ಉಡುಪಿ: ಶಿರೂರು ಮಠವನ್ನು ಪೊಲೀಸರು ಜುಲೈ 19ರಿಂದ 21ರವರೆಗೆ ಅಂದರೆ ಇಂದಿನಿಂದ ಶನಿವಾರದವರಗೆ ಸುಪರ್ದಿಗೆ ಪಡೆದಿದ್ದು, ಸಾರ್ವಜನಿಕರಿಗೆ ಮಠ ಪ್ರವೇಶಕ್ಕೆ ನಿಷೇಧಿಸಲಾಗಿದೆ.
ಶಿರೂರು ಶ್ರೀಗಳಿಗೆ ವಿಷ ಪ್ರಾಶನ ಮಾಡಿಸಲಾಗಿದೆ ಎಂಬುದರ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರು ಹಿರಿಯಡ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಕ್ಷ್ಯಾಧಾರ ಪರಿಶೋಲನೆ ಹಿನ್ನೆಲೆಯಲ್ಲಿ ಪೊಲೀಸರು ಇಂದಿನಿಂದ ಮೂರು ದಿನಗಳ ಮಠದ ಪರಿಶೀಲನೆ ನಡೆಸಲಿದ್ದಾರೆ. ತನಿಖೆಗೆ ತೊಂದರೆ ಆಗದಿರಲಿ ಎಂಬ ಸಾರ್ವಜನಿಕರಿಗೆ ಮಠದ ಪ್ರವೇಶವನ್ನು ನಿರ್ಭಂಧಿಸಲಾಗಿದೆ ಎಂದು ಎಸ್.ಪಿ. ಲಕ್ಷ್ಮಣ್ ನಿಂಬರ್ಗಿ ಮಾಹಿತಿ ನೀಡಿದ್ದಾರೆ.
ಸಾವಿಗೆ ಬೇರೆ ಕಾರಣಗಳಿದೆಯಾ? ವಿಷಪ್ರಾಶನ ಆದಂತಹ ಕೆಲವು ಸಂಶಯಗಳನ್ನು ಕೆಎಂಸಿಯ ವೈದ್ಯರು ಹೇಳಿರುತ್ತಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು. ಇದೊಂದು ಅನುಮಾನಸ್ಪದವಾದ ಸಾವಾಗಿದ್ದು, ಹೀಗಾಗಿ ಈ ಸಾವಿಗೆ ನಿಖರ ಕಾರಣವೇನೆಂದು ನಮಗೆ ಪೊಲೀಸ್ ತನಮಿಖೆಯ ಮೂಲಕ ತಿಳೀದುಬರಬೇಕು ಅಂತ ದೂರಿನಲ್ಲಿ ಲಾತವ್ಯ ತಿಳಿಸಿದ್ದಾರೆ.

Leave a Reply