ಕಿಚ್ಚ ಸುದೀಪ್ ಅವರ ಕೈರುಚಿ ತಿಂದು ಹೊಗಳಿದ ಡಾಲಿ ಧನಂಜಯ್

ಕಿಚ್ಚ ಸುದೀಪ್ ಅವರು ಕಿಚನ್ ನಲ್ಲಿ ತಯಾರಾದ ಅಡುಗೆಯನ್ನು ಹೊಗಳದವರೇ ಇಲ್ಲ. ಅದರಲ್ಲೂ ಸ್ವತ ಸುದೀಪ್ ಅವರೇ ತಮ್ಮ ಕೈಯಾರ ಅಡುಗೆ ಮಾಡಿ ಬಡಿಸುತ್ತಾರೆ. ಆ ರುಚಿಯನ್ನು ಬಲ್ಲವರೇ ಬಲ್ಲರು. ಅವರ ಕಿಚನ್ ಕೂಡ ಹಾಗೆಯೇ ಇದೆ. ದೇಶ ವಿದೇಶಗಳ ಅಡುಗೆ ಪಾತ್ರೆಗಳನ್ನು ಅದು ಹೊಂದಿದೆ. ಹಾಗಾಗಿ ಕೇವಲ ದೇಶಿ ಆಹಾರ ಮಾತ್ರ ಅಲ್ಲಿ ಬೇಯುವುದಿಲ್ಲ. ವಿದೇಶ ಅಡುಗೆಗಳೂ ತಯಾರಾಗುತ್ತವೆ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

ಹಾಗಂತ ಕಿಚ್ಚ ಸುದೀಪ್ ಅಡುಗೆ ಮಾಡುವುದನ್ನು ಯಾವತ್ತೂ ನಿಲ್ಲಿಸಿಲ್ಲ. ಯಾವುದೇ ದೇಶಕ್ಕೆ ಹೋಗಲಿ ಉಳಿದುಕೊಂಡ ಹೋಟೆಲ್ ನ ಕಿಚನ್ ಗೆ ಭೇಟಿ ಮಾಡದೇ ಬರುವುದಿಲ್ಲವಂತೆ. ಅಡುಗೆ ಕೋಣೆ ಹೊಕ್ಕು, ಅಲ್ಲಿ ತಯಾರಾದ ವಿಶೇಷ ಭಕ್ಷ್ಯಗಳನ್ನು ನೋಡಿ, ಅದನ್ನು ತಯಾರು ಮಾಡುವ ರೀತಿ ತಿಳಿದುಕೊಳ್ಳುತ್ತಾರಂತೆ. ಅದನ್ನು ಟ್ರೈ ಕೂಡ ಮಾಡುತ್ತಾರೆ. ಹಾಗಾಗಿ ವಿವಿಧ ಬಗೆಯ ಅಡುಗೆಗಳು ಅವರಿಗೆ ಬರುತ್ತವೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

ನಿನ್ನೆಯಷ್ಟೇ ಡಾಲಿ ಧನಂಜಯ್ ಅವರು ಸುದೀಪ್ ಮನೆಗೆ ಹೋಗಿದ್ದಾರೆ. ಇವರ ಜತೆ ನಿರ್ದೇಶಕ ನಂದ ಕಿಶೋರ್, ಸಂಗೀತ ನಿರ್ದೇಶಕ ಕಂ ಗಾಯಕ ವಾಸುಕಿ ವೈಭವ್, ಕಲಾ ನಿರ್ದೇಶಕ ಶಿವಕುಮಾರ್ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಇದ್ದಾರೆ. ಇವರೆಲ್ಲರೂ ಕಿಚ್ಚ ಸುದೀಪ್ ಅವರೇ ಅಡುಗೆ ತಯಾರಿಸಿ ಹೊಟ್ಟೆ ತುಂಬಾ ಬಡಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

ಕಿಚ್ಚನ ಕೈ ರುಚಿ ಅನುಭವಿಸಿದ ಡಾಲಿ ಧನಂಜಯ್ ತಮ್ಮ ಟ್ವಿಟರ್ ಖಾತೆಯಲ್ಲಿ ಅದನ್ನು ಬರೆದುಕೊಂಡಿದ್ದಾರೆ. ಅಡುಗೆಯ ಬಗ್ಗೆ ಹಾಡಿ ಹೊಗಳಿದ್ದಾರೆ. ಅದಕ್ಕೆ ಸಂಗೀತ ನಿರ್ದೇಶಕ ವಾಸಕಿ ವೈಭವ್ ಕೂಡ ಅನುಮೋದಿಸಿದ್ದಾರೆ. ಈ ಟ್ವಿಟ್ ಗೆ ಅನೇಕರು ಮೆಚ್ಚಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *