ವಿಚ್ಛೇದನದ ನಂತರ ಪತ್ನಿಗೆ ‘ಸ್ನೇಹಿತೆ ಐಶ್ವರ್ಯ’ ಎಂದು ಟ್ವಿಟ್ ಮಾಡಿದ ಸ್ಟಾರ್ ನಟ ಧನುಷ್

ರಡು ತಿಂಗಳ ಹಿಂದೆಯಷ್ಟೇ ತಮ್ಮ ವಿಚ್ಛೇದನದ ವಿಷಯ ತಿಳಿಸಿ ಅಸಂಖ್ಯಾತ ಅಭಿಮಾನಿಗಳಿಗೆ ಶಾಕ್ ಕೊಟ್ಟವರು ತಮಿಳಿನ ಹೆಸರಾಂತ ನಟ ಧನುಷ್ ಮತ್ತು ರಜನಿಕಾಂತ್ ಪುತ್ರಿ, ನಿರ್ದೇಶಕಿ ಐಶ್ವರ್ಯ ರಜನಿಕಾಂತ್. ಇವರ ಈ ನಿರ್ಧಾರಕ್ಕೆ ರಜನಿಕಾಂತ್ ಅಭಿಮಾನಿಗಳು, ಧನುಷ್ ಅಭಿಮಾನಿಗಳು ಮತ್ತು ಐಶ್ವರ್ಯ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದರು. ಇಬ್ಬರನ್ನೂ ಕೂರಿಸಿಕೊಂಡು ಮತ್ತೆ ಒಂದಾಗುವ ಪ್ರಯತ್ನಗಳು ನಡೆದರೂ, ಅವು ಫಲ ಕೊಡಲಿಲ್ಲ. ಸದ್ಯ ದೂರವಾಗಿ ತಮ್ಮ ಪಾಡಿಗೆ ತಾವು ಕೆಲಸದಲ್ಲಿ ಬ್ಯುಸಿ ಆಗಿರುವ ಧನುಷ್ ಮತ್ತು ಐಶ್ವರ್ಯ ಪರಸ್ಪರ ಶುಭಾಶಯಗಳನ್ನು ಹೇಳಿಕೊಂಡಿದ್ದಾರೆ. ಮಾಜಿ ಪತ್ನಿಗೆ ‘ಸ್ನೇಹಿತೆ ಐಶ್ವರ್ಯ’ ಎಂದು ಬರೆದು ಧನುಷ್ ಪ್ರೀತಿ ತೋರಿದ್ದಾರೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

ಐಶ್ವರ್ಯ ಅವರು ನಿರ್ದೇಶನ ಮಾಡಿರುವ ಒಂದು ಮ್ಯೂಸಿಕ್ ವಿಡಿಯೋ ಯೂಟ್ಯೂವೊಂದರಲ್ಲಿ ರಿಲೀಸ್ ಆಗಿದೆ. ಆ ಲಿಂಕ್ ಅನ್ನು ಅವರು ಶೇರ್ ಕೂಡ ಮಾಡಿದ್ದಾರೆ. ಆ ವಿಡಿಯೋ ಆಲ್ಬಂ ನೋಡಿರುವ ಧನುಷ್ ‘ಹೊಸ ಮ್ಯೂಸಿಕ್ ವಿಡಿಯೋ ಮಾಡಿರುವ ನನ್ನ ಪ್ರೀತಿಯ ಫ್ರೆಂಡ್ ಐಶ್ವರ್ಯಗೆ ಶುಭಾಶಯಗಳು’ ಎಂದು ಧನುಷ್ ಟ್ವಿಟ್ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಐಶ್ವರ್ಯ ಕೂಡ ಅಷ್ಟೇ ಕೂಲ್ ಆಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

2004ರಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ಐಶ್ವರ್ಯ ಮತ್ತು ಧನುಷ್, 18 ವರ್ಷಗಳ ದಾಂಪತ್ಯ ಜೀವನದಲ್ಲಿ ಒಟ್ಟಾಗಿ ನಡೆದವರು. ಈಗಷ್ಟೇ ಅವರು ದೂರವಾಗಿದ್ದಾರೆ. ತಮ್ಮ ಈ ಖಾಸಗಿ ವಿಷಯವನ್ನು ಗೌರವಿಸಿ ಎಂದು ಹೇಳುವ ಮೂಲಕ ತಾವು ವಿಚ್ಛೇದನಕ್ಕೆ ಅರ್ಜಿ ಹಾಕಿರುವ ವಿಷಯವನ್ನು ಬಹಿರಂಗ ಪಡಿಸಿದ್ದರು. ಆದರೆ, ಈ ಪ್ರೀತಿ ನಿರಂತರವಾಗಿ ಇಬ್ಬರ ಮಧ್ಯೆಯೂ ಇರಲಿದೆ ಎಂದು ಮಾತು ಕೊಟ್ಟಿದ್ದರು. ಆ ಮಾತನ್ನು ಧನುಷ್ ಇದೀಗ ಉಳಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *