ನಾನು ಯಾರ ಕಾಲಿಗೂ ಬಿದ್ದು, ಕೃಪೆ ತೋರಿ ಅಂತ ಕೇಳಿಕೊಂಡಿಲ್ಲ: ಎಂ.ಕೆ.ಸ್ಟಾಲಿನ್

MK STALIN AND ANNAMALAI

ನವದೆಹಲಿ: ದೆಹಲಿ ಭೇಟಿಗೂ ನನಗೂ ಯಾವುದೇ ಸಂಬಂಧವಿಲ್ಲ. ತಮಿಳುನಾಡಿನ ಹಕ್ಕುಗಳನ್ನು ಖಾತ್ರಿಪಡಿಸುವ ಉದ್ದೇಶದಿಂದ ಮಾತ್ರ ದೆಹಲಿಗೆ ತೆರಳಿದ್ದೆ. ಆದರೆ ನಾನು ಅಲ್ಲಿ ಯಾರ ಕಾಲಿಗೂ ಬಿದ್ದು ಕೃಪೆ ತೋರಿ ಅಂತ ಕೇಳಿಕೊಂಡಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.

MODi

ಕೆಲಸಗಳನ್ನು ಮಾಡಿ ಕೊಡಿ ಎಂದು ನಾನು ಯಾರ ಕಾಲಿಗೂ ಬಿದ್ದಿಲ್ಲ. ನಾನು ತಮಿಳುನಾಡಿನ ಹಕ್ಕುಗಳಿಗಾಗಿ ದೆಹಲಿಗೆ ಹೋಗಿದ್ದೆ ಎಂದಿದ್ದಾರೆ. ಮೂರು ದಿನಗಳ ಕಾಲ ದೆಹಲಿಗೆ ಭೇಟಿ ನೀಡಿದ್ದ ಎಂ.ಕೆ ಸ್ಟಾಲಿನ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಜೊತೆಗೆ ಎನ್‍ಇಇಟಿ ವಿನಾಯಿತಿ ಸೇರಿದಂತೆ ತಮಿಳುನಾಡಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಂತೆ ಪತ್ರ ಸಲ್ಲಿಸಿದರು. ಅಲ್ಲದೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೆಹಲಿ ಸರ್ಕಾರಿ ಶಾಲೆ ಮತ್ತು ಕ್ಲಿನಿಕ್‍ಗೆ ಭೇಟಿ ನೀಡಿದರು. ಇದನ್ನೂ ಓದಿ: ಸೌದಿ ಮಿನಿಸ್ಟರ್ ಜೊತೆ ಔತಣ ಸವಿದ ಶಾರೂಖ್, ಸಲ್ಮಾನ್, ಅಕ್ಷಯ್ – ಅಸಲಿ ಕಾರಣವೇನು?

ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಜಂಟಿ ಸಂಯೋಜಕ ಕೆ. ಪಳನಿಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸ್ಟಾಲಿನ್ ಅವರು, ನಾವು ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಧಾನಿ ಮತ್ತು ಇತರ ಸಚಿವರ ಮುಂದಿಟ್ಟಿದ್ದೇವೆ ಮತ್ತು ನಮ್ಮ ಹಕ್ಕುಗಳ ಪರ ಧ್ವನಿ ಎತ್ತಿದ್ದೇವೆ ಎಂದು ಹೇಳಿದರು. ಇದನ್ನು ಸಹಿಸಲಾಗದವರು ನಾನು ಯಾವುದೋ ಸಮಸ್ಯೆಯ ಭಯದಿಂದ ನನ್ನನ್ನು ನಾನು ಉಳಿಸಿಕೊಳ್ಳಲು ಅಲ್ಲಿಗೆ ಹೋಗಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ನಾನು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳುತ್ತೇನೆ, ನಾನು ಅಲ್ಲಿ ಯಾರ ಕಾಲಿಗೂ ಬಿದ್ದು ಕೃಪೆ ತೋರಿ ಎಂದು ಕೇಳಿಕೊಂಡಿಲ್ಲ ಎಂದರು.

ನಾನು ದೆಹಲಿಗೆ ಹೋಗಿದ್ದು ತಮಿಳುನಾಡಿನ ಹಕ್ಕುಗಳಿಗಾಗಿಯೇ ಹೊರತು ಬೇರೇನೂ ಅಲ್ಲ. ಏಕೆಂದರೆ ನಾನು ಯಾವುದೇ ಸ್ಟಾಲಿನ್ ಅಲ್ಲ. ನಾನು ನನ್ನ ಪ್ರಮಾಣ ವಚನದ ಸಂದರ್ಭದಲ್ಲಿ (ಕಳೆದ ವರ್ಷ ಸಿಎಂ ಆಗಿ) ನಾನು ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಎಂದು ಹೇಳಿದ್ದೆ ಎನ್ನುವ ಮೂಲಕ ದಿವಂಗತ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ನೆನಪಿಸಿಕೊಂಡರು. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

Comments

Leave a Reply

Your email address will not be published. Required fields are marked *