ಕೊಪ್ಪಳ: ಹಲಾಲ್ ಕಟ್, ಝಟ್ಕಾ ಕಟ್, ಆಜ್ಹಾನ್, ಹಿಜಬ್ ಮೊದಲಾದ ವಿವಾದ ನಡುವೆ ತನ್ನ ಮನೆಯಲ್ಲಿ ಸದಾ ಹಿಂದೂ ದೇವರನ್ನೇ ಪೂಜಿಸಿ, ಆರಾಧಿಸುತ್ತಿರುವ ವ್ಯಕ್ತಿಯೊಬ್ಬರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಳೆದ 20 ವರ್ಷಗಳಿಂದಲೂ ಹಿಂದೂ ದೇವರನ್ನೇ ಪೂಜಿಸುತ್ತಾ ಏಕತೆ ಬೆಸೆಯುವುದಕ್ಕೆ ಮುಂದಾಗಿದ್ದಾರೆ.
ಆಟೋ ಚಾಲಕನಾಗಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ನಿವಾಸಿ ಸಂಶುದ್ದೀನ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ದೇಣಿಗೆ ನೀಡಿದ್ದರು. ಇದೀಗ ತನ್ನ ಮನೆಯಲ್ಲಿ ಆಂಜನೇಯ, ಗವಿಸಿದ್ಧೇಶ್ವರ ಸೇರಿದಂತೆ ಮೊದಲಾದ ಹಿಂದೂ ದೇವತೆಗಳನ್ನು ಪೂಜೆ ಮಾಡುತ್ತಿದ್ದು, ಹಿಂದೂ ಹಬ್ಬಗಳನ್ನೂ ಆಚರಣೆ ಮಾಡುತ್ತಾ ಸೌಹಾರ್ಧತೆಯ ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ಕೋಮುದ್ವೇಷ ಕಕ್ಕುವುದು, ನನ್ನ ಹೆಸರು ಎಳೆದು ತರುವುದು ಸಿಟಿ ರವಿಗೆ ಮಾನಸಿಕ ರೋಗವಾಗಿದೆ: ಸಿದ್ದರಾಮಯ್ಯ

ಈ ಕುರಿತು ಮಾತನಾಡಿರುವ ಅವರು, ಯಾರೋ ನಾಲ್ಕು ಜನ ಮಾಡುವ ಕೆಲಸದಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ನಾವೆಲ್ಲರೂ ಹಿಂದೂ- ಮುಸ್ಲಿಮರು ಅಣ್ಣ ತಮ್ಮ ಎನ್ನುವಂತೆ ಬದುಕುತ್ತಿದ್ದೇವೆ. ನಮ್ಮ ಮನೆಯಲ್ಲೂ ಹಿಂದೂ ಹಬ್ಬಗಳನ್ನು ಆಚರಿಸುತ್ತೇವೆ. ನಮ್ಮ ಹಬ್ಬಕ್ಕೆ ಅವರು ಬರುತ್ತಾರೆ, ನಾವು ಅವರ ಹಬ್ಬಗಳಿಗೆ ಹೋಗಿ ಸಿಹಿ ತಿಂದು ಬರುತ್ತೇವೆ. ಆದರೆ ಇಂದಿನ ಸ್ಥಿತಿಯನ್ನು ಕಂಡು ಮನಸ್ಸಿಗೆ ನೋವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಬಿಜೆಪಿಯು ಬಡವರ, ದಲಿತರ ಪಕ್ಷವಾಗಿ ಮಾರ್ಪಟ್ಟಿದೆ: ಜೆಪಿ ನಡ್ಡಾ
ನಾವು ಆಂಜನೇಯನನ್ನು ಜನ್ಮಕೊಟ್ಟ ದೇವರೆಂದು ಆರಾಧಿಸುತ್ತೇವೆ. ಕುಲದೇವರಿಗಿಂತಲೂ ಆಂಜನೇಯ ಶ್ರೇಷ್ಠ ಎಂದು ಹೇಳುತ್ತೇವೆ. ಆದರಿಂದು ಸಣ್ಣ-ಸಣ್ಣ ಮಕ್ಕಳೂ ಧರ್ಮ ಸಂಕಟಕ್ಕೆ ಸಿಲುಕುತ್ತಿದ್ದಾರೆ. ಅವರ ಮನಸ್ಸಿನಲ್ಲೂ ಅದೇ ಚಿಂತನೆಗಳು ಬೆಳೆಯುತ್ತಿದ್ದು, ಇದು ಮುಂದೆ ದೇಶಕ್ಕೆ ಮಾರಕವಾಗಲಿದೆ. ಸಹೃದಯದಿಂದ ಬದುಕುವವರಿಗೆ `ಧರ್ಮ’ಸಂಕಟ ಏಕೆ ಬೇಕು? ಇದೆಲ್ಲವನ್ನೂ ಇಲ್ಲಿಗೆ ನಿಲ್ಲಿಸೋಣ ಎಂದು ಮನವಿ ಮಾಡಿದ್ದಾರೆ.

Leave a Reply