ಕಂಗನಾ ರಣಾವತ್ ಕನಸು ನುಚ್ಚುನೂರು : ಬಾಕ್ಸ್ ಆಫೀಸಿನಲ್ಲಿ ಕೈ ಹಿಡಿಯಲಿಲ್ಲ ‘ಧಾಕಡ್’

ನಿನ್ನೆ ಕಂಗನಾ ರಣಾವತ್ ನಟನೆಯ ‘ಧಾಕಡ್’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದ ಬಗ್ಗೆ ಕಂಗನಾ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಇದು ಅವರ ವೃತ್ತಿ ಜೀವನದ ಅಪರೂಪದ ಸಿನಿಮಾ ಎಂದೇ ಹೇಳಿಕೊಂಡಿದ್ದರು. ಹೀಗಾಗಿ ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ಮೊದಲ ದಿನವೇ ಕೋಟಿ ಕೋಟಿ ಬಾಚಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕಂಗನಾ ಕನಸು ಈ ಸಿನಿಮಾದ ಮೂಲಕ ನುಚ್ಚುನೂರಾಗಿದೆ. ಇದನ್ನೂ ಓದಿ : ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’

ಧಾಕಡ್ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಎನ್ನುವ ಕಾರಣಕ್ಕಾಗಿಯೇ ಅವರು ಹಲವು ದಿನಗಳನ್ನು ಈ ಚಿತ್ರದ ಪ್ರಚಾರಕ್ಕಾಗಿ ಮೀಸಲಿಟ್ಟಿದ್ದರು. ಬಹುತೇಕ ಕಡೆ ಹೋಗಿ ಸಿನಿಮಾದ ಪ್ರಚಾರ ಮಾಡಿದರು. ಈ ಸಿನಿಮಾದ ಪ್ರಚಾರದಲ್ಲೇ ವಿವಾದಿತ ಮಾತುಗಳನ್ನೂ ಆಡಿದರು. ಅದು ಸಿನಿಮಾದ ಪ್ರಚಾರದ ಒಂದು ಭಾಗ ಅಲ್ಲದೇ ಇದ್ದರೂ, ಈ ಸಿನಿಮಾಗೆ ಅವೆಲ್ಲವೂ ಪ್ಲಸ್ ಪಾಯಿಂಟ್ ಆಗಲಿದೆ ಎಂದು ನಂಬಲಾಗಿತ್ತು. ಆದರೆ, ಅವು ಯಾವವೂ ಕೆಲಸ ಮಾಡಿಲ್ಲ. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

ಕಂಗನಾ ರಣಾವತ್ ಅವರ ಈವರೆಗೂ ಬಿಡುಗಡೆಯಾದ ಸಿನಿಮಾಗಳಲ್ಲೇ ಧಾಕಡ್ ಕಳಪೆ ಮಟ್ಟದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಅಂತೆ. ಮೊದಲ ದಿನದ ಕಲೆಕ್ಷನ್ ಒಂದು ಕೋಟಿಯೂ ಆಗಿಲ್ಲವೆಂದು ಬಾಕ್ಸ್ ಆಫೀಸ್ ಮೂಲಗಳು ಹೇಳುತ್ತಿವೆ. ಫಸ್ಟ್ ಶೋ ಬಹುತೇಕ ಖಾಲಿ ಖಾಲಿ ಎಂದು ಹೇಳಲಾಗುತ್ತಿದ್ದು, ಸೆಕೆಂಡ್ ಶೋ ನಲ್ಲೂ ಅದು ಚೇತರಿಸಿಕೊಳ್ಳಲಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಮೊದಲ ದಿನದ ಕಲೆಕ್ಷನ್ ಐದು ಕೋಟಿ ಎಂದು ಹೇಳಲಾಗಿತ್ತು. ಒಂದು ಕೋಟಿಯನ್ನೂ ಅದು ದಾಟಿಲ್ಲ ಎನ್ನುತ್ತಾರೆ ಸಿನಿ ಲೋಕದ ಲೆಕ್ಕಾಚಾರ ಪಂಡಿತರು. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

ಈ ಸಿನಿಮಾದ ಜೊತೆಯಾಗಿಯೇ ಬಿಡುಗಡೆಯಾದ ‘ಭುಲ್ ಭುಲೈಯಾ 2’ ಸಿನಿಮಾ ಭಾರೀ ಸದ್ದು ಮಾಡಿದೆ. ಮೊದಲ ದಿನದ ಕಲೆಕ್ಷನ್ ಸೂಪರ್ ಆಗಿಯೇ ಬಂದಿದೆಯಂತೆ. ಹಾಗಾಗಿ ಕಂಗನಾ ರಣಾವತ್ ಸಿನಿಮಾ ಈ ಚಿತ್ರದ ಮುಂದೆ ಮಂಡಿಯೂರಿ ಕೂತಿದೆ.

Comments

Leave a Reply

Your email address will not be published. Required fields are marked *