ಬೆಂಗಳೂರು: ಪಿಎಸ್‍ಐ ಪರೀಕ್ಷಾ ಅಕ್ರಮದ ತನಿಖೆ ಚುರುಕುಗೊಂಡಿದೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಏಳು ದಿನ ಕಳೆದ್ರೂ ಪೊಲೀಸರಿಗೆ ಬಂಧಿಸಲು ಆಗಿಲ್ಲ. ಸರ್ಕಾರವೇ ದಿವ್ಯಾ ಹಾಗರಗಿಯನ್ನು ರಕ್ಷಣೆ ಮಾಡ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪಿಎಸ್‍ಐ ಸೆಲೆಕ್ಷನ್ ಲಿಸ್ಟ್‌ನಲ್ಲಿದ್ದ ಅಭ್ಯರ್ಥಿಗಳ ವಿಚಾರಣೆಯನ್ನು ಇಂದಿನಿಂದ ಸಿಐಡಿ ಆರಂಭಿಸಿದೆ. ಕೆಪಿಎಸ್‍ಸಿ ವಶದಲ್ಲಿದ್ದ 545 ಪಿಎಸ್‍ಐ ಪರೀಕ್ಷಾರ್ಥಿಗಳ ಓಎಂಆರ್ ಶೀಟ್‍ಗಳನ್ನು ಸಿಐಡಿ ಸೀಜ್ ಮಾಡಿದೆ. ಮೊದಲ ದಿನವಾದ ಇಂದು 50 ಅಭ್ಯರ್ಥಿಗಳ ಪೈಕಿ ಐವರು ಗೈರು ಹಾಜರಾಗಿದ್ರು. ಇವರ ಮೇಲೆ ಸಿಐಡಿಗೆ ಈಗ ಅನುಮಾನ ಮೂಡಿದೆ. ವಿಚಾರಣೆಗೆ ಹಾಜರಾಗಿದ್ದ 45 ಮಂದಿಯ ಓಎಂಆರ್ ಕಾರ್ಬನ್ ಶೀಟ್‍ಗಳನ್ನು ಪರಿಶೀಲಿಸಿದೆ. ನಾಳೆ ಐವತ್ತು ಅಭ್ಯರ್ಥಿಗಳನ್ನು ಸಿಐಡಿ ವಿಚಾರಣೆಗೆ ಒಳಪಡಿಸಲಿದೆ. ಇದನ್ನೂ ಓದಿ: 35 ಲಕ್ಷ ಪಾವತಿ ಮಾಡಿ 5 ಲಕ್ಷ ಸಿಗದೇ ಪೇಚಾಡಿದ – ಆಪ್ತ ಸ್ನೇಹಿತನಿಂದಲೇ ಪಿಎಸ್‌ಐ ಅಕ್ರಮ ಲೀಕ್ ಆಗಿದ್ದು ಹೇಗೆ?

ಪ್ರಕರಣ ನಡೆದು ಏಳು ದಿನ ಕಳೆದರು ದಿವ್ಯಾ ಹಾಗರಗಿ ಬಂಧನವಾಗದೆ ಇರುವುದುರಿಂದ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ದಿವ್ಯಾ ಹಾಗರಗಿ ರಾಜ್ಯ ಬಿಟ್ಟು ಎಲ್ಲಿಯೂ ಹೋಗಿಲ್ಲ. ಅವರು ಬೆಂಗಳೂರಿನಲ್ಲಿ ಪ್ರಭಾವಿಗಳ ರಕ್ಷಣೆಯಲ್ಲಿ ಸೇಫ್ ಆಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ನಡುವೆ ನಾಳೆ ಕಲಬುರಗಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಗರಣದ ಬಿಸಿ ತಾಕುವ ಸಾಧ್ಯತೆಗಳು ಇದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು

Leave a Reply