ರೂಲ್ಸ್ ಮಾಡಿದ್ದ ಡಿಜಿಪಿ ನೀಲಮಣಿ ಅವರಿಂದಲೇ ನಿಯಮ ಉಲ್ಲಂಘನೆ!

ಬೆಂಗಳೂರು: ರೂಲ್ಸ್ ಮಾಡಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಅವರಿಂದಲೇ ನಿಯಮ ಉಲ್ಲಂಘನೆಯಾಗಿದ್ದು, ಈ ಮೂಲಕ ದೊಡ್ಡವರಿಗೊಂದು ನ್ಯಾಯ ಚಿಕ್ಕವರಿಗೊಂದು ನ್ಯಾಯವೇ ಎನ್ನುವ ಮಾತು ಕೇಳಿಬಂದಿದೆ.

ಮಹಿಳಾ ಪೊಲೀಸ್ ಸಿಬ್ಬಂದಿ ಸೀರೆ ಉಟ್ಟು ಡ್ಯೂಟಿಗೆ ಬರಬಾರದು. ಕಡ್ಡಾಯವಾಗಿ ಶರ್ಟ್ ಮತ್ತು ಪ್ಯಾಂಟ್ ಇರುವ ಯೂನಿಫಾರ್ಮ್ ಹಾಕಿಕೊಂಡು ಕೆಲಸ ಮಾಡಬೇಕು. ಗರ್ಭಿಣಿ ಪೊಲೀಸ್ ಸಿಬ್ಬಂದಿಗೆ ಇನ್ ಶರ್ಟ್ ಇಂದ ವಿನಾಯಿತಿ ಕೊಟ್ಟು ಸುತ್ತೋಲೆ ಹೊರಡಿಸಲಾಗಿತ್ತು. ಈ ಸುತ್ತೋಲೆಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಅವರೇ ಹೊರಡಿಸಿದ್ದರು. ಇದನ್ನೂ ಓದಿ:  ಮಹಿಳಾ ಪೊಲೀಸರು ಸೀರೆ ಉಡುವಂತಿಲ್ಲ, ಕೈ ತುಂಬ ಬಳೆ ತೊಡುವಂತಿಲ್ಲ: ಹೊಸ ಡ್ರೆಸ್ ಕೋಡ್‍ನಲ್ಲಿ ಏನಿದೆ?

ಅಂದಿನಿಂದ ಕಷ್ಟವಾದರು ಕೆಳಹಂತದ ಸಿಬ್ಬಂದಿಗಳು ಡಿಜಿ ಅಂಡ್ ಐಜಿಪಿಯ ಆದೇಶ ಪಾಲನೆ ಮಾಡುತ್ತಿದ್ದರು. ಆದರೆ ಈ ಸುತ್ತೋಲೆ ಹೊರಡಿಸಿದವರಿಂದಲೇ ಈಗ ರೂಲ್ಸ್ ಬ್ರೇಕ್ ಆಗಿದೆ. ಹೊಸ ವರ್ಷದ ಬಂದೋಬಸ್ತ್ ವೀಕ್ಷಣೆಗೆ ಬಂದಿದ್ದ ಡಿಜಿ ಅಂಡ್ ಐಜಿಪಿ ಮಫ್ತಿಯಲ್ಲಿ ಬಂದಿದ್ದರು. ಗೃಹ ಸಚಿವರು ಸ್ಥಳ ವೀಕ್ಷಣೆಯಲ್ಲಿದ್ದರೂ ಮೇಡಂ ಯೂನಿಫಾರ್ಮ್ ಧರಿಸಲಿಲ್ಲ.

ದೊಡ್ಡವರೇ ಈ ರೀತಿ ತಾವು ಮಾಡಿದ ನಿಯಮವನ್ನು ಪಾಲಿಸಲಿಲ್ಲ. ಇಲಾಖೆಗೆ ಮುಖ್ಯಸ್ಥರು ಆಗಿರುವುದರಿಂದ ಅವರಿಗೆ ಯೂನಿಫಾರ್ಮ್ ಅವಶ್ಯಕತೆಯಿಲ್ಲ. ಆದರೆ ನೈತಿಕತೆ ಇಂದಾದರೂ ಯೂನಿಫಾರ್ಮ್ ಧರಿಸಬಹುದಿತ್ತು. ಅವರನ್ನು ನೋಡಿ ಕೆಳಹಂತದ ಸಿಬ್ಬಂದಿಗೆ ಸ್ಪೂರ್ತಿ ಬರಬೇಕಿತ್ತು ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಬಿಪ್ರಾಯಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *