ಮತ್ತೊಂದು ಬಂಪರ್ ಆಫರ್ ಬಾಚಿಕೊಂಡ ಶ್ರೀಲೀಲಾ

ನ್ನಡದ ನಟಿ ಶ್ರೀಲೀಲಾ (Sreeleela) ಟಾಲಿವುಡ್‌ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ‘ಪುಷ್ಪ 2’ನಲ್ಲಿ (Pushpa 2) ಸೊಂಟ ಬಳುಕಿಸಿದ ಮೇಲೆ ನಟಿಗೆ ಅವಕಾಶಗಳು ದುಪ್ಪಟ್ಟಾಗಿದೆ. ಇದೀಗ ಬಂಪರ್ ಅವಕಾಶವೊಂದು ನಟಿಯ ಪಾಲಾಗಿದೆ. ತೆಲುಗಿನ ಸ್ಟಾರ್‌ ನಟನ ಪುತ್ರನಿಗೆ ನಾಯಕಿಯಾಗಿದ್ದಾರೆ. ಇದನ್ನೂ ಓದಿ:ತಂದೆಯ ಆರೋಗ್ಯದ ಬಗ್ಗೆ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್‌ ಹೇಳಿದ್ದೇನು?

ಕೆಲ ದಿನಗಳ ಹಿಂದೆ ನಾಗ ಚೈತನ್ಯಗೆ ನಾಯಕಿಯಾಗುವ ಅವಕಾಶ ಶ್ರೀಲೀಲಾಗೆ ಸಿಕ್ಕಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಅಖಿಲ್ ಅಕ್ಕಿನೇನಿ ನಟನೆಯ ಹೊಸ ಚಿತ್ರಕ್ಕೆ ‘ಕಿಸ್ಸಿಕ್’ ನಟಿ ಹೀರೋಯಿನ್ ಆಗಿದ್ದಾರೆ ಎನ್ನಲಾಗಿದೆ. ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದ್ದು, ಕಥೆ ವಿಭಿನ್ನವಾಗಿದೆಯಂತೆ. ಈ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಅಕ್ಕಿನೇನಿ ಸಹೋದರರಿಗೆ ನಾಯಕಿಯಾಗ್ತಿದ್ದಾರೆ ಎಂಬ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹಾಗಾದ್ರೆ ಸದ್ಯ ಹರಿದಾಡುತ್ತಿರುವ ಈ ವಿಚಾರ ನಿಜನಾ? ಚಿತ್ರತಂಡದ ಕಡೆಯಿಂದ ಕ್ಲ್ಯಾರಿಟಿ ಸಿಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.