ಚಿಕಿತ್ಸೆ ಬೇಕಾದ್ರೆ ಮಧ್ಯರಾತ್ರಿಯಿಂದಲೇ ಕ್ಯೂ ನಿಲ್ಲಬೇಕು-ಇದು ತೋರಣಗಲ್ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ..!

-ಪ್ರಶ್ನೆ ಮಾಡಿದ್ರೆ ಪ್ರವೇಟ್‍ಗೆ ಹೋಗಿ ಅಂತಾ ಅವಾಜ್

ಬಳ್ಳಾರಿ: ಈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದರೆ ಮಧ್ಯರಾತ್ರಿಯಿಂದಲೇ ಕ್ಯೂ ಹಚ್ಚಬೇಕು. ಇದು ಬಳ್ಳಾರಿ ಜಿಲ್ಲೆಯ ಸಂಡೂರು ತೋರಣಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸ್ಥಿತಿ.

ಈ ಆಸ್ಪತ್ರೆಯಲ್ಲಿ ಪ್ರತಿ ಬುಧವಾರ ಗರ್ಭಿಣಿಯರಿಗೆ ತಪಾಸಣೆ ಮಾಡಲಾಗುತ್ತದೆ. ಬುಧವಾರ ಚಿಕಿತ್ಸೆ ಪಡೆಯಬೇಕಾದ್ರೆ ಮಂಗಳವಾರವೇ ಟೋಕನ್ ಪಡೆದುಕೊಳ್ಳಬೇಕು. ಹೀಗಾಗಿ ತುಂಬು ಗರ್ಭಿಣಿಯರು ಮಧ್ಯರಾತ್ರಿಯವರೆಗೂ ನಿಂತು ಟೋಕನ್ ಪಡೆದುಕೊಳ್ಳುತ್ತಾರೆ. ಟೋಕನ್ ಪಡೆದ ಮೇಲೆ ಚಿಕಿತ್ಸೆ ನೀಡುವ ಡಾಕ್ಟರ್ ಬರೋದು ಲೇಟ್. ಡಾಕ್ಟರ್ ಬಂದ ಮೇಲೆ ಚಿಕಿತ್ಸೆ ಪಡೆಯಲು ನೂಕು ನುಗ್ಗಲು ಉಂಟಾಗುತ್ತದೆ.

ಇಷ್ಟೆಲ್ಲಾ ಕಷ್ಟಪಟ್ಟರೇ ಗರ್ಭಿಣಿಯರಿಗೆ ಚಿಕಿತ್ಸೆ ನೀಡೋದು ಮಾತ್ರ ಹಲ್ಲಿನ ಡಾಕ್ಟರ್. ರೋಗ ಮತ್ತು ಪ್ರಸೂತಿ ತಜ್ಞರ ಕೊರತೆ ಹಿನ್ನೆಲೆಯಲ್ಲಿ ಹಲ್ಲಿನ ಡಾಕ್ಟರ್ ವಿಶಾಲಾಕ್ಷಿ ಗರ್ಭಿಣಿಯರಿಗೆ ಟ್ರೀಟ್‍ಮೆಂಟ್ ಕೊಡುತ್ತಾರೆ. ತಮಗೆ ಡೆಂಟಿಸ್ಟ್ ಟ್ರೀಟ್‍ಮೆಂಟ್ ಕೊಡುತ್ತಿರೋದನ್ನು ತಿಳಿದು ಗರ್ಭಿಯರು ಮತ್ತು ಅವರ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಏನಾದ್ರೂ ಹೆಚ್ಚು ಕಮ್ಮಿ ಆದ್ರೇ ಹೇಗೆ ಅಂತಾ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ತೋರಣಗಲ್ ಸರ್ಕಾರಿ ಆಸ್ಪತ್ರೆಗೆ ಹೆರಿಗೆ ವೈದ್ಯರನ್ನ ನೀಡಿ ಅಂತಾ ಗ್ರಾಮಸ್ಥರು ಕಂಡ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಉಪಯೋಗವಾಗಿಲ್ಲ. ಅಲ್ಲದೇ ಗರ್ಭಿಣಿಯರ ಹೆರಿಗೆ ಮಾಡಿಸಲು ಬಳ್ಳಾರಿವರೆಗೆ ಅಂಬುಲೈನ್ಸ್ ಗೂ ಸಹ ಗರ್ಭಿಣಿಯರೇ ಹಣ ನೀಡಬೇಕಾಗಿರುವುದು ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನ ಎತ್ತಿ ತೋರಿಸುತ್ತಿದೆ. ಇನ್ನಾದರೂ ಆರೋಗ್ಯ ಕರ್ನಾಟಕ ಎನ್ನುವ ಸರ್ಕಾರ ಈ ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ವೈದ್ಯರನ್ನ ಒದಗಿಸಿ ಕೊಟ್ಟರೇ ಒಳ್ಳೆಯದಾಗುತ್ತೆ ಅಂತಾ ತೋರಣಗಲ್ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

ಜಿಂದಾಲ್ ನ ಬೃಹತ್ ಕಾರ್ಖಾನೆಯಿರುವ ಹಿನ್ನೆಲೆ ಹೆಚ್ಚಿರುವ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಹೀಗಾಗಿ ಇರೋ ಒಬ್ಬರು ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಪ್ರತಿ ಬುಧುವಾರದಂದು ಮಹಿಳೆಯರು ಚಿಕಿತ್ಸೆ ಪಡೆಯಲು ಸಾಕಷ್ಟು ಹರಸಾಹಸಪಡುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *