ಸೂರ್ಯನ ಕೆಂಗಣ್ಣು – ದೆಹಲಿಯಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲು

weather

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೂರ್ಯನ ಕೆಂಗಣ್ಣಿಗೆ ಗುರಿಯಾಗಿದ್ದು, ಇಂದಿನಿಂದ ಮೇ 2 ವರೆಗೂ ಬಾರಿ ಬಿಸಿಲು ಕಂಡು ಬರಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.

Weather

ಇಂದು 43 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು 46-47 ಡಿಗ್ರಿ ಸೆಲ್ಸಿಯಸ್ ತಲುಪಬಹುದು ಎಂದು ಭವಿಷ್ಯ ನುಡಿಸಿದೆ. ವಾತಾವರಣದಲ್ಲಿ ಯಾವುದೇ ಅಡೆತಡೆಗಳಿಲ್ಲ ಕಾರಣ ಗಂಟೆಗೆ 25-35 ಕಿಲೋಮೀಟರ್ ವೇಗದಲ್ಲಿ ಬಿಸಿ ಗಾಳಿ ಬೀಸುತ್ತಿದ್ದು, ಇದು ಪರಿಸರದಲ್ಲಿ ಹೆಚ್ಚಿನ ತಾಪಮಾನ ಸೃಷ್ಟಿ ಮಾಡಲಿದೆ. ದೆಹಲಿಯ ಜೊತೆಗೆ ಪಂಜಾಬ್, ಹರಿಯಾಣ, ಚಂಡಿಗಢದಲ್ಲೂ ಇಂತಹದೇ ಪರಿಸ್ಥಿತಿ ಕಂಡು ಬರಲಿದೆ ಎಂದು ಐಎಂಡಿ ಹೇಳಿದೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂಭಾಗದಲ್ಲೇ ಏರ್‌ ಫೈರ್ – ವೆಬ್ ಡಿಸೈನರ್ ಕಿಡ್ನಾಪ್

weather

ಈವರೆಗೂ 44.3 ಡಿಗ್ರಿ ಸೆ. ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು ಏಪ್ರಿಲ್‍ನ ಸಾಮಾನ್ಯ ವರ್ಷಕ್ಕಿಂತ 3ಸೆ. ಹೆಚ್ಚಾಗಿದೆ. ನಿನ್ನೆ ಪೂರ್ವ ದೆಹಲಿಯ ಕ್ರೀಡಾ ಸಂಕೀರ್ಣದಲ್ಲಿರುವ ಹವಾಮಾನ ಕೇಂದ್ರವು ಬುಧವಾರ ನಗರದಲ್ಲಿ ಗರಿಷ್ಠ ತಾಪಮಾನ 44.2 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಮುಂಗೇಶ್‍ಪುರದಲ್ಲಿ 44.1 ಡಿಗ್ರಿ, ನಜಾಫ್‍ಗಢದಲ್ಲಿ 43.7 ಡಿಗ್ರಿ ಮತ್ತು ರಿಡ್ಜ್‌ನಲ್ಲಿ 43.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬುಧವಾರ ಗುಗಾರ್ಂವ್‍ನಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್‍ನಷ್ಟಿತ್ತು ಎಂದು ಐಎಂಡಿ ತಿಳಿಸಿದೆ. ಇದನ್ನೂ ಓದಿ: ಗುತ್ತಿಗೆದಾರನ ಸೂಪರ್‌ವೈಸರ್ ನೇಣುಬಿಗಿದು ಆತ್ಮಹತ್ಯೆಗೆ ಶರಣು

weather

ಮುಂದಿನ ಎರಡು ದಿನಗಳಲ್ಲಿ ಗರಿಷ್ಠ ತಾಪಮಾನವು ವಾಯುವ್ಯ ಭಾರತದ ಮೇಲೆ ಎರಡು ಡಿಗ್ರಿ ಸೆಲ್ಸಿಯಸ್‍ಗಳಷ್ಟು ಏರಿಕೆಯಾಗಲಿದೆ. ಬಳಿಕ ಐಎಂಡಿ ಮುನ್ಸೂಚನೆಯಂತೆ ಎರಡು ಡಿಗ್ರಿಗಳಷ್ಟು ಇಳಿಕೆಯಾಗಲಿದೆ. ದೆಹಲಿಯಲ್ಲಿ ಶುಕ್ರವಾರ ಗರಿಷ್ಠ ತಾಪಮಾನವು ಸುಮಾರು 44 ಡಿಗ್ರಿ ಸೆಲ್ಸಿಯಸ್‍ಗೆ ಏರಬಹುದು ಮತ್ತು ಮೇ 4ರ ವೇಳೆಗೆ 41 ಡಿಗ್ರಿಗಳಿಗೆ ಇಳಿಯಬಹುದು ಎಂದು ಮುನ್ಸೂಚನೆ ಸೂಚಿಸುತ್ತದೆ.

Comments

Leave a Reply

Your email address will not be published. Required fields are marked *