ಪ್ರಥಮ್ ಕುಮಾರ್ ಆಗಿ ಬದಲಾದ ಬಿಗ್‍ಬಾಸ್ ಪ್ರಥಮ್

ಬೆಂಗಳೂರು: ಕಳೆದ ಬಾರಿಯ ಬಿಗ್‍ಬಾಸ್ ವಿನ್ನರ್ ಪ್ರಥಮ್ ಅಭಿನಯದ `ದೇವ್ರಂಥಾ ಮನುಷ್ಯ’ ಸಿನಿಮಾ ಟೀಸರ್ ಸೋಮವಾರ ಬಿಡುಗಡೆಯಾಗಿದ್ದು, ಇದರಲ್ಲಿ ಪ್ರಥಮ್ ಕುಮಾರ್ ಆಗಿ ಪ್ರಥಮ್ ಬದಲಾಗಿದ್ದಾರೆ.

ಹೌದು, ತಮ್ಮ ಹುಚ್ಚು ಪಂಚಿಂಗ್ ಡೈಲಾಗ್ ಗಳಿಂದ ಫೇಮಸ್ ಆಗಿರುವ ಪ್ರಥಮ್ ಸದ್ಯ ದೇವ್ರಂಥಾ ಮನುಷ್ಯ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ತಮ್ಮ ಸಿನಿಮಾದ ಟೀಸರ್ ನಲ್ಲಿ ರಾಜ್‍ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಮತ್ತು ಪ್ರಥಮ್ ಕುಮಾರ್ ಇರುವರೆಗೂ ಕನ್ನಡಕ್ಕೆ ಏನು ಆಗಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ.

ಈ ಮೂವರು ಲೆಜೆಂಡ್, ಅವರ ಹೆಸರನ್ನು ಹೇಳಿಕೊಂಡು ಬೆಳೀತಾಯಿದ್ದೀನಿ, ಬೆಳಸಿ ಎಂದು ಪ್ರಥಮ್ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಯಶ್ ಹೆಸರನ್ನು ಬಳಸಿಕೊಂಡು ಪ್ರಥಮ್ ಡೈಲಾಗ್ ಹೇಳಿದ್ದರು.

ಪೂರ್ಣಿಮಾ ಮತ್ತು ಬೆತ್ತನಗೆರೆ ಖ್ಯಾತಿಯ ನಯನ ಸಿನಿಮಾದಲ್ಲಿ ಪ್ರಥಮ್ ಗೆ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕಿರಿಕ್ ಕೀರ್ತಿ ಸಹ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಿನಿಮಾಗೆ ಕಿರಣ್ ಶೆಟ್ಟಿ ನಿರ್ದೇಶನವಿದ್ದು, ಸುರೇಶ್ ಮತ್ತು ವೆಂಕಟಗೌಡ ಬಂಡವಾಳ ಹೂಡಿದ್ದಾರೆ. ರಾಜೇಶ್ ರಾಮನಾಥ್ ಸಂಗೀತವಿದೆ. ಸಿನಿಮಾ ಆದಷ್ಟೂ ಬೇಗ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ.

Comments

Leave a Reply

Your email address will not be published. Required fields are marked *