ತೆಲುಗಿನ ಮಗಧೀರ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ದೇವ್ ಗಿಲ್ ಈಗ ಕನ್ನಡದ ಗೋಲ್ಡನ್ ಸ್ಟಾರ್ ಜೊತೆ ಭರ್ಜರಿಯಾಗಿ ಫೈಟ್ ಮಾಡಿದ್ದಾರೆ. ಸದಾ ನಗುತ್ತಿರೋ ಗಣೇಶ್ ಅದ್ಯಾಕೆ ಫೈಟ್ ಮಾಡಿದ್ದಾರೆ ಎಂದು ಕೇಳಬೇಡಿ. ಯಾಕೆಂದರೆ ಇದು ರಿಯಲ್ ಲೈಫ್ ಫೈಟ್ ಅಲ್ಲ, ರೀಲ್ ಲೈಫ್.

ಹೌದು, ಸಾಗರ್ ಸೇರಿದಂತೆ ಹಲವು ಕನ್ನಡ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿರುವ ದೇವಗಿಲ್ ಅವರು ಗಣೇಶ್ ನಾಯಕ ನಟರಾಗಿರುವ ಆರೆಂಜ್ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸನ್ನಿವೇಶಕ್ಕೆ ಬೇಕಾಗಿ ಗಣೇಶ್ ಹಾಗೂ ದೇವಗಿಲ್ ಅವರು ಅಬ್ಬರದ ಫೈಟಿಂಗ್ ಗೆ ಸಾಕ್ಷಿಯಾಗಿದ್ದಾರೆ.
ಕುಂಕುಮ ಅರಿಶಿಣ ಬಣ್ಣಗಳ ಧೂಳಿನ ನಡುವೆಯೇ ಈ ಕಲರ್ ಫುಲ್ ಫೈಟ್ ಸಿದ್ಧವಾಗಿದ್ದು, ಬಣ್ಣದಲ್ಲಿ ಮುಳುಗೇಳುವ ಮಟ್ಟಕ್ಕೆ ಈ ಬಿಗ್ ಫೈಟಿಂಗ್ ಸೀನ್ ಚಿತ್ರದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಲಿದೆ. ಗಣೇಶ್ ಹಾಗೂ ಪ್ರಶಾಂತ್ ರಾಜ್ ಕಾಂಬಿನೇಶನ್ ನಲ್ಲಿ ಮೂಡಿಬರಲಿರುವ ಎರಡನೇ ಚಿತ್ರ ಇದಾಗಿದ್ದು, ಬಣ್ಣಗಳ ನಡುವೆ ನಡೆದ ಫೈಟಿಂಗ್ ‘ಆರೆಂಜ್’ ಎಂಬ ಶೀರ್ಷಿಕೆಯ ಸಿನಿಮಾದಲ್ಲಿ ಶೋಭಿಸಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply