ಮಕ್ಕಳಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಂದೇ ಬಿಟ್ಟ

– ಆತ್ಮಹತ್ಯೆ ಎಂದು ನಿರೂಪಿಸಲು ಪತ್ರ ಬರೆದಿದ್ದ ಪತಿ

ನವದೆಹಲಿ: ಮಕ್ಕಳಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಪತಿ ಕತ್ತು ಹಿಸುಕಿ ಸಾಯಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಮೇಘಾ ಆರ್ಯ ಹತ್ಯೆಯಾದ ದುರ್ದೈವಿ. ಕಳೆದ ವಾರ ದೆಹಲಿ ನಿವಾಸಿ ಜಸ್ವೀರ್ ಆರ್ಯ ತನ್ನ ಪತ್ನಿ ಮೇಘಾ ಆರ್ಯನನ್ನು ಬಟ್ಟೆಯಿಂದ ಕತ್ತು ಹಿಸುಕಿ ಸಾಯಿಸಿದ್ದು, ಶವಪರೀಕ್ಷೆಯಲ್ಲಿ ಈ ಪ್ರಕರಣ ಬಯಲಾಯಿದೆ. ಈ ಪರಿಣಾಮ ಜಸ್ವೀರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮೇಘಾ ಹತ್ಯೆ ನಂತರ ಜಸ್ವೀರ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಜಸ್ವೀರ್ ತನ್ನ ಹೇಳಿಕೆಯನ್ನು ಹಲವು ಬಾರಿ ಬದಲಾಯಿಸಿದ್ದ. ಕೊನೆಯಲ್ಲಿ ತನ್ನ ಹೆಂಡತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡನು. ಈ ವೇಳೆ ಜಸ್ವೀರ್, ನಮಗೆ ಮಕ್ಕಳಿರಲಿಲ್ಲ. ಅದು ಅಲ್ಲದೇ ಮೇಘಾ ದುಡಿದ ಹಣವನ್ನು ಪೋಷಕರಿಗೆ ನನ್ನ ಅನುಮತಿಯಿಲ್ಲದೇ ಕೊಡುತ್ತಿದ್ದಳು. ಅತ್ತೆ, ಮಾವ ನಮ್ಮ ಕುಟುಂಬದ ವಿಚಾರದಲ್ಲಿ ತುಂಬಾ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಪೋಕ್ಸೋ ಆರೋಪಿ ಠಾಣೆಯಿಂದ್ಲೇ ಎಸ್ಕೇಪ್ – ನಾಲ್ವರು ಪೊಲೀಸರು ಸಸ್ಪೆಂಡ್

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ದಂಪತಿ ಮಧ್ಯೆ ನಡುವೆ ಜಗಳವಾಗಿದ್ದು, ಮೇಘಾ 2ನೇ ಮಹಡಿಗೆ ರೂಮಿನಲ್ಲಿ ಮಲಗಿಕೊಳ್ಳಲು ಹೋಗಿದ್ದಾರೆ. ಈ ವೇಳೆ ಸಿಟ್ಟಿನಿಂದ ಜಸ್ವೀರ್ ಆಕೆ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲೇ ಇದ್ದ ಬಟ್ಟೆಯನ್ನು ಬಳಸಿ ಮೇಘಾ ಅವರನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ಸಾವು ಆತ್ಮಹತ್ಯೆ ಎಂದು ನಿರೂಪಿಸಲು ಪತ್ರವನ್ನು ಬರೆದಿದ್ದು, ಕೈ ಬರಹ ಕಂಡುಹಿಡಿಯುತ್ತಾರೆಂಬ ಭಯದಿಂದ ಅದನ್ನು ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧಿವಿಜ್ಞಾನ ತಂಡವು ಸುಟ್ಟ ಪತ್ರದ ಕುರುಹುಗಳನ್ನು ಸಹ ಪಡೆದುಕೊಂಡಿದೆ. ಇದನ್ನೂ ಓದಿ: ರೈತರ ಮೇಲೆ ಥಳಿತ – ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಈ ಕುರಿತು ಮೇಘಾ ತಂದೆ ಪ್ರತಿಕ್ರಿಯಿಸಿದ್ದು, ಮೊದಲು ಜಸ್ವೀರ್ ನನ್ನ ಮಗಳು ಹಾಸಿಗೆಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಹೇಳಿದ್ದ. ಆದರೆ ನನ್ನ ಮಗಳ ಮುಖದ ಮೇಲಿನ ಗಾಯವನ್ನು ನೋಡಿ ಪೊಲೀಸರಿಗೆ ದೂರು ನೀಡಿದ್ದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *