ಹೋಂ ವರ್ಕ್ ಮಾಡ್ಲಿಲ್ಲ ಅಂತ ಮಕ್ಕಳಿಗೆ ಕ್ರೂರವಾಗಿ ಥಳಿಸಿದ ಟ್ಯೂಷನ್ ಟೀಚರ್

ನವದೆಹಲಿ: ಹೋಂ ವರ್ಕ್ ಮಾಡದೇ ಇರುವ ಕಾರಣ ಇಬ್ಬರು ಬಾಲಕಿಯರಿಗೆ ಟ್ಯೂಷನ್ ಟೀಚರ್ ಕ್ರೂರವಾಗಿ ಥಳಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ನಗರದ ವಾಯುವ್ಯ ಭಾಗದಲ್ಲಿರುವ ಭಲ್ಸ್ವಾ ಡೈರಿಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಬಾಲಕಿಯರ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಟ್ಯೂಷನ್ ಟೀಚರ್ ಅನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮುರುಘಾ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್‌ – ಮಕ್ಕಳ ಆಯೋಗದಿಂದ ಮಾಹಿತಿ

KILLING CRIME

ಆರು ಮತ್ತು ಎಂಟು ವರ್ಷದ ಇಬ್ಬರು ಬಾಲಕಿಯರು ಸಹೋದರಿಯರಾಗಿದ್ದು, ಅಳುತ್ತ ಮನೆಗೆ ಹಿಂದಿರುಗಿದಾಗ ಅವರ ದೇಹದ ಮೇಲೆ ಏಟಿನ ಗುರುತುಗಳಿತ್ತು. ಅಲ್ಲದೇ ಓರ್ವ ಮಗಳು ಪ್ರಜ್ಞೆ ತಪ್ಪಿದಳು. ಇಬ್ಬರನ್ನೂ ರೂಮ್‍ನಲ್ಲಿ ಕೂಡಿ ಹಾಕಿಕೊಂಡು ಟ್ಯೂಷನ್ ಟೀಚರ್ ಪ್ಲಾಸ್ಟಿಕ್ ಪೈಪ್‍ನಿಂದ ಥಳಿಸಿದ್ದಾಳೆ ಎಂದು ಅವರ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ಸಾಯಿಬಾಬಾನ 3ನೇ ಅವತಾರ ಅಂತ ಜನರಿಗೆ ವಂಚನೆ – ನಕಲಿ ಬಾಬಾ ವಿರುದ್ಧ FIR

ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ದೆಹಲಿ ಮಹಿಳಾ ಆಯೋಗವು ಮೊದಲು ಪೊಲೀಸರಿಗೆ ನೋಟಿಸ್ ನೀಡಿತ್ತು ಮತ್ತು ಈ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಇದೊಂದು ಭಯಾನಕ ಘಟನೆಯಾಗಿದ್ದು, ಬಾಲಕಿಯರಿಗೆ ಗಾಯಗಳಾಗಿರುವುದು ತುಂಬಾ ನೋವು ತರಿಸಿದೆ. ಒಬ್ಬ ಶಿಕ್ಷಕ ಈ ಪುಟ್ಟ ಹುಡುಗಿಯರನ್ನು ಹೇಗೆ ನಿರ್ದಯವಾಗಿ ಹೊಡೆಯುತ್ತಾನೆ? ಈ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಮಿತಿಯು ಆರೋಪಿಗಳ ಬಂಧಿಸುವಂತೆ ಆಗ್ರಹಿಸಿದ್ದು, ಜೊತೆಗೆ ಎಫ್‍ಐಆರ್ ಪ್ರತಿಯನ್ನು ಸಹ ಕೇಳಿದೆ. ಸೆಪ್ಟೆಂಬರ್ 6ರೊಳಗೆ ಈ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *