ಪಾರ್ಸಲ್ ಕೊಡಲು ತಡ- ರೆಸ್ಟೋರೆಂಟ್ ಮಾಲೀಕನನ್ನ ಗುಂಡಿಕ್ಕಿ ಕೊಂದ ಫುಡ್ ಡೆಲಿವರಿ ಬಾಯ್

ನವದೆಹಲಿ: ಫುಡ್ ಡೆಲಿವರಿ ಬಾಯ್ ಒಬ್ಬ ಪಾರ್ಸಲ್ ನೀಡುವುದು ತಡವಾಯಿತು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಮಾಲೀಕನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಸುನಿಲ್ ಅಗರ್‍ವಾಲ್ ಮೃತನಾಗಿದ್ದಾನೆ. ಮಿತ್ರ ಎಂಬ ಸ್ವಂತ ರೆಸ್ಟೋರೆಂಟ್ ಹೊಂದಿದ್ದರು. ರಾತ್ರಿ ಫುಡ್ ಡೆಲಿವರಿ ಬಾಯ್‍ನಿಂದ ಕೊಲೆಯಾಗಿದ್ದಾರೆ. ಫುಡ್ ತಡವಾಗುತ್ತದೆ ಎನ್ನುವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ. ಇದನ್ನೂ ಓದಿ: ಕೇಳದೇ ಪಾನಿಪುರಿ ತಂದ ಗಂಡ- ಪ್ರಾಣ ಬಿಟ್ಟ ಪತ್ನಿ

 

ಮಿತ್ರ ರೆಸ್ಟೋರೆಂಟ್‍ಗೆ ಚಿಕನ್ ಬಿರಿಯಾನಿ ಹಾಗೂ ಪೂರಿ ಸಬ್ಜಿ ಆರ್ಡರ್ ಬಂದಿತ್ತು. ಆ ಆರ್ಡರ್ ಅನ್ನು ತೆಗೆದುಕೊಂಡು ಹೋಗಲು ಮಂಗಳವಾರ ರಾತ್ರಿ ಡೆಲಿವರಿ ಬಾಯ್ ಬಂದಿದ್ದ. ಆತ ಬರುವ ವೇಳೆಗೆ ಬಿರಿಯಾನಿ ರೆಡಿಯಾಗಿತ್ತು. ಆದರೆ ಪೂರಿ, ಸಬ್ಜಿ ಪಾರ್ಸಲ್ ರೆಡಿ ಮಾಡಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೋಟೆಲ್‍ನವರು ಹೇಳಿದ್ದರು. ಇದೇ ವಿಷಯಕ್ಕೆ ಡೆಲಿವರಿ ಬಾಯ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಜಗಳವಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್ 20 ವರ್ಷದಲ್ಲಿ ನಿರ್ನಾಮ ಆಗುತ್ತೆ: ಉಮೇಶ್ ಕತ್ತಿ

ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಮನಬಂದಂತೆ ಬೈದಿದ್ದ. ಇದರಿಂದ ಕೋಪಗೊಂಡ ಆ ಸಿಬ್ಬಂದಿ ರೆಸ್ಟೋರೆಂಟ್ ಮಾಲೀಕರಿಗೆ ವಿಷಯ ತಿಳಿಸಿದ್ದ. ಜಗಳ ನಿಲ್ಲಿಸಲು ಅಲ್ಲಿಗೆ ಬಂದ ಸುನಿಲ್ ಹಣೆಗೆ ಈ ವೇಳೆ ಸ್ವಿಗ್ಗಿ ಡೆಲಿವರಿ ಏಜೆಂಟ್ ಗುಂಡು ಹಾರಿಸಿದ್ದಾನೆ. ತಕ್ಷಣ ರೆಸ್ಟೋರೆಂಟ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಡೆಲಿವರಿ ಬಾಯ್ ನಾಪತ್ತೆಯಾಗಿದ್ದು, ಆತನನ್ನು ಹಿಡಿಯಲು ಮೂರು ಪೊಲೀಸರ ತಂಡ ರಚಿಸಲಾಗಿದೆ.

Comments

Leave a Reply

Your email address will not be published. Required fields are marked *