದ ತಾರ್ಕಿಕ ಅಂತ್ಯ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ನಿಯೋಗದಿಂದ ಘಟನೆ ಮತ್ತು ಬಿಜೆಪಿ ಮಾಡಿದ ಹೋರಾಟಗಳ ಮಾಹಿತಿ ಪಡೆದಿದ್ದಷ್ಟೆ, ಯಾವುದೇ ಭರವಸೆ ನೀಡದೆ ಅಮಿತ್‌ ಶಾ ಅವರು ಕಳುಹಿಸಿದ್ದಾರೆ ಎನ್ನಲಾಗಿದೆ.