– ದರ್ಶನ್‌ಗೆ ಬೆನ್ನುನೋವಿರೋದು ನಿಜ ಎಂದ `ಡೆವಿಲ್’ ನಾಯಕಿ
ದರ್ಶನ್ ಅವರಿಗೆ ಬೆನ್ನು ನೋವಿದ್ದಿದ್ದು (Back pain) ನಿಜ, ಶೂಟಿಂಗ್ ಸೆಟ್‌ನಲ್ಲಿ ನನ್ನನ್ನ ಎತ್ತಿಕೊಳ್ಳುವ ದೃಶ್ಯ ಮಾಡುವಾಗ ನೆಲದ ಮೇಲೆ ಬಿದ್ದು ಮಲಗಿಬಿಟ್ಟಿದ್ರು ಅಂತ ಡೆವಿಲ್ ಸಿನಿಮಾ ನಾಯಕಿ ರಚನಾ ರೈ (Rachana Rai) ಹೇಳಿದ್ದಾರೆ.

ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿರುವ ನಟ ದರ್ಶನ್ (Darshan) ಈ ಹಿಂದೆ ಬೆನ್ನುನೋವಿಗೆ ಸರ್ಜರಿ ಮಾಡಿಸಿಕೊಳ್ಳಬೇಕೆಂದು ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಬಳಿಕ ರೆಗ್ಯುಲರ್ ಬೇಲ್ ಕೂಡ ಸಿಕ್ಕಿತ್ತು. ಇದಾದ ಕೆಲ ದಿನಗಳಲ್ಲೇ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿತು. ಬೇಲ್ ರದ್ದುಗೊಳಿಸಿದ ಬಳಿಕ ʻಡೆವಿಲ್ʼ ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ದರ್ಶನ್‌ಗೆ ಬೆನ್ನುನೋವು ಇರೋ ಬಗ್ಗೆ `ಡೆವಿಲ್’ ಚಿತ್ರದ ನಾಯಕಿ ರಚನಾ ರೈ ʻಪಬ್ಲಿಕ್ ಟಿವಿʼ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ದರ್ಶನ್ ಬೆನ್ನುನೋವಿನ ನಾಟಕವಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿದ್ದು ಸಿನಿಮಾ ಸೆಟ್ಟಲ್ಲಿ ಬೆನ್ನುನೋವಿರಲಿಲ್ವಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ರಚನಾ, ʻದರ್ಶನ್ ಸರ್‌ಗೆ ಆಗಾಗ ತುಂಬಾ ಬೆನ್ನುನೋವು ಕಾಣಿಸಿಕೊಳ್ತಿತ್ತು, ನಾನೇ ಪ್ರತ್ಯಕ್ಷಸಾಕ್ಷಿ. ಅವರು ಟ್ಯಾಬ್ಲೆಟ್ ತಗೊಳ್ತಾ ಇದ್ರು. ಜ್ವರ ಬಂದಿದ್ರೂ, ವಾಮಿಟ್ ಮಾಡ್ತಿದ್ರೂ, ಶೂಟಿಂಗ್‌ಗೆ ತೊಂದ್ರೆ ಆಗಬಾರದು ಅಂತ ರೆಸ್ಟ್ ಮಾಡದೆ ಕ್ಯಾಮೆರಾ ಮುಂದೆ ಬರ್ತಿದ್ರು. ಅವರು ಬೆನ್ನುನೋವಿರೋದು ನಿಜ. ಬೆನ್ನುನೋವಿಂದ ಒದ್ದಾಡಿದ್ದಾರೆ ಎಂದಿದ್ದಾರೆ.

ಜೊತೆಗೆ ಶೂಟಿಂಗ್ ಸೆಟ್‌ನಲ್ಲಿ ದರ್ಶನ್ ಬೆನ್ನುನೋವು ಕಾಣಿಸಿಕೊಂಡಿದ್ದ ವಿಡಿಯೋ ಬಗ್ಗೆ ಮಾತನಾಡಿ, ದೃಶ್ಯವೊಂದರ ಶೂಟಿಂಗ್ ಆಗ್ತಿತ್ತು. ನನ್ನನ್ನ ಎತ್ತಿಕೊಳ್ಳುವ ದೃಶ್ಯ ಚಿತ್ರೀಕರಣ ಮಾಡಬೇಕಿತ್ತು. ಆಗ ಬೆನ್ನುನೋವು ಕಾಣಿಸಿಕೊಂಡಿತ್ತು. ನಿರ್ದೇಶಕರು ಆಗಲ್ಲ, ಅಂದ್ರೆ ಬೇಡ ಅಂದ್ರು, ನಾನು ಮಾಡ್ತೀನಿ ಅಂತ ಒಪ್ಪಿಕೊಂಡ್ರು. ಕಟ್ ಹೇಳಿದ ಬಳಿಕ ನನ್ನನ್ನ ಹಾಗೆ ಕೆಳಕ್ಕಿಳಿಸಿ ಬೆನ್ನುನೋವಾಗಿ ಹಾಗೇ ನೆಲದ ಮೇಲೆ ಬಿದ್ದು ಮಲಗಿಬಿಟ್ರು. ದರ್ಶನ್ ಅವರಿಗೆ ಬೆನ್ನೊನೋವಿರೋದು ನಿಜ ಅಂತ ಸತ್ಯ ಬಹಿರಂಗಪಡಿಸಿದ್ರು ನಟಿ ರಚನಾ ರೈ.
