ಸಣ್ಣ ವಯಸ್ಸಿನಲ್ಲಿಯೇ ನನ್ನ ಫೋಟೋ ಅಶ್ಲೀಲ ವೆಬ್‌ಸೈಟ್‌ಗೆ ಹಾಕಿದ್ರು ಎಂದ ಜಾನ್ವಿ ಕಪೂರ್

ಟಿ ಜಾನ್ವಿ ಕಪೂರ್ (Janhvi Kapoor) ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.  ಜ್ಯೂ.ಎನ್‌ಟಿಆರ್, ರಾಮ್ ಚರಣ್, ಸೂರ್ಯ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿ ತೊಡಗಿಕೊಂಡಿದ್ದಾರೆ. ಸದ್ಯ ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ’ (Mr And Mrs Mahi) ಸಿನಿಮಾ ಪ್ರಚಾರವೊಂದರಲ್ಲಿ ವೈಯಕ್ತಿಕ ಬದುಕಿನ ಬಗ್ಗೆ ನಟಿ ಮಾತನಾಡಿದ್ದಾರೆ. ಚಿಕ್ಕವಯಸ್ಸಿನಲ್ಲಿ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೋ ಹಾಕಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಪ್ರಚಾರದ ಸಂದರ್ಶನ ವೇಳೆ, 12 -13 ವರ್ಷ ವಯಸ್ಸಿನಲ್ಲಿರುವಾಗ ಸೋಷಿಯಲ್ ಮೀಡಿಯಾದಿಂದಾಗಿ ಲೈಂಗಿಕವಾಗಿ ನಾನು ಸಮಸ್ಯೆ ಎದುರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಆಗ ನನಗೆ ಚಿಕ್ಕ ವಯಸ್ಸು. ಒಮ್ಮೆ ನನ್ನ ತಾಯಿ ಮತ್ತು ತಂದೆಯೊಂದಿಗೆ ಈವೆಂಟ್‌ಗೆ ಹೋಗಿದ್ದೆ. ಆ ಚಿತ್ರಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಮಾರ್ಫಿಂಗ್ ಮಾಡಿ ಪೋರ್ನ್ ವೆಬ್‌ಸೈಟ್‌ಗಳಲ್ಲಿ ಹಾಕಿದ್ದರು. ಇದನ್ನೂ ಓದಿ:ಪ್ರಶಾಂತ್ ನೀಲ್ ಚಿತ್ರಕ್ಕೆ ಕರಣ್‍ ಜೋಹಾರ್ ಎಂಟ್ರಿ

ಆದರೆ ಇದು ಮಾರ್ಫ್ ಮಾಡಿದ ಚಿತ್ರಗಳು ಎಂದು ಹಲವರಿಗೆ ತಿಳಿದೇ ಇರಲಿಲ್ಲ. ನಿಜ ಎಂದು ನಂಬಿದ್ದರು. ಆ ಚಿಕ್ಕ ವಯಸ್ಸಿನಲ್ಲಿಯೇ ನನಗೆ ತುಂಬಾ ಆಘಾತವಾಗಿತ್ತು. ನನ್ನ ಫ್ರೆಂಡ್ಸ್ ಕೂಡ ಗೇಲಿ ಮಾಡುತ್ತಿದ್ದರು. ಆ ವಯಸ್ಸಿನಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿದೆ ಇರಲಿಲ್ಲ ಎಂದಿದ್ದಾರೆ.

‘ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ’ ಸಿನಿಮಾದಲ್ಲಿ ಬಾಲಿವುಡ್ ನಟ ರಾಜ್‌ಕುಮಾರ್ ರಾವ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಜರ್ನಿಯನ್ನು ಚಿತ್ರದ ಮೂಲಕ ತೋರಿಸಲು ಸಜ್ಜಾಗಿದ್ದಾರೆ. ಇದೇ ಮೇ 31ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.