ದೊಡ್ಡಗೌಡರ ಖಡಕ್ ವಾರ್ನಿಂಗ್ – ಪ್ರತಿಭಟನೆ ಅರ್ಧಕ್ಕೆ ಕೈಬಿಟ್ಟ ಜೆಡಿಎಸ್ ಕಾರ್ಯಕರ್ತರು

ಹಾಸನ: ಸಂಸದ ಪ್ರಜ್ವಲ್‌  ರೇವಣ್ಣ (Prajwal Revanna) ಮನೆಯಿಂದ ಜೆಡಿಎಸ್ (JDS) ಕಾರ್ಯಕರ್ತರು ಆರಂಭಿಸಿದ್ದ ಪ್ರತಿಭಟನೆ ದೇವೇಗೌಡರ (H.D.Deve Gowda) ಖಡಕ್ ವಾರ್ನಿಂಗ್‍ನಿಂದ ಅರ್ಧಕ್ಕೆ ನಿಂತಿದೆ. ಕಾರ್ಯಕರ್ತರು ಭವಾನಿ ರೇವಣ್ಣರಿಗೆ (Bhavani Revanna) ಹಾಸನದ (Hassan) ಟಿಕೆಟ್ ನೀಡುವಂತೆ ಒತ್ತಾಯಿಸಿ ಎನ್.ಆರ್ ವೃತ್ತದವರೆಗೂ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಕುಮಾರಸ್ವಾಮಿಯವರ (H.D.Kumaraswamy) ಹೇಳಿಕೆಗೆ ಪ್ರತಿಯಾಗಿ ಹೋರಾಟ ಎಂದು ಬಿಂಬಿತವಾದ ಹಿನ್ನೆಲೆಯಲ್ಲಿ ದೊಡ್ಡಗೌಡರು ಕಾರ್ಯಕರ್ತರಿಗೆ ಪ್ರತಿಭಟನೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಹೋರಾಟ ನಡೆದರೆ ಪಕ್ಷದೊಳಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗುವ ಆತಂಕ ಎದುರಾಗಿ ಪ್ರತಿಭಟನೆ ತಡೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಚುನಾವಣೆ ಬಂದಾಗ ಮಾತ್ರ ನಾಯಕರು ಕಾಣಿಸುತ್ತಾರೆ- ಅಣ್ಣಾಮಲೈ ವಾಗ್ದಾಳಿ

ಪ್ರತಿಭಟನಾ ಮೆರವಣಿಗೆ ಸಂಸದರ ಮನೆಯಿಂದ ಆರಂಭಗೊಂಡು ಜಿಲ್ಲಾಪಂಚಾಯತ್‍ವರೆಗೂ ತೆರಳಿದೆ ಅಲ್ಲಿ ಗೌಡರ ಸೂಚನೆ ಬರುತ್ತಿದ್ದಂತೆ ಕಾರ್ಯಕರ್ತರು ಪ್ರತಿಭಟನೆಯನ್ನು ಮೊಟುಕುಗೊಳಿಸಿ ಸಂಸದರ ಮನೆ ಕಡೆ ನಡೆದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪರ ಭಾಷಣ, ಜೀವನ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

Comments

Leave a Reply

Your email address will not be published. Required fields are marked *