ಮೋದಿ ಭಾಷಣದಿಂದ ದೇಶ ಅಭಿವೃದ್ಧಿ ಆಗುತ್ತಾ: ಸೋನಿಯಾ ಗಾಂಧಿ

ವಿಜಯಪುರ:ಎಲ್ಲ ಜಾತಿ ವರ್ಗವನ್ನ ಒಗ್ಗೂಡಿಸಿಕೊಂಡು ಹೋಗುವುದು ಕಾಂಗ್ರೆಸ್ ಪಕ್ಷ. ಅದಕ್ಕಾಗಿ ಈ ಬಾರಿ ಮತ್ತೆ ಕಾಂಗ್ರೆಸ್ ಗೆ ಮತ ನೀಡಿ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ನಿಮ್ಮಲ್ಲಿಗೆ ಬಂದಿರುವುದು ತೀವ್ರ ಸಂತೋಷವಾಗಿದೆ. ಇದು ಬಸವಣ್ಣನ ಭೂಮಿ ಇಂತಹ ಮಹಾನ್ ಭೂಮಿಗೆ ನಮನ ಮಾಡುತ್ತೇನೆ. ಸಾಂಸ್ಕೃತಿಕ ಸಮ್ಮಿಲನ ಇಲ್ಲಿದೆ. ಸಿದ್ಧರಾಮಯ್ಯ ಸರಕಾರ ಎಲ್ಲ ಜಾತಿ ವರ್ಗದವರಿಗಾಗಿ ಕೆಲಸವನ್ನು ಮಾಡಿದೆ ಇದು ಶ್ಲಾಘನೀಯ. ದೇಶದಲ್ಲಿ ನಂ.1 ರಾಜ್ಯ ಮಾಡುವಲ್ಲಿ ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ. ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿದ್ಧರಾಮಯ್ಯ ಸರಕಾರ ಇಂದಿರಾ ಕ್ಯಾಂಟೀನ್ ಮೂಲಕ ಬಡ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರೆ. ಆದರೆ ವಿರೋಧ ಪಕ್ಷಗಳು ಮಾತ್ರ ಕರ್ನಾಟಕದಲ್ಲಿ ನರೇಗಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಾಗ ಮೋದಿ ಸೇರಿದಂತೆ ಎಲ್ಲರು ವಿರೋಧ ಮಾಡಿದರು. ಕರ್ನಾಟಕ ರಾಜ್ಯದಲ್ಲಿ ಸತತ ಬರಗಾಲವನ್ನು ರೈತರು ಎದುರಿಸುತ್ತಿದ್ದಾರೆ. ಸಿದ್ಧರಾಮಯ್ಯ ನವರು ಕಷ್ಟ ನೋಡಲಾಗದೆ ಮೋದಿಯವರಿಗೆ ಭೇಟಿ ಮಾಡಿ ಸಹಾಯದ ಹಸ್ತ ಚಾಚಿದರು. ಆದರೆ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲು ಮೋದಿ ಮುಂದಾಗಲಿಲ್ಲ. ಇದು ಕರ್ನಾಟಕದ ಜನರಿಗೆ ಮಾಡಿದ ಅವಮಾನ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರ ಇರುವ ರಾಜ್ಯಗಳಿಗೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಆದರೆ ಕರ್ನಾಟಕಕ್ಕೆ ಮೋದಿ ತಾರತಮ್ಯ ಮಾಡಿದ್ದಾರೆ. ಇದೆನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ಇಲ್ಲಿನ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದೆ. ಆದರೆ ಮೋದಿ ಅವರು ಅವುಗಳನ್ನ ವಿರೋಧಿಸುತ್ತಿದ್ದಾರೆ. ಮೋದಿಯವರು ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಅಂತಾರೆ. ಮೋದಿ ಒಳ್ಳೆ ಭಾಷಣ ಮಾಡುತ್ತೆನೆಂದು ಗರ್ವ ಇದೆ. ಅವರು ಒಳ್ಳೆ ಭಾಷಣಕಾರರು ನಾನು ಒಪ್ಪುತ್ತೇನೆ. ಆದರೆ ಮಾತುಗಳಿಂದ ದೇಶದ ಅಭಿವೃದ್ಧಿ ಆಗುತ್ತಾ ಎಂದು ಪ್ರಶ್ನೆ ಮಾಡಿದರು.

ಬೆಲೆ ಏರಿಕೆ ಗಗನಕ್ಕೇರಿದೆ. ಹಿಂದೆಂದು ಈ ರೀತಿ ಆಗಿರಲಿಲ್ಲ. ಇವತ್ತು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಜಾಗತಿಕ ಮಟ್ಟದಲ್ಲಿ ಕುಸಿದಿದ್ದರೂ ಬೆಲೆ ಏರಿಸಿಕೊಂಡು ಹೋಗುತ್ತಿದ್ದಾರೆ. ಪ್ರಧಾನ ಮಂತ್ರಿ ಎಲ್ಲಿಗೆ ಹೋದರು ಸುಳ್ಳು ಹೇಳುತ್ತಾರೆ. ಇತಿಹಾಸವನ್ನ ತಿರುಚುತ್ತಾರೆ. ದೇಶದ ಮಹಾನ್ ನಾಯಕರನ್ನು ಅವಮಾನಿಸುತ್ತಿದ್ದಾರೆ. ದೇಶದ ನೈಜ ಸ್ಥಿತಿ ಬಗ್ಗೆ ಮಾತನಾಡುವುದಿಲ್ಲ ಎಂದು ಆರೋಪಿಸಿದರು.

ಭ್ರ್ರಷ್ಟಾಚಾರ ನಿರ್ಮೂಲ ಮಾಡುವ ಮಾತು ಎಲ್ಲಿ ಹೋಯಿತು. ಲೋಕಪಾಲ್ ಮಸೂದೆ ಏನಾಯ್ತು. ಎಲ್ಲ ಸಚಿವರುಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅವರನ್ನ ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರಿ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *