ನವರಾತ್ರಿ ಹಬ್ಬದ ಬಳಿಕ ಆಪರೇಷನ್ ಬುಲ್ಡೋಜರ್ ಚಾಪ್ಟರ್-2 ಆರಂಭ

ಬೆಂಗಳೂರು: ನವರಾತ್ರಿ ಕಳೆದ ಮೇಲೆ ಆಪರೇಷನ್ ಬುಲ್ಡೋಜರ್ (Operation Bulldozer)  ಶುರುವಾಗಲಿದೆ. ಬಡವರ ಮನೆಗೆ ಜೆಸಿಬಿ ನುಗ್ಗಿಸಿ ರಾಜಕಾಲುವೆ ಒತ್ತುವರಿ ಹೈಡ್ರಾಮಾ ನಡೆಸಿದ್ದ ಪಾಲಿಕೆಗೆ ಹೈಕೋರ್ಟ್  (High Court) ಕಿವಿಹಿಂಡಿದ ಬಳಿಕ ಈಗ ಬಿಬಿಎಂಪಿ (BBMP) ಎಚ್ಚೆತ್ತುಕೊಂಡಿದೆ.

ಬಡವರ ಮನೆಗೆ ಜೆಸಿಬಿ ನುಗ್ಗಿಸಿ ಶ್ರೀಮಂತರ ಅಂಗಳದಲ್ಲಿ ಬರೀ ಗೋಡೆ, ಖಾಲಿ ಜಾಗ ಒಡೆದು ಡ್ರಾಮಾ ಮಾಡಿದ್ದ ಬಿಬಿಎಂಪಿಗೆ ಹೈಕೋರ್ಟ್ ಚಾಟಿ ಬೀಸಿದೆ. ಅಕ್ಟೋಬರ್-25ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿದ್ದು, ವಿಳಂಬದ ಬಗ್ಗೆ ಹೈಕೋರ್ಟ್ ಕಿಡಿಕಾರಿದೆ. ಇದರ ಬೆನ್ನಲ್ಲೇ ಈಗ ನವರಾತ್ರಿ ಹಬ್ಬ ಕಳೆದ ಮೇಲೆ ತೆರವು ಕಾರ್ಯಚಾರಣೆಗೆ ಬಿಬಿಎಂಪಿ ಮುಹೂರ್ತ ಫಿಕ್ಸ್ ಮಾಡಿದೆ. ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ನಾಡಗೀತೆಯೂ ಮೊಳಗಲಿ: ಸಿಎಂ ಗೆ ಮನವಿ ಸಲ್ಲಿಸಿದ ನಟ ಝೈದ್ ಖಾನ್

ಹಬ್ಬ ಮುಗಿದ ತಕ್ಷಣ ಆಪರೇಷನ್ ಬುಲ್ಡೋಜರ್ ಎಲ್ಲಾ ವಲಯದಲ್ಲಿಯೂ ಶುರುಮಾಡಲಿದ್ದು, ಕಂದಾಯ ಇಲಾಖೆಯ ಮೂಲ ದಾಖಲೆಗಳ ಪರಿಶೀಲನೆ ಕೆಲಸವನ್ನು ಪಾಲಿಕೆ ಮಾಡುತ್ತಿದೆ. ಸದ್ಯ 592 ರಾಜಕಾಲುವೆ ಒತ್ತುವರಿ ತೆರವು ಬಾಕಿ ಇದೆ. ಇನ್ನೂ ಕೆಲವರು ಕೋರ್ಟ್‍ನಿಂದ ಸ್ಟೇ ತೆಗೆದುಕೊಂಡಿದ್ದು, ಈ ಬಗ್ಗೆ ಪರಿಶೀಲಿಸಿ ಆಪರೇಷನ್ ಬುಲ್ಡೋಜರ್ ಆರಂಭಿಸಲು ಪಾಲಿಕೆ ಪ್ಲಾನ್ ರೂಪಿಸುತ್ತಿದೆ. ಇದನ್ನೂ ಓದಿ: ಸಹಿ ಮಾಡಲು ಐಸಿಯುನಲ್ಲಿದ್ದ ವೃದ್ಧೆಯನ್ನು ಕಚೇರಿಗೆ ಕರೆಸಿಕೊಂಡ ಅಧಿಕಾರಿಗಳು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *