ಪ್ರಧಾನಿ ಮೋದಿಗೆ ಲೋಕಸಭೆ ಅಧಿವೇಶನದಲ್ಲೇ ಉತ್ತರ ಕೊಡ್ತೀನಿ: ಎಚ್‍ಡಿಡಿ

ಬೆಂಗಳೂರು: ಮಣ್ಣಿನ ಮಗ ಏನು ಮಾಡಿದ್ದಾರೆಂದು ಪ್ರಶ್ನಿಸಿರುವ ಪ್ರಧಾನಿ ಮೋದಿ ಅವರಿಗೆ ಲೋಕಸಭಾ ಅಧಿವೇಶನದಲ್ಲಿಯೇ ಉತ್ತರ ಕೊಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಪದ್ಮನಾಭನಗರದ ನಿವಾಸದ ಬಳಿ ಮಾತನಾಡಿದ ಅವರು, ನನ್ನ ಬಗ್ಗೆ ಪ್ರಧಾನಿ ಮೋದಿ ಲಘುವಾಗಿ ಮಾತಾಡಿದ್ದಾರೆ. ಇದಕ್ಕೆ ಉತ್ತರ ಕೊಡುವುದಕ್ಕಾಗಿಯೇ ನಾನು ದೆಹಲಿಗೆ ಹೋಗುತ್ತಿರುವೆ. ನಾನು 50 ವರ್ಷ ಏನ್ ಮಾಡಿದ್ದೇನೆ ಎನ್ನುವುದನ್ನು ಸಂಸತ್‍ನಲ್ಲಿ ವಿವರಿಸುತ್ತೇನೆ. ಅಧಿವೇಶನ ಮುಗಿದ ಮೇಲೆ ರಾಜ್ಯದಲ್ಲೇ ಇರುತ್ತೇನೆ ಅಂತ ತಿಳಿಸಿದರು.  ಇದನ್ನು ಓದಿ: ಲೋಕಸಭೆಯಲ್ಲಿ ಇದು ನನ್ನ ಕೊನೆ ಭಾಷಣವೂ ಆಗಬಹುದು: ಎಚ್.ಡಿ.ದೇವೇಗೌಡ

ಆಡಿಯೋ ಬಗ್ಗೆ ತಪ್ಪು ಒಪ್ಪಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಮಾಜಿ ಪ್ರಧಾನಿ ದೇವೇಗೌಡ ನಿರಾಕರಿಸಿದರು. ಆಡಿಯೋ ಬಗ್ಗೆ ನಾನು ಯಾವುದೇ ರಿಯಾಕ್ಷನ್ ಕೊಡುವುದಿಲ್ಲ. ಆಡಿಯೋ ಮಾಡಿರುವವರು ಯಾರು, ಅದಕ್ಕೆ ಯಾರು ಕಾರಣ ಇದೆಲ್ಲ ನನಗೆ ಸಂಬಂಧವಿಲ್ಲ. ನಾನು ಪ್ರತಿಕ್ರಿಯೆ ಕೊಡುವುದು ಯೋಗ್ಯವಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *